ವಿಸರ್ಜನಾಂಗವ್ಯೂಹ - ಮೂತ್ರಪಿಂಡಗಳು

 ವಿಸರ್ಜನಾಂಗವ್ಯೂಹ - ಮೂತ್ರಪಿಂಡಗಳು

ಮಾನವನ ದೇಹದಲ್ಲಿ ಮೂತ್ರ ಪಿಂಡಗಳು, ಪಿತ್ತಜನಕಾಂಗ, ಪಿತ್ತಕೋಶ, ದೊಡ್ಡ ಕರುಳು ಮತ್ತು ಚರ್ಮ ಈ ಅಂಗಗಳು ವಿಸರ್ಜನಾ ವ್ಯವಸ್ಥೆಯ ಭಾಗವಾಗಿವೆ.

ಜೀವಿಗಳ ದೇಹದಿಂದ ಮುಖ್ಯವಾಗಿ ಸಾರಜನಕ (ನೈಟ್ರೋಜನ್)ಅಮೋನಿಯಾಯೂರಿಯಾ ಮತ್ತು ಯೂರಿಕ್ ಆಮ್ಲಗಳು ವಿಸರ್ಜನೆಯಾಗುತ್ತವೆ.

ಅಮೆನೋಟೆಲಿಕ್ ಪ್ರಾಣಿಗಳು : ಈ ಪ್ರಾಣಿಗಳು ವಿಸರ್ಜಿಸುವ ತ್ಯಾಜ್ಯದಲ್ಲಿ ಅಮೋನಿಯಾ ಆಮ್ಲ ಅಧಿಕ ಪ್ರಮಾಣದಲ್ಲಿರುತ್ತದೆ. ಮೂಳೆಯುಕ್ತ ಪ್ರಾಣಿಗಳು, ಉಭಯವಾಸಿಗಳ ಮರಿಗಳು, ಅಕಶೇರುಕಗಳು ಮುಂತಾದವು

ಯೂರಿಯಾಟೆಲಿಕ ಪ್ರಾಣಿಗಳು : ಈ ಪ್ರಾಣಿಗಳು ವಿಸರ್ಜಿಸುವ ತ್ಯಾಜ್ಯದಲ್ಲಿ ಯೂರಿಯಾ ಅಧಿಕ ಪ್ರಮಾಣದಲ್ಲಿರುತ್ತದೆ. ಮೃದ್ವಂಗಿಗಳುವಯಸ್ಕ ಉಭಯವಾಸಿಗಳು (ನೀರು ಮತ್ತು ನೆಲ ಎರಡರಲ್ಲೂ ವಾಸಿಸುವ ಜೀವಿಗಳು)ಮತ್ತು ಸಸ್ತನಿಗಳು (ಮರಿಗಳಿಗೆ ಹಾಲುಣಿಸುವ ಜೀವಿಗಳು) ಮುಂತಾದವು.

ಯೂರಿಕೋಟೆಲಿಕ್ ಪ್ರಾಣಿಗಳು : ಈ ಪ್ರಾಣಿಗಳು ವಿಸರ್ಜಿಸುವ ತ್ಯಾಜ್ಯದಲ್ಲಿ ಯೂರಿಕ್ ಆಮ್ಲ ಅಧಿಕ ಪ್ರಮಾಣದಲ್ಲಿರುತ್ತದೆ. ಸರಿಸೃಪಗಳು (ಕಾಲುಗಳಿಲ್ಲದ ಜೀವಿಗಳು- ಹಾವುಗಳು)ಮತ್ತು ಪಕ್ಷಿಗಳು ಮುಂತಾದವು.

ಮಾನವನ ವಿಸರ್ಜನಾ ವ್ಯವಸ್ಥೆ

ಮಾನವನ ದೇಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಲ್ಲಿ ಯೂರಿಯಾ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅಮೋನಿಯಾಯೂರಿಕ್ ಆಮ್ಲ ಕ್ರೆಟನಿನ್ ಅಂಶಗಳು ಸಹ ಇದ್ದು ಇವುಗಳಲ್ಲಿ ಕ್ರೆಟನಿನ್ ಕಡಿಮೆ ಪ್ರಮಾಣದಲ್ಲಿರುತ್ತದೆ.

ಮಾನವನಲ್ಲಿ ಯೂರಿಯಾದ ಉತ್ಪಾದನೆ ಅರ್ನಿಥೀನ್ ಕ್ರಿಯೆಯ ಮೂಲಕ ಉಂಟಾಗುತ್ತದೆ.

ಮೂತ್ರಪಿಂಡಗಳು

ವಯಸ್ಕ ಗಂಡಸಿನ ಒಂದು ಮೂತ್ರಪಿಂಡದ ತೂಕ ಸುಮಾರು 125ರಿಂದ 170 ಗ್ರಾಂಹೆಂಗಸರದು 115 ರಿಂದ 155 ಗ್ರಾಂ. ಮೂತ್ರಪಿಂಡಗಳು ಪ್ರಮುಖವಾಗಿ 2 ಭಾಗಗಳಿಂದಾಗಿವೆ. ಮೂತ್ರಪಿಂಡದ ಹೊರಗಿನ ಕವಚ ಭಾಗವಾದ ಕಾರ್ಟೆಕ್ಸ್ (ತೊಗಟೆ) ಮತ್ತು ಒಳಭಾಗವಾದ ಮೆಡುಲಾ. ಕಾರ್ಟೆಕ್ಸ್ ಮೆಡುಲಾ ಸುತ್ತಲೂ ಚಾಚಿಕೊಂಡಿವೆ.

ಮೂತ್ರಪಿಂಡದ ಅತ್ಯಂತ ಹೊರಗಿನ ರಕ್ಷಣಾ ಕವಚವನ್ನು ಫೈಬ್ರೋಸ್ ಕ್ಯಾಪ್ಸೂಲ್ ಎನ್ನುವರು

ಮೂತ್ರಪಿಂಡಗಳ ಮೇಲೆ ಅಡ್ರಿನಲಿನ್ ಗ್ರಂಥಿಗಳು ಕಂಡುಬರುತ್ತವೆ.

ಮೂತ್ರಪಿಂಡಗಳ ಒಳಗೆ ನೆಫ್ರಾನ್ ಗಳೆಂಬ ಸೂಕ್ಷ್ಮ ರಚನೆಗಳಿರುತ್ತವೆ. ಇವು ಮೂತ್ರ ಉತ್ಪಾದಿಸುವ ಅಂಗಗಳಾಗಿವೆ. ಇವುಗಳಿಗೆ ಸೋಂಕು ತಗುಲಿದಾಗ ನೆಫ್ರೈಟಿಸ್ ಎಂಬ ರೋಗ ಬರುತ್ತದೆ.

ಮೂತ್ರಪಿಂಡಗಳು ವಿಫಲವಾಗಿ ಉಂಟಾಗಿರುವ ಕಾಯಿಲೆಯನ್ನು ಯೂರೇಮಿಯಾ ಎನ್ನುವರು.

ಮೂತ್ರ ವಿಸರ್ಜನಾ ವ್ಯವಸ್ಥೆಯಲ್ಲಿ ಏನಾದರೂ ದೋಷವುಂಟಾದಾಗ ಮೂತ್ರಪಿಂಡಗಳೊಳಗೆ ಕ್ಯಾಲ್ಷಿಯಂ ಆಕ್ಸಲೇಟ್ ಉಂಟಾಗಿ ಅದು ಹರಳುಗಳಾಗಿ ರೂಪುಗೊಳ್ಳುತ್ತವೆ. ಈ ಹರಳುಗಳಿಗೆ ರೀನಲ್ ಕ್ಯಾಲುಕುಲೈ ಎನ್ನುವರು. ಈ ಹರಳುಗಳನ್ನು ಒಡೆದು ಹೊರತೆಗೆಯಲು ಲಿಥೋಟ್ರಿಪ್ಸಿ ವಿಧಾನ ಬಳಸುವರು.

ಯೂರಿಯಾ ಮತ್ತು ಯೂರಿಕಾಮ್ಲಗಳು

ಮಾನವನು ಸೇವಿಸಿದ ಪ್ರೋಟಿನ್ಸ್ ಸಂರ್ಪೂಣವಾಗಿ ಜೀರ್ಣವಾದಾಗ ಸರಳ ಕಣಗಳಾದ ಅಮಿನೋ ಆಮ್ಲಗಳಾಗಿ ಪರಿವರ್ತಿಸಲ್ಪಡುತ್ತವೆ. ನಂತರ ಈ ಅಮಿನೋ ಆಮ್ಲಗಳು ರಕ್ತದಿಂದ ಹೀರಲ್ಪಟ್ಟು ಜೀವಕೋಶಗಳಿಗೆ ಸಾಗಿಸ್ಪಡುತ್ತವೆ. ಜೀವಕೋಶಗಳು ತಮಗೆ ಅಗತ್ಯವಿದ್ದಷ್ಟು ಅಮೀನೋ ಆಮ್ಲಗಳನ್ನು ಬಳಸಿಕೊಂಡು ಹೆಚ್ಚಾದ ಅಮೀನೋ ಆಮ್ಲಗಳನ್ನು ಬಿಟ್ಟುಬಿಡುತ್ತವೆಕಾರಣ ಜೀವಕೋಶಗಳಲ್ಲಿ ಅಮಿನೋ ಆಮ್ಲಗಳು ಅಗತ್ಯಕ್ಕೆ ಮೀರಿ ಶೇಖರಣೆ ಆದರೆ ವಿಷ ವಸ್ತುಗಳಾಗಿ ಪರಿವರ್ತನೆಯಾಗುತ್ತವೆ.

ಹೆಚ್ಚಾದ ಅಮಿನೋ ಆಮ್ಲಗಳು ರಕ್ತದ ಮೂಲಕ ಯಕೃತ್ತಿಗೆ ಸಾಗಿಸ್ಪಡುತ್ತವೆ. ಯಕೃತ್ತಿನಲ್ಲಿರುವ ಕೋಶಗಳು ಕಲವು ಕಿಣ್ವಗಳ ಮೂಲಕ ಅಮೈನೋ ಆಮ್ಲಗಳನ್ನು ಅಮೋನಿಯವಾಗಿ ಪರಿವರ್ತಿಸುತ್ತದೆ. ಅಮಿನೋ ಆಮ್ಲಗಳು ತಕ್ಷಣ ಕಾರ್ಬನ್ ಡೈ ಆಕ್ಸೇಡ್ ನೊಂದಿಗೆ ಸೇರಿ ಯೂರಿಯಾ ಮತ್ತು ಸ್ವಲ್ಪ ಪ್ರಮಾಣದ ಯೂರಿಕಾಮ್ಲವಾಗಿ ಬದಲಾಗುತ್ತವೆ. ಹೀಗೆ ಉತ್ಪತ್ತಿಯಾದ ಯೂರಿಯಾ ಮತ್ತು ಯೂರಿಕಾಮ್ಲಗಳು ರಕ್ತದಿಂದ ಮೂತ್ರ ಜನಕಾಂಗ ಮತ್ತು ಚರ್ಮಕ್ಕೆ ಸಾಗಿಸಲ್ಪಟ್ಟು ನಂತರ ದೇಹದಿಂದ ಹೊರ ಹಾಕಲ್ಪಡುತ್ತವೆ.

ಮೂತ್ರಪಿಂಡಗಳ ಕೆಲಸ

ಮೂತ್ರಪಿಂಡಗಳು ರಕ್ತದಲ್ಲಿರುವ ಕೊಳೆಯನ್ನು ಮೂತ್ರ ರೂಪದಲ್ಲಿ ವಿಸರ್ಜಿಸುವ ಕೆಲಸ ಮಾಡುತ್ತವೆ

ರಕ್ತದಲ್ಲಿ ನೀರಿನ ಅಂಶವಾಗಲಿಯಾವುದೇ ಲವಣದ ಅಂಶವಾಗಲೀ ನಿಗದಿತ ಮಟ್ಟಕ್ಕಿಂತ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೂಡಲೆ ಮೆದುಳಿಗೆ ಇದು ಸಂದೇಶ ಹೋಗುತ್ತದೆ. ಆಗ ಮೆದುಳಿನಲ್ಲಿರುವ ಪಿಟ್ಯುಟರಿ ಗ್ರಂಥಿಯು ಅಡ್ರಿನಲಿನ್ ಗ್ರಂಥಿಗಳಿಗೆ ಸಮತೋಲನ ಕಾಯ್ದುಕೊಳ್ಳಲು ಸೂಚನೆ ನೀಡುತ್ತದೆ. ರಕ್ತವನ್ನು ಸಮತೋಲನದಲ್ಲಿಡಲು ಅಡ್ರಿನಲಿನ್ ಗ್ರಂಥಿಗಳು ಹಾರ್ಮೋನ್ಸ್ ಅನ್ನು ಬಿಡುಗಡೆ ಮಾಡುತ್ತವೆ. ಈ ಮೂತ್ರಪಿಂಡಗಳು ಅಡ್ರಿನಲಿನ್ ಗ್ರಂಥಿಗಳ ಆದೇಶಕ್ಕೆ ತಕ್ಕಂತೆ ಲವಣ ಮತ್ತು ನೀರಿನ ಸಮತೋಲನ ಸರಿಹೋಗುವಂತೆ ಸೋಸುವಿಕೆಯ ಕೆಲಸ ಮಾಡುತ್ತವೆ.

ಮೂತ್ರಪಿಂಡಗಳು ಸೋಸುವಿಕೆಯಲ್ಲಿ ನೀರು, ಗ್ಲುಕೋಸ್, ಮತ್ತು ಅಮೈನೋ ಆಮ್ಲಗಳು ಹೆಚ್ಚು ಪ್ರಮಾಣದಲ್ಲಿ ಮೂತ್ರದ ಮೂಲಕ ಹೊರಹೋಗದಂತೆ ಮರುಹೀರಿಕೊಂಡು ದೇಹಕ್ಕೆ ಇವುಗಳ ಪೂರೈಕೆಯಾಗುವಂತೆ ನೊಡಿಕೊಳ್ಳುತ್ತವೆ. ಶುದ್ಧೀಕರಣಕ್ಕೆ ಬಂದ ನೀರಿನಂಶದಲ್ಲಿ ಹೆಚ್ಚಿನ ಅಂಶ ಪುನಃ ರಕ್ತಕ್ಕೆ ಸೇರಿ ನಮ್ಮ ದೇಹ ನಿರ್ಜಲೀಕರಣ ಆಗದಂತೆ ಸಮತೋಲನ ಮಾಡುವ ಕೆಲಸ ಮೂತ್ರಪಿಂಡಗಳದ್ದು.

ಮೂತ್ರಪಿಂಡಗಳು ರಕ್ತದೊತ್ತಡವನ್ನು ಕೂಡ ನಿಯಂತ್ರಿಸುತ್ತವೆ. ರಕ್ತದ ಅಯಾನು ಸಾಂದ್ರತೆಯನ್ನು ಮತ್ತು ಆಮ್ಲ ಸ್ಥಿತಿಯನ್ನು ನಿಯಂತ್ರಿಸಿ ಸಮತೋಲನವನ್ನು ಕಾಪಾಡುವುದು. ಮತ್ತು ರಕ್ತದಲ್ಲಿ ಎಲೆಕ್ಟ್ರೋಲೈಟ್ಸ್ ಎಂದು ಕರೆಯಲಾಗುವ ಅಯಾನುಗಳ ಸಮತೋಲನವನ್ನು ನಿಯಂತ್ರಿಸುವುದು ಸಹ ಮೂತ್ರಪಿಂಡಗಳ ಮುಖ್ಯ ಕಾರ್ಯ.

ಮೂತ್ರ ಪಿಂಡಗಳು ಎರಿತ್ರೊಪೊಯಿಟಿನ್ಕ್ಯಾಸಿಟ್ರಿಯಾಲ್ ಹಾರ್ಮೋನುಗಳು ಮತ್ತು ರೆನಿನ್ ಕಿಣ್ವಗಳನ್ನು ಸ್ರವಿಸುತ್ತವೆ. ಮೂತ್ರಪಿಂಡಗಳಲ್ಲಿ ರಕ್ತ ಶುದ್ಧೀಕರಣಗೊಳ್ಳುವಾಗ ಹೈಪೊಕ್ಸಿಯಾ (ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಿರುವಿಕೆ) ಸ್ಥಿತಿ ಉಂಟಾದಾಗ ಎರಿಥ್ರೋಪೊಯೆಟಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಎರಿಥ್ರೋಪೊಯೆಟಿನ್ ಮೂಳೆಯ ಮಜ್ಜೆಯಲ್ಲಿ ಎರಿಥ್ರೋಪೊಯಿಸಸ್ (ಕೆಂಪು ರಕ್ತ ಕಣಗಳ ಉತ್ಪಾದನೆ) ಉಂಟಾಗುವಂತೆ ಮಾಡುತ್ತದೆ.

ಕ್ಯಾಸಿಟ್ರಿಯಾಲ್ ಕ್ಯಾಲ್ಸಿಯಂನ್ನು ಕರುಳಿನಲ್ಲಿ ಹೀರಿಕೊಳ್ಳುವಂತೆ ಮಾಡುತ್ತದೆಮತ್ತು ಮೂತ್ರಪಿಂಡಗಳು ಫಾಸ್ಫೇಟ್ ಅಂಶವನ್ನು ಹೀರಿಕೊಳ್ಳುವಂತೆ ಮಾಡುತ್ತದೆ.

ರೆನಿನ್ ಕಿಣ್ವಗಳು ಆಂಜಿಯೋಟೆನ್ಸಿನೊಜೆನ್ ಎಂಬ ಪ್ರೊಟೀನ್ ನಂತೆ ಕೆಲಸ ಮಾಡುತ್ತವೆ.ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಿಸಲು ಕಿಡ್ನಿಗಳಿಗೆ ಸಹಾಯ ಮಾಡುತ್ತವೆ.

ಮೂತ್ರಪಿಂಡಗಳ ಹೊರಭಾಗದಲ್ಲಿರುವ ಕಾರ್ಟೆಕ್ಸ್ (ತೊಗಟೆ)ನಲ್ಲಿ ಆಲ್ಡೊಸ್ಟ್ರಿರಾನ್ ಉತ್ಪಾದನೆಯಾಗುತ್ತದೆ. ಈ ಆಲ್ಡೋಸ್ಟಿರಾನ್ ದೇಹದಲ್ಲಿರುವ ಉಪ್ಪು ಮತ್ತು ನೀರನ್ನು ಸಮತೋಲನ ಮಾಡುವ ಕೆಲಸ ಮಾಡುತ್ತದೆ.

ಮೂತ್ರಪಿಂಡಗಳಲ್ಲಿ ರಕ್ತ ಪರಿಚಲನೆ

ಹೃದಯದಿಂದ ಹೊಮ್ಮುವ ಒಟ್ಟು ರಕ್ತದ ಸರಿಸುಮಾರು 20% ನಷ್ಟು ರಕ್ತ ಮೂತ್ರಪಿಂಡಗಳಿಗೆ ಮಹಾಪಧಮನಿಯ ಮೂಲಕ ಬಂದು ಸೇರುತ್ತದೆ. ನಂತರ ಮೂತ್ರಪಿಂಡಗಳಲ್ಲಿ ಶುದ್ಧೀಕರಣಗೊಂಡ ರಕ್ತವು ಮಹಾ ಅಬಿಧಮನಿಯ ಮೂಲಕ ಹೃದಯದ ಕಡೆಗೆ ಹರಿಯುತ್ತದೆ

ಮೂತ್ರಪಿಂಡಗಳು ಮತ್ತು ನರಮಂಡಲವು ಮೂತ್ರಪಿಂಡಗಳಲ್ಲಿರುವ ಪ್ಲೆಕ್ಸಸ್ ಜಾಲ ವ್ಯವಸ್ಥೆಯ ಮೂಲಕ ಸಂವಹನ ನಡೆಸುತ್ತವೆ.

ಮೂತ್ರಪಿಂಡಗಳು ಒಂದು ದಿನಕ್ಕೆ 180 ಲೀಟರ್ ದ್ರವವನ್ನು (ರಕ್ತ) ಶೋಧಿಸುತ್ತದೆ.

ರಕ್ತ ಶುದ್ದೀಕರಿಸುವ ಬಟ್ಟಲಿನಾಕಾರದ ಅಂಗವಾದ ಗ್ಲಾಮರಸ್ ನಲ್ಲಿ ಒಂದು ನಿಮಿಷಕ್ಕೆ ಸುಮಾರು 125 ಮಿ.ಲೀ.ಗಳಷ್ಟು ರಕ್ತವು ಸೋಸಲ್ಪಡುತ್ತದೆ. ಈ ಪ್ರಕ್ರಿಯೆಯಲ್ಲಿ ಅಗತ್ಯವಿರುವಷ್ಟು ನೀರನ್ನು ಮತ್ತೆ ಹಿರಿಕೊಳ್ಳುವ ಕೆಲಸವೂ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಒಂದು ದಿನಕ್ಕೆ 1 ರಿಂದ 2 ಲೀಟರ್ ಗಳಷ್ಟು ಮೂತ್ರ ಉತ್ಪಾದನೆ ಆಗುತ್ತದೆ. ಮರು ಹೀರಿಕೆ ಆಗದಿದ್ದರೆ ರಕ್ತದ ನೀರಿನ ಪ್ರಮಾಣ ಕಡಿಮೆಯಾಗಿ ನಿರ್ಜಲ ಸ್ಥಿತಿಯಿಂದ ಸಾವು ಬರಬಹುದು.

ಮೂತ್ರದ ಮೂಲಕ ಅತಿ ಹೆಚ್ಚಿನ ನೀರಿನಂಶ ಹೊರಹೋಗದಂತೆ ಆ್ಯಂಟಿ ಡೈಯೋರೆಟಿಕ್ ಹಾರ್ಮೋನ್ (ಎ.ಡಿ.ಎಚ್) ಕೆಲಸ ಮಾಡುತ್ತದೆ. ಈ ಹಾರ್ಮೋನಿನ ಕೊರತೆ ಉಂಟಾದಾಗ ನೀರು ಹೆಚ್ಚಾಗಿ ದೇಹದಿಂದ ಹೊರಹೋಗುತ್ತದೆ. ಈ ರೋಗ ಲಕ್ಷಣವನ್ನು ಡ್ಯುರೇಸಿಸ್ ಎನ್ನುವರು. ಇದರಿಂದ ಉಂಟಾಗುವ ಕಾಯಿಲೆಯೇ ಡಯಾಬಿಟಿಸ್.

ರಕ್ತದಲ್ಲಿ ಪಿ.ಎಚ್ ಪ್ರಮಾಣ ಸಮತೋಲನವಾಗಿರಿಸಿಕೊಳ್ಳಲು ಹೈಡ್ರೋಜನ್ ಮತ್ತು ಅಮೋನಿಯಂ ಆಯಾನುಗಳು ಬಿಡುಗಡೆಯಾಗುತ್ತದೆ.

ಆಯಸ್ಸು ಮುಗಿದ ಕೆಂಪು ರಕ್ತಕಣಗಳು ಪಿತ್ತಜನಕಾಂಗ ಮತ್ತು ಗುಲ್ಮದಲ್ಲಿ ಒಡೆದಾಗ ಯೂರೋಕ್ರೋಮ್ ಆಗಿ ಬದಲಾಗುತ್ತವೆ. ಈ ಯೂರೋಕ್ರೊಮ್ ಮೂತ್ರಜನಕಾಂಗಗಳಲ್ಲಿ ಸೋಸಲ್ಪಟ್ಟು ಮೂತ್ರದ ಮೂಲಕ ಹೊರಹೋಗುತ್ತದೆ. ಮೂತ್ರವು ಕಂದು ಬಣ್ಣದಲ್ಲಿರಲು ಕಾರಣ ಈ ಯೂರೋಕ್ರೋಮ್.

ಮೂತ್ರದ ವಾಸನೆಗೆ ಕಾರಣವಾದ ರಾಸಾಯನಿಕ ಅಂಶ ಯೂರಿನಾಡ್ಸ್. ಮೂತ್ರದ ಮೂಲಕ ವಿಟಮಿನ್ ಸಿ ದೇಹದಿಂದ ವಿಸರ್ಜನೆಯಾಗುತ್ತದೆ.

ಕಾಮೆಂಟ್‌ಗಳು