ನ್ಯೂಕ್ಲಿಕ್ ಆಮ್ಲಗಳು
ನ್ಯೂಕ್ಲಿಕ್ ಆಮ್ಲಗಳು
ನ್ಯೂಕ್ಲಿಕ್ ಆಮ್ಲಗಳನ್ನು ಕಂಡುಹಿಡಿದವನು ಫ್ರೆಡರಿಕ್ ಮಿಶ್ಚರ್. ಇದರಲ್ಲಿ ಡಿ.ಎನ್.ಎ ಮತ್ತು ಆರ್.ಎನ್.ಎ ಎಂಬ 2 ವಿಧಗಳಿವೆ.
ನ್ಯೂಕ್ಲಿಕ್ ಆಮ್ಲಗಳಲ್ಲಿ ನ್ಯೂಕ್ಲಿಯೋಟೈಡ್ ಗಳು ಕಂಡುಬರುತ್ತವೆ. ನ್ಯೂಕ್ಲಿಯೋಟೈಡ್‍ನಲ್ಲಿ ಫಾಸ್ಪೇಟ್ ಗುಂಪು, ಶರ್ಕರ ಮತ್ತು ಸಾರಜನಕದ ಕ್ಷಾರಗಳು (ಪ್ರತ್ಯಾಮ್ಲ) ಕಂಡುಬರುತ್ತವೆ.
ಈ ಶರ್ಕರಗಳಲ್ಲಿ ರೈಬೋಸ್ ಶರ್ಕರ ಮತ್ತು ಡಿ ಆಕ್ಸಿ ರೈಬೋಸ್ ಶರ್ಕರ ಎಂಬ 2 ವಿಧಗಳಿವೆ. ರೈಬೋಸ್ ಶರ್ಕರವು ಆರ್.ಎನ್.ಎ ನಲ್ಲಿ ಕಂಡುಬಂದರೆ ಡಿ ಆಕ್ಸಿ ರೈಬೋಸ್ ಶರ್ಕರವು ಡಿ.ಎನ್.ಎ ನಲ್ಲಿ ಕಂಡುಬರುತ್ತವೆ.
ಫಾಸ್ಪೇಟ್ ಗುಂಪು ಆರ್.ಎನ್.ಎ ಮತ್ತು ಡಿ.ಎನ್.ಎ ಗಳೆರೆಡರಲ್ಲೂ ಕಂಡುಬರುತ್ತದೆ.. ಇದರ ಅಣೂಸೂತ್ರ H3PO4
ಸಾರಜನಕದ ಕ್ಷಾರಗಳು 5 ವಿಧಗಳಲ್ಲಿ ಕಂಡುಬರುತ್ತವೆ. ಅವು ಅಡಿನಿನ್, ಗ್ವಾನಿನ್, ಸೈಟೋಸಿನ್, ಥೈಮಿನ್ ಮತ್ತು ಯೂರಾಸಿಲ್.
ನ್ಯೂಕ್ಲಿಯಿಕ್ ಆಮ್ಲವು ವಂಶವಾಹಿಗಳಲ್ಲಿರುವ ಅನುವಂಶಿಕ ಮಾಹಿತಿಯನ್ನು ಅಮಿನೊ ಆಮ್ಲಗಳ ಸರಣಿಗಳಾಗಿ (ಪ್ರೋಟೀನ್) ಪರಿವರ್ತಿಸುವ ಕೆಲಸ ಮಾಡುತ್ತವೆ.
ಡಿ.ಎನ್.ಎ
1953 ರಲ್ಲಿ ಜೇಮ್ಸ್ ವ್ಯಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್ ಡಿ.ಎನ್.ಎ ರಚನೆಯನ್ನು ಕಂಡುಹಿಡಿದರು. ಈ ಡಿ.ಎನ್.ಎ ಯು ಕೋಶಕೇಂದ್ರದ ಒಳಗೆ ಕೋಶೀಯ ಕೇಂದ್ರದ ಸುತ್ತಲೂ ಇರುತ್ತದೆ. ಒಂದು ಜೀವಿಯ ದೈಹಿಕ ರಚನೆ, ಗುಣಾವಗುಣಗಳು ಎಲ್ಲವೂ ಈ ಡಿ.ಎನ್.ಎ ಯಲ್ಲಿ ಮಾಹಿತಿ ರೂಪದಲ್ಲಿ ಶೇಖರಣೆಯಾಗಿರುತ್ತವೆ. ಆದರಿಂದ ಡಿ.ಎನ್.ಎ ಯನ್ನು ಜೀವಿಯ ನೀಲನಕ್ಷೆ ಎನ್ನುವರು.
ಡಿ.ಎನ್.ಎ 2 ಎಳೆಗಳಿಂದ ಮಾಡಲ್ಪಟ್ಟಿದ್ದು ಈ ಎಳೆಗಳು ಅಡಿನಿನ್, ಗ್ವಾನಿನ್, ಸೈಟೋಸಿನ್, ಮತ್ತು ಥೈಮಿನ್ ಗಳಿಂದಾಗಿರುತ್ತವೆ. ಈ ಎಳೆಗಳು ಒಂದಕ್ಕೊಂದು ಜೋಡಣೆಯಾಗಿರುತ್ತವೆ. ಈ ಜೋಡಣೆಯಲ್ಲಿ ಅಡಿನಿನ್ ಮತ್ತು ಥೈಮಿನ್ ಗಳು ಪರಸ್ಪರ ವಿರುದ್ಧವಾಗಿರುತ್ತವೆ. ಹಾಗೆಯೇ ಗ್ವಾನಿನ್ ಮತ್ತು ಸೈಟೋಸಿಸ್ ಗಳು ಪರಸ್ಪರ ವಿರುದ್ಧವಾಗಿ ಜೋಡಣೆಯಾಗಿರುತ್ತವೆ.
ಈ ಎಳೆಗಳು ಹೈಡ್ರೋಜನ್ ಬಂಧದ ಮೂಲಕ ಜೋಡಣೆಯಾಗಿದ್ದು ಅಡಿನಿನ್ ಮತ್ತು ಥೈಮಿನ್ ಗಳ ಮಧ್ಯೆ 2 ಹೈಡ್ರೋಜನ್ ಬಂಧಗಳು ಹಾಗೂ ಗ್ವಾನಿನ್ ಮತ್ತು ಸೈಟೋಸಿಸ್ ಗಳ ಮಧ್ಯೆ 3 ಹೈಡ್ರೋಜನ್ ಬಂಧಗಳು ಜೋಡಣೆಯಾಗಿರುತ್ತವೆ. ಡಿ.ಎನ್.ಎ ಯ ಸುರುಳಿಯಾಕಾರದ ಆಕೃತಿಯನ್ನು ಡಬಲ್ ಹೆಲಿಕ್ಸ್ ರಚನೆ ಎನ್ನುವರು.
ಒಂದು ಡಿ.ಎನ್.ಎ ಅಣುವಿನಿಂದ ಇನ್ನೊಂದು ಡಿ.ಎನ್.ಎ ಅಣು ರಚನೆಯಾಗುವುದನ್ನು ಡುಪ್ಲಿಕೇಶನ್/ಸ್ವಪ್ರತೀಕರಣ ಎನ್ನುವರು.
ಆರ್.ಎನ್.ಎ
ಆರ್.ಎನ್.ಎ ಯು ಕೋಶಕೇಂದ್ರ ಮತ್ತು ಸೈಟೋಪ್ಲಾಸ್ಮಾಗಳಲ್ಲಿ ಕಂಡುಬರುತ್ತದೆ. ಇದು ಒಂದೇ ಎಳೆಯಿಂದ ಮಾಡಲ್ಪಟ್ಟಿರುತ್ತದೆ. ಆರ್.ಎನ್.ಎ ಯಲ್ಲಿ ಅಡಿನಿನ್, ಗ್ವಾನಿನ್, ಸೈಟೋಸಿನ್, ಮತ್ತು ಯೂರಾಸಿಲ್ ಗಳು ಇರುತ್ತವೆ.
ಒಂದು ಡಿ.ಎನ್.ಎ ಅಣುವಿನಿಂದ ಒಂದು ಆರ್.ಎನ್.ಎ ಅಣು ರಚನೆಯಾಗುವುದನ್ನು ಟ್ರಾನ್ಸ್ಕ್ರಿಪ್ಷನ್ ಎನ್ನುವರು.
ಆರ್.ಎನ್.ಎ ಇಂದ ಪ್ರೋಟೀನ್ ಉತ್ಪಾದನೆಯಾಗುವುದನ್ನು ಟ್ರಾನ್ಸ್ಲೇಷನ್ ಎನ್ನುವರು.
ಆರ್.ಎನ್.ಎ ಯ ವಿಧಗಳು
ಮೆಸೆಂಜರ್ ಆರ್.ಎನ್.ಎ (ಎಮ್ - ಆರ್.ಎನ್.ಎ) ಇದು ಒಟ್ಟು ಆರ್.ಎನ್.ಎ ಯಲ್ಲಿ 5% ಇರುತ್ತದೆ. ಅನುವಂಶಿಕ ಸರಣಿಯ ಮಾಹಿತಿಯನ್ನು ಡಿಎನ್ಎ ಮತ್ತು ರೈಬೋಸೋಮ್‌ಗಳ ನಡುವೆ ರವಾನಿಸುತ್ತದೆ.
ಟ್ರಾನ್ಸ್ಫರ್ ಆರ್.ಎನ್.ಎ (ಟಿ - ಆರ್.ಎನ್.ಎ) ಇದು ಒಟ್ಟು ಆರ್.ಎನ್.ಎ ಯಲ್ಲಿ 15% ಇರುತ್ತದೆ. ಇದು ಪ್ರೋಟಿನ್ ಸಂಯೋಜನೆಯಲ್ಲಿ ಅಮಿನೊ ಆಮ್ಲಗಳನ್ನು ಸಾಗಿಸುವ ಕೆಲಸ ಮಾಡುತ್ತದೆ
ರೈಬೋಸೋಮಲ್ ಆರ್.ಎನ್.ಎ (ಆರ್ - ಆರ್.ಎನ್.ಎ) ಇದು ಒಟ್ಟು ಆರ್.ಎನ್.ಎ ಯಲ್ಲಿ 80% ಇರುತ್ತದೆ. ರೈಬೋಸೋಮ್‌ನ ಪ್ರಮುಖ ಅಂಗ ಮತ್ತು ಪೆಪ್‌ಟೈಡ್ ಬಾಂಡ್ ರೂಪಗೊಳ್ಳುವಲ್ಲಿ ವೇಗವರ್ಧಕವಾಗಿ ಕೆಲಸ ಮಾಡುತ್ತದೆ.
ಜೆನೆಟಿಕ್ ಆರ್.ಎನ್.ಎ (ಜಿ - ಆರ್.ಎನ್.ಎ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ