ಕಾಂತತ್ವ
ಕಾಂತತ್ವ
ಮ್ಯಾಗ್ನೆಟ್ ಎಂಬ ಪದವು ಲ್ಯಾಟಿನ್
ಭಾಷೆಯ ಮ್ಯಾಗ್ನೆಸ್ ಎಂಬ ಪದದಿಂದ ಬಂದಿದೆ
ಮ್ಯಾಗ್ನಟೈಟ್ ಅದಿರನ್ನು ನೈಸರ್ಗಿಕ
ಕಾಂತ ಎನ್ನುವರು. ಇದರ ಆಕಾರ ನಿರ್ದಿಷ್ಟವಾಗಿ ಇರುವುದಿಲ್ಲ ಹಾಗೂ ಆಕರ್ಷಣಾ ಶಕ್ತಿಯೂ ಕಡಿಮೆ
ಅಲ್ನಿಕೋ ಎಂಬುದು ಮಿಶ್ರಲೋಹದ ಕೃತಕ
ಕಾಂತವಾಗಿದ್ದು ಇದನ್ನು ಅಲ್ಯೂಮಿನಿಯಂ, ನಿಕ್ಕೆಲ್, ಕೋಬಾಲ್ಟ್ ಮತ್ತು ಕಬ್ಬಿಣಗಳನ್ನು ಸೇರಿಸಿ ಮಾಡುತ್ತಾರೆ.
ಇದಕ್ಕೆ ನಿರ್ದಿಷ್ಟ ಆಕಾರವಿದ್ದು ಆಕರ್ಷಣಾ ಶಕ್ತಿಯೂ ಹೆಚ್ಚಿರುತ್ತದೆ.
ಭೂಮಿಯೂ ಒಂದು ಕಾಂತ 🌏
ಕಾಂತತ್ವದ ಜನಕ ಬ್ರಿಟನ್ನಿನ ಭೌತವಿಜ್ಞಾನಿ ವಿಲಿಯಮ್ ಗಿಲ್ಬರ್ಟ್. ಈತ ಭೂಮಿಯೂ ಸಹ ಒಂದು ಕಾಂತ ಎಂದು
ಪ್ರತಿಪಾದಿಸಿದನು.
ಭೂಮಿಯ ಕಾಂತೀಯ ಧ್ರುವಗಳು
ಕಾಂತೀಯ ಧ್ರುವಗಳು ಸ್ಥಿರವಾಗಿರದೇ
ಭೌಗೋಳಿಕ ವೃತ್ತಗಳ ಸುತ್ತ ನಿಧಾನವಾಗಿ ತಿರುಗುತ್ತಿರುತ್ತವೆ. ಭೂಮಿಯ ಭೌಗೋಳಿಕ ಧ್ರುವಗಳಿಗೂ
ಕಾಂತೀಯ ಧ್ರುವಗಳಿಗೂ ನಡುವಿನ ಕೋನಕ್ಕೆ ಕಾಂತೀಯ ದಿಕ್ಪಾತ ಎಂಬ ಹೆಸರಿದೆ. ಇದು ಭೂಮಿಯ ಮೇಲಿನ
ವಿವಿಧ ಕಾಲ ಮತ್ತು ಸ್ಥಳಗಳಿಗೆ ಅನುಗುಣವಾಗಿ ಬದಲಾಗುತ್ತ ಇರುತ್ತದೆ. ಕಾಂತಧ್ರುವ ಭೌಗೋಳಿಕ ಧ್ರುವದಿಂದ ಸುಮಾರು 1600 ಕಿ ಮೀ ದೂರದಲ್ಲಿದೆ.
![]() |
| ಕಾಂತೀಯ ಧ್ರುವಗಳು |
ದಿಕ್ಸೂಚಿಯು ವಾಸ್ತವವಾಗಿ ಕಾಂತ
ಧ್ರುವಗಳ ದಿಕ್ಕನ್ನು ತೋರಿಸುತ್ತದೆ ಹೊರತು ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವ
ಪ್ರದೇಶಗಳನ್ನಲ್ಲ
ಪ್ರೇರಿತ
ಕಾಂತತ್ವ
ಒಂದು ಕಾಂತವು ತನ್ನ ಬಳಿಯಿರುವ ಇನ್ನೊಂದು ವಸ್ತುವಿನಲ್ಲಿ ಕಾಂತತೆಯನ್ನು ಉಂಟು ಮಾಡುವುದನ್ನು ಪ್ರೇರಿತ ಕಾಂತತ್ವ ಎನ್ನುವರು.
ಪ್ರೇರಿತ ಕಾಂತತ್ವಕ್ಕೆ ಉದಾಹರಣೆ
ಕಾಂತವೊಂದರ ಬಳಿ ಕಬ್ಬಿಣದ ಮೊಳೆಯೊಂದನ್ನು ಹಿಡಿದರೆ ಅದು ಕಾಂತದ ಆಕರ್ಷಣೆಗೆ ಒಳಗಾಗುತ್ತದೆ. ಜೊತೆಯಲ್ಲಿ ಈ ಮೊಳೆ ಇನ್ನೊಂದು ಮೊಳೆಯನ್ನು, ಆ ಇನ್ನೊಂದು ಮೊಳೆ ಮತ್ತೊಂದನ್ನು ಕೂಡ ಆಕರ್ಷಿಸಬಲ್ಲದು. ಆದರೆ ಮೊದಲನೆ ಮೊಳೆಯನ್ನು ತೆಗೆದರೆ ಸರಪಳಿ ಬಿದ್ದು ಹೋಗುತ್ತದೆ. ಇಲ್ಲಿ ಪ್ರತಿ ಮೊಳೆಯು ಪ್ರೇರಿತ ಕಾಂತದಂತೆ ವರ್ತಿಸುತ್ತದೆ. ಸರಪಳಿ ಉದ್ದವಾದಷ್ಟು ಈ ಪ್ರೇರಿತ ಕಾಂತತ್ವ ಸಾಮರ್ಥ್ಯ ಕಡಿಮೆಯಾಗುತ್ತ ಹೋಗುತ್ತದೆ.
ಕಾಂತೀಕರಣದ
ತೀವ್ರತೆ
ಕಾಂತದೊಳಗೆ ಯಾವ ಬಿಂದುವಿನಲ್ಲಿ
ಸರಾಸರಿ ಪ್ರಮಾಣದಲ್ಲಿ ಎಷ್ಟು ಪ್ರಮಾಣದ ಕಾಂತತ್ವವಿದೆ ಎಂಬುದನ್ನು ಸೂಚಿಸಲು ಕಾಂತೀಕರಣದ
ತೀವ್ರತೆ ಎಂಬ ಪದವನ್ನು ಬಳಸಲಾಗುತ್ತಿದೆ.
ವಿವಿಧ ಕಾಂತದಲ್ಲಿ ಆಕರ್ಷಣೆಯು ಬೇರೆ ಬೇರೆ ಪ್ರಮಾಣಗಳಲ್ಲಿರುತ್ತದೆ. ಧ್ರುವಗಳಲ್ಲಿ ಈ ಶಕ್ತಿ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಒಂದು ಕಾಂತದಲ್ಲಿ ಕಾಂತತ್ವವು ಎಲ್ಲ ಕಡೆಯೂ ಸಮಾನವಾಗಿ ಇರುವುದಿಲ್ಲ
ಭೂಮಿಯ ಕಾಂತಮಂಡಲ ಮತ್ತು ಅರೋರಾ
ಭೂಮಿಯ ಕಾಂತಕ್ಷೇತ್ರ ಆಕಾಶದಲ್ಲಿ
ಸುಮಾರು 80,000 ಕಿ.ಮೀ ವರೆಗೂ ಹರಡಿಕೊಂಡಿದೆ. ಈ ಪ್ರಭಾವೀ ವಲಯವನ್ನು ಕಾಂತಮಂಡಲ ಎಂದು ಕರೆಯುತ್ತಾರೆ. ಈ ಕ್ಷೇತ್ರದಲ್ಲಿ ವಿದ್ಯುದಂಶ ಹೊಂದಿರುವ ಕಣಗಳು ಇರುತ್ತವೆ. ಭೂಮಿಗೆ
ಸಮೀಪದಲ್ಲಿ ಇವುಗಳ ಸಾಂದ್ರತೆ ಹೆಚ್ಚಾಗಿರುತ್ತದೆ.
ಧ್ರುವಪ್ರಭೆ ಅಂದರೆ ಅರೋರಾ ಉಂಟಾಗಲು ಸಹ ಕಾಂತಮಂಡಲವೇ ಕಾರಣ. ಅರೋರಾ ಎಂದರೆ ಧ್ರುವಪ್ರದೇಶಗಳಲ್ಲಿ ಆಕಾಶಗಳಲ್ಲಿ ಮೂಡುವ ಬಣ್ಣದ ಚಿತ್ತಾರ.
ಕಾಂತದ ಗುಣಗಳು
ಕಾಂತದ ಎರಡು ದ್ರುವಗಳನ್ನು ಬೇರೆ
ಮಾಡಲು ಸಾಧ್ಯವಿಲ್ಲ.
ಕಾಂತದ ದೃವ ಪ್ರದೇಶಗಳಲ್ಲಿ ಮಾತ್ರ
ಆಕರ್ಷಣೆಯಿರುತ್ತದೆ ಆದರೆ ಕಾಂತದ ಮಧ್ಯಭಾಗದಲ್ಲಿ ಆಕರ್ಷಣೆ ಇರುವುದಿಲ್ಲ. ಈ ಎರಡೂ ದ್ರುವಗಳ ಆಕರ್ಷಣ ಶಕ್ತಿಯು ಸಹ ಸಮಾನವಾಗಿರುತ್ತದೆ.
ಕಾಂತದ ಉತ್ತರ ದ್ರುವವು ಭೂಮಿಯ
ದಕ್ಷಿಣ ದ್ರುವದ ಕಡೆಗೆ ಹಾಗೂ ಕಾಂತದ ದಕ್ಷಿಣ ದ್ರುವವು ಭೂಮಿಯ ಉತ್ತರ ದ್ರುವದ ಕಡೆಗೆ
ಆಕರ್ಷಿಸುತ್ತವೆ. ಪರಸ್ಪರ ವಿರುದ್ಧ ದ್ರುವಗಳನ್ನು ಆಕರ್ಷಿಸುವುದು ಕಾಂತದ ಗುಣಲಕ್ಷಣ
ವಿದ್ಯುತ್ಕಾಂತತೆ
ಒಂದು ಮೃದುವಾದ ಕಬ್ಬಿಣದ ದಂಡದ
ಸುತ್ತ ತಾಮ್ರದ ತಂತಿಯನ್ನು ಸುತ್ತಿ ಆ ತಾಮ್ರದ ತಂತಿಯ ಮೂಲಕ ವಿದ್ಯುತ್ ಹಾಯಿಸಿದಾಗ ಆ ಮೃದು
ಕಬ್ಬಿಣ ಆಯಸ್ಕಾಂತವಾಗಿ ಪರಿವರ್ತನೆ ಆಗುತ್ತದೆ. ಇದನ್ನು ವಿದ್ಯುತ್ಕಾಂತತೆ ಎನ್ನುವರು.
ಕಬ್ಬಿಣವು ಕಾಂತಗುಣ ಹೊಂದುವುದಕ್ಕೆ
ಕಾರಣ ಅದರಲ್ಲಿನ ಎಲೆಕ್ಟ್ರಾನ್‌ಗಳು ಒಂದೇ ದಿಕ್ಕಿನಲ್ಲಿ ಚಲಿಸುವುದು.ಇದನ್ನು ಪ್ರತಿಪಾದಿಸಿದವನು
ಹಾನ್ಸ್ ಕ್ರಿಶ್ಚಿಯನ್ ಅಸ್ಟೆರ್ಡ್.
ಕಾಂತೀಯ
ಬಲಕ್ಷೇತ್ರ ಮತ್ತು ಕಾಂತೀಯ ರೇಖೆ
ಮೈಕಲ್ ಫ್ಯಾರಡೇ ಕಾಂತೀಯ ಬಲಕ್ಷೇತ್ರ
ಮತ್ತು ಕಾಂತೀಯ ರೇಖೆಗಳ ಬಗ್ಗೆ ವಿವರಿಸಿದ ಮೊದಲ ವಿಜ್ಞಾನಿ.
ಟೆಲಿಪೋನ್, ವಿದ್ಯುತ್ ದೀಪ, ರೇಡಿಯೋ ಮುಂತಾದ ಉಪಕರಣಗಳ
ತಯಾರಿಕೆಯಲ್ಲಿ ಕಾಂತೀಯ ಬಲಕ್ಷೇತ್ರ ಮತ್ತು ಕಾಂತೀಯ ರೇಖೆಗಳನ್ನು ಬಳಸಲಾಗುತ್ತದೆ.
ಕೂಲಂಬ್‌ನ
ನಿಯಮ
ಕಾಂತಕ್ಷೇತ್ರವನ್ನು ಅಳೆಯಲು ಮತ್ತು ಧ್ರುವ ಸಾಮರ್ಥ್ಯವನ್ನು ಅಳೆಯಲು ಕೂಲಂಬ್‌ನ ನಿಯಮ
ಬಳಸುತ್ತಾರೆ. ಕೂಲಂಬ್‌ನ ನಿಯಮದ ಪ್ರಕಾರ ಎರಡು ಕಾಂತ ಧ್ರುವಗಳು ಪರಸ್ಪರ ಆಕರ್ಷಿಸುವ ಅಥವಾ
ವಿಕರ್ಷಿಸುವ ಬಲದ ಪ್ರಮಾಣವು ಆ ಧ್ರುವ ಸಾಮರ್ಥ್ಯಗಳ ಗುಣಲಬ್ಧದ ಸಮಾನ ಅನುಪಾತದಲ್ಲಿಯೂ ಅವುಗಳ
ನಡುವಿನ ದೂರದ ವರ್ಗದ ವಿಲೋಮ ಅನುಪಾತದಲ್ಲಿಯೂ ಇರುತ್ತದೆ.
ಕಾಂತಾಂತರ /
ಕಾಂತೀಯ ಉದ್ದ
ದಂಡಕಾಂತದಲ್ಲಿ ಸಾಮಾನ್ಯವಾಗಿ
ಧ್ರುವಗಳು ದಂಡದ ಮಧ್ಯ ಬಿಂದುವಿನಿಂದ ಒಂದು ನಿರ್ದಿಷ್ಟ ಅಂತರದಲ್ಲಿರುತ್ತವೆ. ಈ ದೂರವನ್ನು
ಕಾಂತಾಂತರ ಅಥವಾ ಕಾಂತೀಯ ಉದ್ದ ಎಂದು ಕರೆಯುತ್ತಾರೆ.
ಕಾಂತಕ್ಷೇತ್ರದ ಒಂದು ಬಿಂದುವಿನಲ್ಲಿ
ಕ್ಷೇತ್ರ ಸಾಮರ್ಥ್ಯ ಎಷ್ಟೆಂದು ಅಳೆಯಲು ಬಳಸುವ ಏಕಮಾನವನ್ನು ಆರ್ಸ್ಟೆಡ್ ಎನ್ನುವರು.
ಕಾಂತಗಳಲ್ಲಿ 3 ವಿಧ
ಡಯಾ ಕಾಂತೀಯ ವಸ್ತುಗಳು: ಪ್ರಬಲವಾದ ಕಾಂತಕ್ಷೇತ್ರದಲ್ಲಿ ಇದ್ದಾಗ ಮಾತ್ರ ಕಾಂತದ ಗುಣ ಪ್ರದರ್ಶಿಸಿ ಆ ಕ್ಷೇತ್ರದಿಂದ
ಹೊರಬಂದ ಕೂಡಲೆ ಮತ್ತೆ ಮೊದಲಿನಂತೆ ಆಗುತ್ತವೆ. ಇವುಗಳನ್ನು ತಗ್ಗು ಕಾಂತೀಯ ವಸ್ತುಗಳೆಂದು ಮತ್ತು
ಅಡ್ಡ (ಲಂಬ) ಕಾಂತೀಯ ವಸ್ತುಗಳೆಂದು ಕರೆಯುವರು ಉದಾ - ಆ್ಯಂಟಿಮನಿ, ಬಿಸ್ಮತ್, ಬೆಂಜಿನ್, ಜಲಜನಕ, ಚಿನ್ನ, ಕ್ಯಾಡ್ಮಿಯಂ ಇತ್ಯಾದಿ
ಪ್ಯಾರಾಕಾಂತೀಯ ವಸ್ತುಗಳು: ಗುಣದಲ್ಲಿ ಡಯಾಕಾಂತೀಯ ವಸ್ತುಗಳನ್ನೇ ಹೋಲುತ್ತವೆ. ಆದರೆ ಅವುಗಳಿಗಿಂತ ಸ್ವಲ್ಪ ಹೆಚ್ಚಿನ
ಪ್ರಮಾಣದ ಕಾಂತಶಕ್ತಿಯನ್ನು ಪ್ರದರ್ಶಿಸುತ್ತವೆ. ಇವುಗಳನ್ನು ಉಬ್ಬು ಕಾಂತೀಯ ವಸ್ತುಗಳೆಂದು
ಮತ್ತು ಸಮಾನ ಕಾಂತೀಯ ವಸ್ತುಗಳೆಂದು ಕರೆಯುವರು ಉದಾ: ಅಲ್ಯೂಮಿನಿಯಂ, ಪ್ಲಾಟಿನಮ್, ಕ್ರೋಮಿಯಂ ಇತ್ಯಾದಿ
ಫೆರೋ ಕಾಂತೀಯ ವಸ್ತುಗಳು: ಒಮ್ಮೆ ಪ್ರಬಲ ಕಾಂತಕ್ಷೇತ್ರದಲ್ಲಿಟ್ಟರೆ ಸಾಕು ಶಾಶ್ವತವಾಗಿ ಕಾಂತಗಳಾಗಿ ಹೋಗುತ್ತವೆ.
ಇವುಗಳನ್ನೇ ಕೃತಕ ಕಾಂತಗಳೆನ್ನುತ್ತಾರೆ. ಕೋಬಾಲ್ಟನ್ನು ಕೃತಕ ಕಾಂತದ ತಯಾರಿಕೆಯಲ್ಲಿ ಹೆಚ್ಚಾಗಿ
ಬಳಸುತ್ತಾರೆ. ಇವುಗಳನ್ನು ಸಹ ಉಬ್ಬು ಕಾಂತೀಯ ವಸ್ತುಗಳೆಂದು ಮತ್ತು ಸಮಾನ ಕಾಂತೀಯ ವಸ್ತುಗಳೆಂದು
ಕರೆಯುವರು.
ಫೆರೊಕಾಂತೀಯ ಅಣುಗಳು ಬದಲಾದ
ಕಾಂತಕ್ಷೇತ್ರದಲ್ಲಿ ಕಂಪಿಸುತ್ತವೆ ಇದನ್ನು ಕಾಂತಿಯ ಕಂಪನ ಎನ್ನುವರು
ಫೆರೊಕಾಂತಗಳಿಗೆ ನೀಡುವ
ಉಷ್ಣತೆಯನ್ನು ಕ್ಯೂರಿ ಬಿಂದು ಎನ್ನುವರು.
ಕಾಂತೀಯ ಲೋಹಗಳನ್ನು ಬೆಂಕಿಯಲ್ಲಿ
ಕಾಯಿಸಿದಾಗ ಮತ್ತು ಅವಕ್ಕೆ ಬಲವಾದ ಹೊಡೆತ ಬಿದ್ದಾಗ ಅವುಗಳಲ್ಲಿನ ಅಣುಗಳ ವಿಚಲನೆಯಿಂದ ಕಾಂತದ
ಗುಣವನ್ನು ಕಳೆದುಕೊಳ್ಳುತ್ತವೆ.
ಡೈನಮೊ
ಯಾಂತ್ರಿಕ ಶಕ್ತಿಯನ್ನು ವಿದ್ಯುತ್
ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನವನ್ನು ಡೈನಮೊ ಎನ್ನುತ್ತಾರೆ. ವಾಹನಗಳಲ್ಲಿ ಇದನ್ನು
ಮುಖ್ಯವಾಗಿ ಬಳಸುತ್ತಾರೆ. ಈ ಡೈನಮೋ ವಿದ್ಯುತ್ ಕಾಂತೀಯ ಪ್ರೇರಣೆ ಎಂಬ ನಿಯಮದನುಸಾರ ಕೆಲಸ
ಮಾಡುತ್ತದೆ. ಇದರ ಆವಿಷ್ಕಾರಕ ಮೈಕೆಲ್ ಫ್ಯಾರಡೆ
ಡೈನಮೊ
ಉಪಯೋಗಗಳು
ವಿದ್ಯುತ್ ಶಕ್ತಿಯನ್ನು ಯಾಂತ್ರಿಕ
ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನವನ್ನು ಮೋಟರ್ ಎನ್ನುವರು. ಇದನ್ನು ಫ್ಯಾನ್, ಗಿರಣಿ, ನೀರೆತ್ತುವ ಮೋಟರ್, ಮಿಕ್ಸರ್, ವಿದ್ಯುತ್ ಕರೆಘಂಟೆ ಇತ್ಯಾದಿಗಳಲ್ಲಿ
ಬಳಸುವರು.
ದಂಡಕಾಂತವನ್ನು ಡೈನಮೊ ರಚನೆಯಲ್ಲಿ
ಬಳಸುವರು. ಲಾಳ ಕಾಂತವನ್ನು ಡಿ ಸಿ ಡೈನಮೋದಲ್ಲಿ ಬಳಸುತ್ತಾರೆ. ಸೂಜಿಕಾಂತವನ್ನು
ದಿಕ್ಸೂಚಿಗಳಲ್ಲಿ ಬಳಸುತ್ತಾರೆ.
ಎಂ.ಆರ್.ಐ ಸ್ಕ್ಯಾನ್ ಮಾಡಿ ಮೂಳೆ
ಮತ್ತು ಸ್ನಾಯುಗಳ ದೋಷವನ್ನು ಪತ್ತೆಹಚ್ಚಲು ವಿದ್ಯುತ್ ಕಾಂತಿಯ ಪರಿಣಾಮವನ್ನು ಬಳಸುತ್ತಾರೆ.






ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ