ಸಂಯುಕ್ತಗಳು

 ಸಂಯುಕ್ತಗಳು

ಒಂದಕ್ಕಿಂತ ಹೆಚ್ಚು ಬೇರೆ ಬೇರೆ ಪರಮಾಣುಗಳು ನಿರ್ದಿಷ್ಟ ಅನುಪಾತದಲ್ಲಿ ರಾಸಾಯನಿಕ ಸಂಯೋಗ ಹೊಂದಿ ಉಂಟಾಗಿರುವ ವಸ್ತುವಿಗೆ ಸಂಯುಕ್ತ ಎನ್ನುವರು. ಇವುಗಳನ್ನು ಸುಲಭವಾಗಿ ಬೇರ್ಪಡಿಸಲು ಸಾಧ್ಯವಿಲ್ಲ, ಪ್ರಯೋಗಾಲಯದಲ್ಲಿ ವೈಜ್ಞಾನಿಕ ವಿಧಾನಗಳ ಮೂಲಕ ಮಾತ್ರವೇ ಬೇರ್ಪಡಿಸಲು ಸಾಧ್ಯ. 

ಎರಡು ಧಾತುಗಳು ಸೇರಿ ಸಂಯುಕ್ತವಾದ ಮೇಲೆ ಆ ಎರಡೂ ಧಾತುಗಳ ಗುಣಲಕ್ಷಣಗಳು ಮಾಯವಾಗಿ ಉತ್ಪನ್ನವಾದ ಹೊಸವಸ್ತು (ಸಂಯುಕ್ತ) ಹೊಸ ಗುಣಲಕ್ಷಣಗಳನ್ನು ಹೊಂದಿರುತ್ತದೆ.

ಹೈಡ್ರೋಜನ್‍ನ 2 ಪರಮಾಣುಗಳು ಮತ್ತು ಆಕ್ಸಿಜನ್‍ನ 1 ಪರಮಾಣು ಸೇರಿ ನೀರು ಉಂಟಾಗಿದೆ. ಸ್ವಾಭಾವಿಕವಾಗಿ ನೀರು ಬೆಂಕಿಯನ್ನು ನಂದಿಸುವ ಗುಣ ಹೊಂದಿದೆ. ಆದರೆ ಪ್ರತ್ಯೇಕವಾಗಿ ಜಲಜನಕ ಬೆಂಕಿ ಹೊತ್ತಿಸುವ ಅನಿಲವಾಗಿದ್ದರೆ ಆಮ್ಲಜನಕ ಬೆಂಕಿ ಉರಿಯಲು ಸಹಾಯಕವಾದ ಗುಣವನ್ನು ಹೊಂದಿದೆ.

ಉಪ್ಪನ್ನು ಸೋಡಿಯಂ ಕ್ಲೋರೈಡ್ ಎನ್ನುವರು ಅಂದರೆ ಇದು ಸೋಡಿಯಂನ ಒಂದು ಪರಮಾಣು ಮತ್ತು ಕ್ಲೋರಿನ್‍ನ ಒಂದು ಪರಮಾಣು ಸೇರಿ ಉಪ್ಪು ಆಗುತ್ತದೆ. ಮೂಲತಃ ಸೋಡಿಯಂ ಒಂದು ಲೋಹ ಮತ್ತು ಕ್ಲೋರಿನ್‍ ವಿಷಯುಕ್ತ ವಸ್ತುವಾಗಿದೆ. ಆದರೆ ಅವೆರೆಡು ಸೇರಿ ಉಂಟಾದ ಉಪ್ಪು ನಾವು ದಿನನಿತ್ಯ ಬಳಸುವ ಅಡುಗೆ ಪದಾರ್ಥವಾಗಿದೆ.

ಸಂಯುಕ್ತಗಳು ಒಳಗೊಂಡ ಧಾತುಗಳ ಆಧಾರದ ಮೇಲೆ ಸಂಯುಕ್ತಗಳನ್ನು ಹೆಸರಿಸುತ್ತೇವೆ.

ಧಾತುಗಳ ಜೊತೆ ಆಮ್ಲಜನಕ ಪರಮಾಣುಗಳು ಸೇರಿದ್ದರೆ ಆಕ್ಸೈಡ್‌ಗಳಾಗುತ್ತವೆ.

ಮೆಗ್ನಿಶಿಯಂ + ಆಕ್ಸಿಜನ್ = ಮೆಗ್ನಿಶಿಯಂ ಆಕ್ಸೈಡ್

ಕ್ಯಾಲ್ಶಿಯಂ + ಆಕ್ಸಿಜನ್ = ಕ್ಯಾಲ್ಶಿಯಂ ಆಕ್ಸೈಡ್

ಧಾತುಗಳ ಜೊತೆ ಜಲಜನಕ ಪರಮಾಣುಗಗಳು ಸೇರಿದ್ದರೆ ಹೈಡ್ರೈಡ್‌ಗಳಾಗುತ್ತವೆ.

ಮೆಗ್ನಿಶಿಯಂ + ಹೈಡ್ರೋಜನ್ = ಮೆಗ್ನಿಶಿಯಂ ಹೈಡ್ರೈಡ್‌

ಕ್ಯಾಲ್ಶಿಯಂ + ಹೈಡ್ರೋಜನ್ = ಕ್ಯಾಲ್ಶಿಯಂ ಹೈಡ್ರೈಡ್‌

ಧಾತುಗಳ ಜೊತೆ ಆವರ್ತ ಕೋಷ್ಟಕದ 17 ನೇ ಗುಂಪಿನ ಪರಮಾಣುಗಳು ಸೇರಿದ್ದರೆ ಹ್ಯಾಲೊಜನ್ಸ್ ಆಗುತ್ತವೆ.

ಸೋಡಿಯಂ + ಫ್ಲೋರಿನ್  = ಸೋಡಿಯಂ ಫ್ಲೋರೈಡ್
ಪೊಟ್ಯಾಶಿಯಂ + ಕ್ಲೋರಿನ್ = ಪೊಟ್ಯಾಶಿಯಂ ಕ್ಲೋರೈಡ್
ಸಿಲ್ವರ್ + ಬ್ರೋಮಿನ್ = ಸಿಲ್ವರ್ ಬ್ರೋಮೈಡ್
ಅಲ್ಯೂಮಿನಿಯಂ + ಐಯೋಡಿನ್ = ಅಲ್ಯೂಮಿನಿಯಂ ಐಯೋಡೈಡ್


ಕೆಲವು ಪ್ರಮುಖ ಸಂಯುಕ್ತಗಳು

ಗಂಧಕಾಮ್ಲ (ಸಲ್ಫ್ಯೂರಿಕ್ ಆಸಿಡ್)

ಇದನ್ನು ಆಮ್ಲಗಳ ರಾಜ ಎನ್ನುವರು. ಗೊಬ್ಬರಗಳ ತಯಾರಿಕೆಪ್ಲಾಸ್ಟಿಕ್ ತಯಾರಿಕೆಔಷಧಗಳ ತಯಾರಿಕೆ, ಚರ್ಮದ ಸೋಂಕು ನಿವಾರಕವಾಗಿಬ್ಯಾಟರಿ ಮತ್ತು ಸ್ಫೋಟಕಗಳಲ್ಲಿಸತುವಿನ ಲೇಪನ ಮಾಡಲು ಇನ್ನೂ ಮುಂತಾದ ಕೆಲಸಗಳಲ್ಲಿ ಬಳಸುತ್ತಾರೆ. ಇದು ದ್ರವರೂಪದಲ್ಲಿರುತ್ತದೆ.

ಸೋಡಿಯಂ ಹೈಡ್ರಾಕ್ಸೈಡ್

ಇದನ್ನು ಕಾಸ್ಟಿಕ್ ಸೋಡಾ ಸಹ ಎನ್ನುವರು. ಸಾಬೂನು ತಯಾರಿಕೆಯಲ್ಲಿ ಬಳಸುವರು. ಇದು ಘನರೂಪದಲ್ಲಿರುತ್ತದೆ.

ಸೋಡಿಯಂ ಕ್ಲೋರೈಡ್

ಸಾಮಾನ್ಯ ಹೆಸರು ಐಯೋ (ಉಪ್ಪು). ದಿನನಿತ್ಯದ ಎಲ್ಲಾ ಕೆಲಸಗಳಲ್ಲಿ ಬಳಸುವರು. ಇದು ಘನರೂಪದಲ್ಲಿರುತ್ತದೆ.

ಸೋಡಿಯಂ ಕಾರ್ಬೋನೇಟ್

ವಾಷಿಂಗ್ ಸೋಡಾಸೋಡಾ ಆ್ಯಶ್ ಎಂದು ಸಹ ಕರೆಯುವರು. ಪಾತ್ರೆ ಮತ್ತು ಬಟ್ಟೆ ಒಗೆಯಲು ಬಳಸುವ ಸೋಪ್ ಪೌಡರ್ಗಾಜನ್ನು ತಯಾರಿಸಲುಗಡಸು ನೀರನ್ನು ಮೃದುವಾಗಿಸಲು ಇನ್ನೂ ಅನೇಕ ಕೆಲಸಗಳಿಗೆ ಇದನ್ನು ಬಳಸುತ್ತಾರೆ. ಇದು ಘನರೂಪದಲ್ಲಿರುತ್ತದೆ.

ಸೋಡಿಯಂ ಬೈ ಕಾರ್ಬೋನೇಟ್

ಅಡುಗೆ ಮಾಡಲು ಬಳಸುವ ಸೋಡಾಪುಡಿ. ಇದು ಘನರೂಪದಲ್ಲಿರುತ್ತದೆ.

ಸೋಡಿಯಂ ಥಿಯೋ ಸಲ್ಫೇಟ್

ಇದನ್ನು ಹೈಪೋ ಎಂತಲೂ ಎನ್ನುವರು. ಮುಖ್ಯವಾಗಿ ಫೋಟೋಗ್ರಾಫಿಯಲ್ಲಿ ಬಳಸುತ್ತಾರೆ. ಇದು ಘನರೂಪದಲ್ಲಿರುತ್ತದೆ.

ಸಿಲಿಕಾನ್ ಕಾರ್ಬೈಡ್

ಕಾರ್ಬೊರೆಂಡಮ್ ಇದಕ್ಕಿರುವ ಇನ್ನೊಂದು ಹೆಸರು. ಸಾಮಾನ್ಯವಾಗಿ ಇದನ್ನು ಮರಳು ಕಾಗದ, ಸಾಲ್ಟ್ ಪೇಪರ್ ಎಂದು ಕರೆಯುವರು. ಮರದ ಹಲಗೆ ಮತ್ತು ಕಬ್ಬಿಣದ ಸಾಮಾನುಗಳನ್ನು ಉಜ್ಜಲು, ಆಯುಧಗಳನ್ನು ಹರಿತಗೊಳಿಸಲು, ಕಾಗದಗಳ ತಯಾರಿಕೆಯಲ್ಲಿ, ಗಾಜನ್ನು ತಯಾರಿಸಲು ಅನೇಕ ಕೆಲಸಗಳಿಗೆ ಇದನ್ನು ಬಳಸುವರು. ಇದು ಘನರೂಪದಲ್ಲಿರುತ್ತದೆ.

ಕ್ಯಾಲ್ಷಿಯಂ ಕಾರ್ಬೈಡ್

ಇದನ್ನು ನೀರಿನಲ್ಲಿ ಹಾಕಿದಾಗ ಅಸಿಟಲಿನ್ ಅನಿಲ ಉತ್ಪತ್ತಿಯಾಗುತ್ತದೆ. ಈ ಅನಿಲವು ಬೆಚ್ಚಗಿನ ವಾತಾವರಣವನ್ನು ಸೃಷ್ಟಿ ಮಾಡುತ್ತದೆ. ಗಿರಿಧಾಮಗಳಿಗೆ ಪ್ರವಾಸ ಹೋಗುವವರು ಅಲ್ಲಿ ಹೆಚ್ಚು ತಂಪಿರುವ ಕಾರಣ ಇದನ್ನು ತಮ್ಮೊಡನೆ ಒಯ್ಯುತ್ತಾರೆ. ಇದು ಘನರೂಪದಲ್ಲಿರುತ್ತದೆ.

ಕ್ಯಾಲ್ಷಿಯಂ

ಸುಣ್ಣದಕಲ್ಲು ಮತ್ತು ಸುಣ್ಣದಕಲ್ಲಿನಿಂದ ಉಂಟಾದ ಅಮೃತಶಿಲೆಗಳಲ್ಲಿ ಕ್ಯಾಲ್ಷಿಯಂ ಅಂಶವನ್ನು ಕಾಣತ್ತೇವೆ. ಇದನ್ನು ಸಿಮೆಂಟ್ಗಾಜಿನ ತಯಾರಿಕೆ ಹಾಗೂ ಕಬ್ಬಿಣದ ಸುಧಾರಣೆಯಲ್ಲಿ ಬಳಸುವರು. ಇದು ಘನರೂಪದಲ್ಲಿರುತ್ತದೆ.

ಸೋಡಿಯಂ ಬೆಂಜೋಯಿಟ್

ಆಹಾರ ಪದಾರ್ಥಗಳ ಸಂರಕ್ಷಣೆಯಲ್ಲಿ ಬಳಸುವರು. ಇದು ಘನರೂಪದಲ್ಲಿರುತ್ತದೆ.

ತಾಮ್ರದ ಸಲ್ಫೇಟ್

ಗಾಯಗಳಿಗೆ ಆಗುವ ಸೋಂಕನ್ನು ನಿವಾರಿಸಲು ಮತ್ತು ಬಟ್ಟೆಗಳಿಗೆ ಬಣ್ಣ ಹಾಕುವ ಕ್ಯಾಲಿಕೋ ಮುದ್ರಣಾಲಯದಲ್ಲಿ ಬಳಸುವರು. ಇದು ಘನರೂಪದಲ್ಲಿರುತ್ತದೆ.

ಅಮೋನಿಯಂ ಕ್ಲೋರೈಡ್

ಶುಷ್ಕಕೋಶಗಳಲ್ಲಿ (ಬ್ಯಾಟರಿ) ವಿದ್ಯುತ್ ದ್ವಿಭಾಜ್ಯವಾಗಿ ಬಳಸುವರು. ಇದು ಘನರೂಪದಲ್ಲಿರುತ್ತದೆ.

ಕ್ಲೋರೋಫ್ಲೋರೊ ಕಾರ್ಬನ್

ರೆಫ್ರಿಜರೇಟರ್‍ಗಳು (ಫ್ರಿಡ್ಜ್) ತಂಪಾಗಿರಲು ಈ ಅನಿಲವನ್ನು ಬಳಸುವರು.  ಇದರಿಂದ ವಾತಾವರಣದಲ್ಲಿ ಆಮ್ಲಿಯ ಮಳೆ ಉಂಟಾಗುತ್ತದೆ. ಈ ಆಮ್ಲ ಮಳೆ ಚರ್ಮ ರೋಗಕ್ಕೆ ಕಾರಣವಾಗುತ್ತದೆ. ಓಜೋನ್ ಪದರವು ಸಹ ಈ ಕ್ಲೋರೋಫ್ಲೋರೊ ಕಾರ್ಬನ್ ನಿಂದ ಹಾನಿಗೊಳಗಾಗುತ್ತದೆ.

ಕ್ಲೋರೋಪಾರ್ಮ್

ದ್ರವರೂಪದಲ್ಲಿರುತ್ತದೆ. ಮೂರ್ಛೆ ಹೋಗಿಸಲು ಇದನ್ನು ಬಳಸುತ್ತಾರೆ.

ಅಸಿಟಲಿನ್

ಈಥಲಿನ್, ಇಥಾಯಿನ್ ಎಂದೆಲ್ಲಾ ಇದನ್ನು ಕರೆಯುವರು. ಕಾಯಿಗಳನ್ನು ಕೃತಕವಾಗಿ ಹಣ್ಣಾಗಿಸಲು ವಿನೆಗರ್ ನಲ್ಲಿ ಹುಳಿ ರುಚಿ ಬರಲು ಮತ್ತು ವೆಲ್ಡಿಂಗ್ ಮಾಡಲು ಇದನ್ನು ಬಳಸುವರು. ಇದು ಅನಿಲ ರೂಪದಲ್ಲಿರುತ್ತದೆ. 

ಸಿಲ್ವರ್ ಬ್ರೋಮೈಡ್

ದ್ರವ ರೂಪದ ಇದನ್ನು ಫೋಟೋಗ್ರಾಫಿಯಲ್ಲಿ ಬಳಸುತ್ತಿದ್ದರು.

ಅಸೋವೈಲೇಟ್

ಇದೊಂದು ಬಣ್ಣವಾಗಿದ್ದು ಇದನ್ನು ನೀರಿನಲ್ಲಿರುವ ಪಿ.ಎಚ್ ಮೌಲ್ಯವನ್ನು ಅಳೆಯಲು ಬಳಸುವರು.

ಕಾರ್ಬನ್ ಮಾನಾಕ್ಸೈಡ್

ಇಂಗಾಲದ ಯಾವುದಾದರು ವಸ್ತುಗಳು ಪೂರ್ತಿಯಾಗಿ ಸುಡದೇ ಇದ್ದಾಗ ಈ ಅನಿಲ ಉತ್ಪತ್ತಿಯಾಗುತ್ತದೆ. ಇದು ವಿಷಯುಕ್ತ ಅನಿಲವಾಗಿದ್ದು ಮಾನವನ ರಕ್ತದಲ್ಲಿನ ಹಿಮೋಗ್ಲೋಬಿನ್ ಮೇಲೆ ಪ್ರಭಾವ ಬೀರುತ್ತದೆ. ದೇಹದಲ್ಲಿ ಇದರ ಪ್ರಮಾಣ ಹೆಚ್ಚಾದಲ್ಲಿ ಪಾರ್ಶ್ವವಾಯು ಬರುವ ಸಂಭವವಿರುತ್ತದೆ.

ಕಾರ್ಬನ್ ಡೈ ಆಕ್ಸೈಡ್

ಇದು ಭೂಮಿಯಿಂದ ಹೊರಹೋಗುವ ವಿಕಿರಣಗಳನ್ನು ತಡೆದು ಭೂಮಿಯ ಮೇಲ್ಮೈಯಲ್ಲಿ ಉಷ್ಣಾಂಶ ಹೆಚ್ಚಲು ಕಾರಣವಾಗಿದೆ ಆದ್ದರಿಂದ ಇದನ್ನು ಹಸಿರು ಮನೆ ಅನಿಲ ಎನ್ನುವರು. ಇದನ್ನು ಬೆಂಕಿ ನಂದಿಸಲು ಮತ್ತು ಕಾರ್ಬಾನಿಕ್ ಆಮ್ಲದ ತಯಾರಿಕೆಯಲ್ಲಿ ಬಳಸುವರು. ಒಣ ಮಂಜುಗಡ್ಡೆಯನ್ನು (ಡ್ರೈ ಐಸ್) ತಯಾರಿಸಲು ಕಾರ್ಬನ್ ಡೈ ಆಕ್ಸೈಡ್ ಅನ್ನು ಬಳಸುವರು.

ಕಾರ್ಬನಿಕ್ ಆಮ್ಲ

ಈ ಅನಿಲವನ್ನು ತಂಪು ಪಾನೀಯಗಳಲ್ಲಿ ಬಳಸುತ್ತಾರೆ

ಬೆಂಜಿನ್

ಬೆಂಜಿನ್ ದ್ರವರೂಪದ ಸಂಯುಕ್ತವಾಗಿದ್ದು ಇದನ್ನು ಸುಗಂಧ ದ್ರವ್ಯಗಳಲ್ಲಿ, ಸ್ಪೋಟಕಗಳಲ್ಲಿ, ಔಷಧಗಳ ತಯಾರಿಕೆಯಲ್ಲಿ ಮತ್ತು ಬಣ್ಣಗಳ ತಯಾರಿಕೆಯಲ್ಲಿ ಬಳಸುವರು

ಟಾಲ್ವಿನ್

ಟಾಲ್ವಿನ್ ಅನ್ನು T.N.T  ಸ್ಪೋಟಕಗಳಲ್ಲಿ ಬಳಸುತ್ತಾರೆ. ಇದೊಂದು ದ್ರವರೂಪದ ಸಂಯುಕ್ತವಾಗಿದೆ.

ಅಮೋನಿಯ

ಗೊಬ್ಬರಗಳ ತಯಾರಿಕೆಯಲ್ಲಿ ಮತ್ತು ತಂಪುಪಾನೀಯಗಳಲ್ಲಿ ತಂಪುಕಾರಕವಾಗಿ ಬಳಸುತ್ತಾರೆ. ಇದು ಅನಿಲ ರೂಪದಲ್ಲಿರುತ್ತದೆ.

ನೈಟ್ರಸ್ ಆಕ್ಸೈಡ್

ನೈಟ್ರಸ್ ಆಕ್ಸೈಡ್ ಅನ್ನು ನಗಿಸುವ ಅನಿಲ ಎನ್ನುವರು

ಕ್ಯಾಲ್ಷಿಯಂ ಆಕ್ಸಿಕ್ಲೋರೈಡ್

ಬ್ಲೀಚಿಂಗ್ ಪೌಡರ್ ಅಥವಾ ಚೆಲುವೆ ಪುಡಿ ಎಂತಲೂ ಕರೆಯುವ ಇದನ್ನು ಕ್ರಿಮಿನಾಶಕವಾಗಿ ಬಳಸುತ್ತಾರೆ. ಇದು ಘನರೂಪದಲ್ಲಿರುತ್ತದೆ.

ಜಿಪ್ಸಂ

ಸಿಮೆಂಟ್ ತಯಾರಿಕೆ ಮತ್ತು ವಿಗ್ರಹಗಳ ತಯಾರಿಕೆಯಲ್ಲಿ ಇದನ್ನು ಬಳಸುತ್ತಾರೆ. ಜಿಪ್ಸಂ ಘನರೂಪದಲ್ಲಿರುತ್ತದೆ.

ಫಾರ್ಮಾಲ್ಡಿಹೈಡ್

ಶವಗಳ ಸಂರಕ್ಷಣೆಯಲ್ಲಿ ಫಾರ್ಮಾಲ್ಡಿಹೈಡ್ ಅನ್ನು ಬಳಸುತ್ತಾರೆ. ಇದು ದ್ರವರೂಪದಲ್ಲಿರುತ್ತದೆ.

ಅಸ್ಕಾರ್ಬಿಕ್ ಆಮ್ಲ

ಇದರ ರಾಸಾಯನಿಕ ಹೆಸರು ವಿಟಮಿನ್ ಸಿ. ಇದು ಹುಳಿ ಹಣ್ಣುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಡೈಬೆಂಜೋ ಕ್ಸಾಜಪೈನ್

ಗಲಬೆಗಳಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಉಪಯೋಗಿಸುವ ಲ್ಯಾಕ್ರಿಮ್ಯಾಟರ್ ಎನ್ನುವ ಟಿಯರ್ ಗ್ಯಾಸ್‍ನಲ್ಲಿ ಈ ಅನಿಲವನ್ನು ಉಪಯೋಗಿಸುವರು.

ಕ್ಲೋರೋ ಕ್ವಿನೈನ್

ಮಲೇರಿಯಾ ರೋಗವನ್ನು ಗುಣಪಡಿಸಲು ಇದನ್ನು ಔಷಧವಾಗಿ ಬಳಸುವರು

ಎಂಡೋಸಲ್ಫಾನ್

ಹೊಲಗಳಲ್ಲಿ ಕೀಟನಾಶಕವಾಗಿ ಇದನ್ನು ಬಳಸುವರು.

ಬ್ಯೂಟೇನ್ ಮತ್ತು ಪ್ರೊಪೇನ್

ಇವೆರಡನ್ನು ಅಡುಗೆ ಅನಿಲವಾಗಿ ಎಲ್.ಪಿ.ಜಿ ಗ್ಯಾಸ್ ಗಳಲ್ಲಿ ಬಳಸುವರು. ಅಡುಗೆ ಅನಿಲ 80% ಬ್ಯೂಟೇನ್ ಮತ್ತು 20% ಪ್ರೊಪೇನ್ ನಿಂದ ಆಗಿರುತ್ತದೆ.

ಕಾಮೆಂಟ್‌ಗಳು