ಪೋಸ್ಟ್‌ಗಳು

ವಿಸರ್ಜನಾಂಗವ್ಯೂಹ - ಮೂತ್ರಪಿಂಡಗಳು

 ವಿಸರ್ಜನಾಂಗವ್ಯೂಹ - ಮೂತ್ರಪಿಂಡಗಳು ಮಾನವನ ದೇಹದಲ್ಲಿ ಮೂತ್ರ ಪಿಂಡಗಳು, ಪಿತ್ತಜನಕಾಂಗ, ಪಿತ್ತಕೋಶ, ದೊಡ್ಡ ಕರುಳು ಮತ್ತು ಚರ್ಮ ಈ ಅಂಗಗಳು ವಿಸರ್ಜನಾ ವ್ಯವಸ್ಥೆಯ ಭಾಗವಾಗಿವೆ. ಜೀವಿಗಳ ದೇಹದಿಂದ ಮುಖ್ಯವಾಗಿ ಸಾರಜನಕ (ನೈಟ್ರೋಜನ್) ,  ಅಮೋನಿಯಾ ,  ಯೂರಿಯಾ ಮತ್ತು ಯೂರಿಕ್ ಆಮ್ಲಗಳು ವಿಸರ್ಜನೆಯಾಗುತ್ತವೆ. ಅಮೆನೋಟೆಲಿಕ್ ಪ್ರಾಣಿಗಳು  : ಈ ಪ್ರಾಣಿಗಳು ವಿಸರ್ಜಿಸುವ ತ್ಯಾಜ್ಯದಲ್ಲಿ ಅಮೋನಿಯಾ ಆಮ್ಲ ಅಧಿಕ ಪ್ರಮಾಣದಲ್ಲಿರುತ್ತದೆ. ಮೂಳೆಯುಕ್ತ ಪ್ರಾಣಿಗಳು, ಉಭಯವಾಸಿಗಳ ಮರಿಗಳು, ಅಕಶೇರುಕಗಳು ಮುಂತಾದವು ಯೂರಿಯಾಟೆಲಿಕ ಪ್ರಾಣಿಗಳು  : ಈ ಪ್ರಾಣಿಗಳು ವಿಸರ್ಜಿಸುವ ತ್ಯಾಜ್ಯದಲ್ಲಿ ಯೂರಿಯಾ ಅಧಿಕ ಪ್ರಮಾಣದಲ್ಲಿರುತ್ತದೆ. ಮೃದ್ವಂಗಿಗಳು ,  ವಯಸ್ಕ ಉಭಯವಾಸಿಗಳು (ನೀರು ಮತ್ತು ನೆಲ ಎರಡರಲ್ಲೂ ವಾಸಿಸುವ ಜೀವಿಗಳು) ,  ಮತ್ತು ಸಸ್ತನಿಗಳು (ಮರಿಗಳಿಗೆ ಹಾಲುಣಿಸುವ ಜೀವಿಗಳು) ಮುಂತಾದವು. ಯೂರಿಕೋಟೆಲಿಕ್ ಪ್ರಾಣಿಗಳು  : ಈ ಪ್ರಾಣಿಗಳು ವಿಸರ್ಜಿಸುವ ತ್ಯಾಜ್ಯದಲ್ಲಿ ಯೂರಿಕ್ ಆಮ್ಲ ಅಧಿಕ ಪ್ರಮಾಣದಲ್ಲಿರುತ್ತದೆ. ಸರಿಸೃಪಗಳು (ಕಾಲುಗಳಿಲ್ಲದ ಜೀವಿಗಳು- ಹಾವುಗಳು) ,  ಮತ್ತು ಪಕ್ಷಿಗಳು ಮುಂತಾದವು. ಮಾನವನ ವಿಸರ್ಜನಾ ವ್ಯವಸ್ಥೆ ಮಾನವನ ದೇಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಲ್ಲಿ ಯೂರಿಯಾ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅಮೋನಿಯಾ ,  ಯೂರಿಕ್ ಆಮ್ಲ ಕ್ರೆಟನಿನ್ ಅಂಶಗಳು ಸಹ...

ಜೀರ್ಣಾಂಗ ವ್ಯೂಹ

 ಜೀರ್ಣಾಂಗ ವ್ಯೂಹ ಮಾನವ ಜೀರ್ಣಾಂಗ ವ್ಯವಸ್ಥೆ ಮಾನವನ ಜೀರ್ಣಾಂಗ ವ್ಯವಸ್ತೆಯು ಸುಮಾರು 30 ಅಡಿ (9 ಮೀಟರ್) ಉದ್ದವಾಗಿದೆ. ಇಲ್ಲಿ ಜೀರ್ಣಕ್ರಿಯೆಯು ಒಂದೇ ರೀತಿಯಾಗಿ ನಡೆಯುವುದಿಲ್ಲ ಪ್ರತಿ ಹಂತದಲ್ಲೂ ಜೀರ್ಣಕ್ರಿಯೆ ಭಿನ್ನವಾಗಿರುತ್ತದೆ. ಬಾಯಿ ಬಾಯಿಯಲ್ಲಿ ಹಲ್ಲುಗಳು ಆಹಾರವನ್ನು ಚೆನ್ನಾಗಿ ಅಗಿದು ಆಹಾರವನ್ನು ಚಿಕ್ಕ ಕಣಗಳಾಗಿ ಒಡೆಯುತ್ತವೆ. ಹಲ್ಲುಗಳು ಡೆಂಟಿನ್ ಎಂಬ ವಸ್ತುವಿನಿಂದಾಗಿವೆ. ಅಲ್ಲದೇ ಹಲ್ಲುಗಳ ಮೇಲೆ ಎನಾಮೆಲ್ ಎಂಬ ಹೊದಿಕೆಯಿದ್ದು ಇದು ಮಾನವ ದೇಹದಲ್ಲಿಯೇ ಅತ್ಯಂತ ಕಠಿಣವಾದ    ವಸ್ತುವಾಗಿದೆ. ಬಾಯಿಯಲ್ಲಿ ಉತ್ಪತ್ತಿಯಾಗುವ ಜೊಲ್ಲಿನಲ್ಲಿ ಎಮಿಲೇಸ್ ಎಂಬ ಕಿಣ್ವವಿರುತ್ತದೆ. ಇದು ಆಹಾರದಲ್ಲಿರುವ ಪಿಷ್ಟ ಪದಾರ್ಥಗಳು (ಕಾರ್ಬೋ ಹೈಡ್ರೇಟ್ಸ್) ಒಡೆದು ಸಣ್ಣ ಕಣಗಳಾಗಲು ಸಹಾಯ ಮಾಡುತ್ತದೆ. ಬಾಯಿಯಲ್ಲಿ ಈ ಕಾರ್ಬೋಹೈಡ್ರೇಟ್ ಗಳು ಒಡೆದು ಸಕ್ಕರೆ ಗಳಾಗಿ (ಮಾಲ್ಟೋಸ್) ಒಡೆಯುವ ಮೂಲಕ ಜೀರ್ಣಕ್ರಿಯೆ ಆರಂಭವಾಗುತ್ತದೆ. ಲಾಲಾರಸವು ಕ್ಷಾರಗುಣವುಳ್ಳ ಪದಾರ್ಥವಾಗಿದ್ದು ಆಹಾರದಲ್ಲಿ ಆಮ್ಲ ಪದಾರ್ಥಗಳಿದ್ದರೆ ಅವುಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಬಾಯಿಯಲ್ಲಿ ಪ್ಯಾರೋಟಿಡ್ ,  ಸಬ್ ಮ್ಯಾಂಡಿಬ್ಯುಲರ್ ಮತ್ತು ಸಬ್ ಲಿಂಗ್ವಿಯಲ್ ಎಂಬ 3 ಮುಖ್ಯ ಗ್ರಂಥಿಗಳಿವೆ. ಇವುಗಳಲ್ಲಿ ಪ್ರಾರೋಟಿಡ್ ಅತಿದೊಡ್ಡ ಗ್ರಂಥಿ. ಈ ಮೂರೂ ಗ್ರಂಥಿಗಳು ಲಾಲಾರಸವನ್ನು ಉತ್ಪಾದಿಸಿ ಆಹಾರವನ್ನು ಜೀರ್ಣಗೊಳಿಸಲು ,  ಹಲ್ಲು ಮತ್ತು ಬಾಯಿಯ ...

ನ್ಯೂಕ್ಲಿಕ್ ಆಮ್ಲಗಳು

 ನ್ಯೂಕ್ಲಿಕ್ ಆಮ್ಲಗಳು ನ್ಯೂಕ್ಲಿಕ್ ಆಮ್ಲಗಳನ್ನು ಕಂಡುಹಿಡಿದವನು ಫ್ರೆಡರಿಕ್ ಮಿಶ್ಚರ್. ಇದರಲ್ಲಿ ಡಿ.ಎನ್.ಎ ಮತ್ತು ಆರ್.ಎನ್.ಎ ಎಂಬ  2  ವಿಧಗಳಿವೆ. ನ್ಯೂಕ್ಲಿಕ್ ಆಮ್ಲಗಳಲ್ಲಿ ನ್ಯೂಕ್ಲಿಯೋಟೈಡ್‍ ಗಳು ಕಂಡುಬರುತ್ತವೆ. ನ್ಯೂಕ್ಲಿಯೋಟೈಡ್‍ನಲ್ಲಿ ಫಾಸ್ಪೇಟ್ ಗುಂಪು ,  ಶರ್ಕರ ಮತ್ತು ಸಾರಜನಕದ ಕ್ಷಾರಗಳು (ಪ್ರತ್ಯಾಮ್ಲ) ಕಂಡುಬರುತ್ತವೆ. ಈ ಶರ್ಕರಗಳಲ್ಲಿ ರೈಬೋಸ್ ಶರ್ಕರ ಮತ್ತು ಡಿ ಆಕ್ಸಿ ರೈಬೋಸ್ ಶರ್ಕರ ಎಂಬ  2  ವಿಧಗಳಿವೆ. ರೈಬೋಸ್ ಶರ್ಕರವು ಆರ್.ಎನ್.ಎ ನಲ್ಲಿ ಕಂಡುಬಂದರೆ ಡಿ ಆಕ್ಸಿ ರೈಬೋಸ್ ಶರ್ಕರವು ಡಿ.ಎನ್.ಎ ನಲ್ಲಿ ಕಂಡುಬರುತ್ತವೆ. ಫಾಸ್ಪೇಟ್ ಗುಂಪು ಆರ್.ಎನ್.ಎ ಮತ್ತು ಡಿ.ಎನ್.ಎ ಗಳೆರೆಡರಲ್ಲೂ ಕಂಡುಬರುತ್ತದೆ.. ಇದರ ಅಣೂಸೂತ್ರ  H3PO4 ಸಾರಜನಕದ ಕ್ಷಾರಗಳು 5 ವಿಧಗಳಲ್ಲಿ ಕಂಡುಬರುತ್ತವೆ. ಅವು ಅಡಿನಿನ್, ಗ್ವಾನಿನ್, ಸೈಟೋಸಿನ್, ಥೈಮಿನ್ ಮತ್ತು ಯೂರಾಸಿಲ್. ನ್ಯೂಕ್ಲಿಯಿಕ್ ಆಮ್ಲವು ವಂಶವಾಹಿಗಳಲ್ಲಿರುವ ಅನುವಂಶಿಕ ಮಾಹಿತಿಯನ್ನು ಅಮಿನೊ ಆಮ್ಲಗಳ ಸರಣಿಗಳಾಗಿ (ಪ್ರೋಟೀನ್) ಪರಿವರ್ತಿಸುವ ಕೆಲಸ ಮಾಡುತ್ತವೆ. ಡಿ.ಎನ್.ಎ 1953  ರಲ್ಲಿ ಜೇಮ್ಸ್ ವ್ಯಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್ ಡಿ.ಎನ್.ಎ ರಚನೆಯನ್ನು ಕಂಡುಹಿಡಿದರು. ಈ ಡಿ.ಎನ್.ಎ ಯು ಕೋಶಕೇಂದ್ರದ ಒಳಗೆ ಕೋಶೀಯ ಕೇಂದ್ರದ ಸುತ್ತಲೂ ಇರುತ್ತದೆ. ಒಂದು ಜೀವಿಯ ದೈಹಿಕ ರಚನೆ ,  ಗುಣಾವಗುಣಗಳು ಎಲ್ಲವೂ ಈ ಡಿ.ಎನ...

ಪರಮಾಣು ಮತ್ತು ಅಣು

 ಪರಮಾಣು ಮತ್ತು ಅಣು  ಪರಮಾಣು  ಮಧ್ಯದಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳು ಇದ್ದು ಸುತ್ತಲೂ ಎಲೆಕ್ಟ್ರಾನ್ ಗಳು ಸುತ್ತುತ್ತಿವೆ.  ಈ ಪರಮಾಣುಗಳು ,  ಅಣುಗಳು ಮತ್ತು ಅಯಾನುಗಳನ್ನು ಉಂಟುಮಾಡುತ್ತವೆ. ಪರಮಾಣು ರಚನಾ ಸಿದ್ದಾಂತಗಳು ಡಾಲ್ಟನ್ ಸಿದ್ದಾಂತ ಜಾನ್ ಡಾಲ್ಟನ್ ಎಂಬ ವಿಜ್ಞಾನಿ 1803 ರಲ್ಲಿ ಪರಮಾಣು ಸಿದ್ದಾಂತವನ್ನು ಮೊದಲ ಬಾರಿಗೆ ಮಂಡಿಸಿದನು. ಪರಮಾಣುಗಳು ವಿಭಜಿಸಲಾಗದ ಪದಾರ್ಥಗಳು ಪರಮಾಣುಗಳು ಅವುಗಳ ಧಾತುಗಳ ಗುಣಲಕ್ಷಣಗಳನ್ನೇ ಹೊಂದಿರುತ್ತವೆ. ಒಂದು ಧಾತುವಿನ ಪರಮಾಣುಗಳನ್ನು ಇನ್ನೊಂದು ಧಾತುವಿನ ಪರಮಾಣುಗಳಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಬೇರೆ ಬೇರೆ ಪರಮಾಣುಗಳ ಧಾತುಗಳು ನಿರ್ದಿಷ್ಟ ಅನುಪಾತದಲ್ಲಿ ಸೇರಿ ಸಂಯುಕ್ತಗಳಾಗುತ್ತವೆ.  ಜಲಜನಕದ (ಹೈಡ್ರೋಜನ್)   2  ಅಣುಗಳು ಮತ್ತು ಆಮ್ಲಜನಕದ (ಆಕ್ಸಿಜನ್) 1 ಅಣು ಸೇರಿ ನೀರು ಎಂಬ ಸಂಯುಕ್ತ ಉಂಟಾಗುತ್ತದೆ ಇಂಗಾಲದ 1 ಅಣು ಮತ್ತು ಆಮ್ಲಜನಕದ (ಆಕ್ಸಿಜನ್) 2 ಅಣು ಸೇರಿ ಇಂಗಾಲದ ಡೈ ಆಕ್ಸೈಡ್ ಎಂಬ ಸಂಯುಕ್ತ ಉಂಟಾಗುತ್ತದೆ. ಥಾಮ್ಸನ್ ಪರಮಾಣು ರಚನೆಯ ಮಾದರಿಯನ್ನು ಪ್ರಸ್ತಾಪಿಸಿದ ಮೊದಲ ವ್ಯಕ್ತಿ ಸಹ ಆಗಿದ್ದಾನೆ. ಆದರೆ ಈ ವಾದವು ಅಷ್ಟು ಸಮಂಜಸವಾಗಿರಲಿಲ್ಲ. ಪರಮಾಣುವಿನ ಬೀಜಕೇಂದ್ರ ಮಾದರಿ ಸಿದ್ದಾಂತ ರುದರ್ ಫೋರ್ಡ್ ಪರಮಾಣು ರಚನೆಯ ಸರಿಯಾದ ಮಾದರಿಯನ್ನು ವಿವರಿಸಿ ಪರಮಾಣು ಬೀಜಕೇಂದ್ರ ಮಾದರಿಯನ್ನು ಪ್ರತಿಪಾದಿಸಿದನು ಈ ಸ...