ಅಲೋಹಗಳು ಮತ್ತು ಲೋಹಾಭಗಳು
ಅಲೋಹಗಳು
ಧಾತುಗಳಲ್ಲಿ ಒಟ್ಟು 19 ಅಲೋಹಗಳಿವೆ.
ಧಾತುಗಳು ಮತ್ತು ಅವುಗಳ ಸಂಕೇತಗಳು
ಅನಿಲರೂಪದ ಅಲೋಹಗಳು
ಹೈಡ್ರೊಜನ್ (H) 1
ಹೀಲಿಯಂ (He) 2
ನೈಟ್ರೊಜನ್ (N)7
ಆಕ್ಸಿಜನ್ (O) 8
ಫ್ಲೋರಿನ್ (F) 9
ನಿಯಾನ್ (Ne) 10
ಕ್ಲೋರೀನ್ (Cl) 17
ಆರ್ಗಾನ್ (Ar) 18
ಕ್ರಿಪ್ಟಾನ್ (Kr) 36
ಕ್ಸೆನಾನ್ (Xe) 54
ರೆಡಾನ್ (Ra) 86
ಘನರೂಪದ ಅಲೋಹಗಳು
ಕಾರ್ಬನ್ (C) 6
ಫಾಸ್ಫರಸ್ (P) 15
ಗಂಧಕ (S) 16
ಸೆಲಿನಿಯಂ (Se) 34
ಆಂಟಿಮನಿ (Sb) 51
ಅಯೊಡೀನ್ (I) 53
ದ್ರವರೂಪದ ಅಲೋಹ
ಬ್ರೋಮೀನ್ (Br) 35
ಲೋಹಗಳಿಗಿರುವಂತೆ ಇವಕ್ಕೆ ಹೊಳಪಾಗಲಿ, ವಿಶಿಷ್ಟವಾದ ಶಬ್ದದಾಯಕ ಗುಣವಾಗಲಿ ಇಲ್ಲ. ಆದರೆ ಅಯೋಡಿನ್ ಮತ್ತು ಕಾರ್ಬನ್ (ವಜ್ರ, ಗ್ರಾಫೈಟ್) ಹೊಳೆಯುವ ಗುಣವನ್ನು ಹೊಂದಿವೆ.
ಲೋಹಗಳೊಡನೆ ಹೋಲಿಸಿದಾಗ ಇವುಗಳ ಸಾಂದ್ರತೆ, ಕರಗುವ ಬಿಂದು (ಮೆಲ್ಟಿಂಗ್ ಪಾಯಿಂಟ್) ಮತ್ತು ಕುದಿಯುವ ಬಿಂದು (ಬಾಯಿಲಿಂಗ್ ಪಾಯಿಂಟ್) ಕಡಿಮೆ ಇರುತ್ತದೆ.
ಸಾಮಾನ್ಯವಾಗಿ ಅಲೋಹಗಳು ವಿದ್ಯುತ್ ಮತ್ತು ಉಷ್ಣಶಕ್ತಿಗಳಿಗೆ ಒಳ್ಳೆಯ ವಾಹಕಗಳಲ್ಲ. ಅವುಗಳ ಅಯಾನೀಕರಣ ವಿಭವ (ಅಯೊನೈಸೇಷನ್ ಪೊಟೆನ್ಷಿಯಲ್) ಹೆಚ್ಚು ಪ್ರಮಾಣದಲ್ಲಿರುತ್ತದೆ. ಆದರೆ ಗ್ರಾಫೈಟ್ ಒಂದು ಒಳ್ಳೆಯ ವಿದ್ಯುತ್ ವಾಹಕವಾಗಿದೆ
ಲೋಹಗಳಂತೆ ಈ ಅಲೋಹಗಳನ್ನು ತಂತಿ ಅಥವಾ ಪದರ ರೂಪವಾಗಿ ಪರಿವರ್ತಿಸುವುದು ಸುಲಭವಲ್ಲ.
ಅಮ್ಲಜನಕದೊಡನೆ ಅಲೋಹಗಳ ಮೂಲವಸ್ತುವಿನ ಪರಮಾಣು ಸಂಯೋಜಿಸಿದಾಗ ಆಕ್ಸೈಡ್ ಎಂಬ ಸಂಯುಕ್ತವಸ್ತು ಉತ್ಪನ್ನವಾಗುತ್ತದೆ. ಅಲೋಹಗಳ ಆಕ್ಸೈಡ್ಗಳು ಆಮ್ಲೀಯವಾದುವು. ಇವು ನೀಲಿ ಲಿಟ್ಮಸ್ ಕಾಗದವನ್ನು ಕೆಂಪು ಬಣ್ಣಕ್ಕೆ ತಿರುಗಿಸುತ್ತವೆ.
ವಿದ್ಯುದ್ವಿಶ್ಲೇಷಣ ಕ್ರಿಯೆಯಲ್ಲಿ ಅಲೋಹಗಳು ಧನಧ್ರುವದ ಬಳಿ (ಪಾಸಿಟಿವ್ ಕ್ಯಾಥೋಡ್) ಸಂಗ್ರವಾಗುವುದರಿಂದ ಅಲೋಹಗಳನ್ನು ವಿದ್ಯುದೃಣ (ಎಲೆಕ್ಟ್ರೋ ನೆಗೆಟಿವ್) ಎಂದು ಕರೆಯುವರು.
ಲೋಹವಾದ ಸೋಡಿಯಂ (Na) ಋಣಧ್ರುವದ (Cathode) ಬಳಿ ಸಂಗ್ರಹವಾದರೆ, ಅಲೋಹವಾದ ಕ್ಲೋರಿನ್ (Cl) ಧನಧ್ರುವದ (Anode) ಬಳಿ ಸಂಗ್ರಹವಾಗುತ್ತದೆ.
ಅಲೋಹಗಳ ಕ್ಲೋರೈಡ್ಗಳು ಸಾಮಾನ್ಯವಾಗಿ ನೀರಿನಿಂದ ಪೂರ್ಣವಾಗಿ ವಿಭಜಿತವಾಗುತ್ತವೆ (ಹೈಡ್ರೊಲೈಸ್ಡ್).
ಲೋಹಾಭಗಳು
ಲೋಹ ಮತ್ತು ಅಲೋಹಗಳೆರಡರ ಗುಣಲಕ್ಷಣಗಳನ್ನು ಹೊಂದಿರುವ ಲೋಹಾಭಗಳು ಆವರ್ತಕ ಕೋಷ್ಠಕದ ಪಿ ಬ್ಲಾಕ್ ನಲ್ಲಿ ಕಂಡುಬರುತ್ತವೆ.
ಬೋರಾನ್ (B) 5
ಸಿಲಿಕಾನ್ (Si) 14
ಜರ್ಮೇನಿಯಂ (Ge) 32
ಆರ್ಸೆನಿಕ್ (As) 37
ಆಂಟಿಮನಿ (Sb) 51
ಟೆಲ್ಲರಿಯಂ (Te) 52
ಪೊಲೋನಿಯಂ (Po) 84
ಆಸ್ಟಟಿನ್ (At) 85
ಲೋಹಾಭಗಳು ಸಾಮಾನ್ಯವಾಗಿ ನೋಡಲು ಲೋಹಗಳಂತೆ ಕಾಣುತ್ತವೆ. ಆದರೆ ಅವು ಕಠಿಣವಾಗಿದ್ದು ಉತ್ತಮ ವಿದ್ಯುತ್ ವಾಹಕಗಳಾಗಿರುತ್ತವೆ.
ರಾಸಾಯನಿಕವಾಗಿ ಅವು ಸಾಮಾನ್ಯವಾಗಿ ಅಲೋಹಗಳಂತೆ ವರ್ತಿಸುತ್ತವೆ. ಅವು ಲೋಹಗಳೊಂದಿಗೆ ಸೇರಿ ಮಿಶ್ರ ಲೋಹಗಳನ್ನು ಉಂಟುಮಾಡುತ್ತವೆ. ಇವುಗಳ ಹೆಚ್ಚಿನ ಗುಣಲಕ್ಷಣಗಳು ಲೋಹ ಮತ್ತು ಅಲೋಹಗಳ ಮಧ್ಯದ ಸ್ಥಿತಿಯನ್ನು ಅಥವಾ ಎರಡನ್ನೂ ಹೋಲುತ್ತವೆ.
ಮಿಶ್ರಲೋಹಗಳ ತಯಾರಿಕೆಯಲ್ಲಿ, ರಾಸಾಯನಿಕ ಕ್ರಿಯೆಯಲ್ಲಿ ವೇಗವರ್ಧಕಗಳಾಗಿ, ಗಾಜಿನ ತಯಾರಿಕೆಯಲ್ಲಿ, ಸೆಮಿ ಕಂಡಕ್ಟರ್ ಗಳು ಇತ್ಯಾದಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ