ಲೋಹಗಳು
ಲೋಹಗಳು
ಲೋಹಗಳು ಶುದ್ಧ ಸ್ಥಿತಿಯಲ್ಲಿ ಹೊಳಪಾದ ಮೇಲ್ಮೈಯನ್ನು ಹೊಂದಿರುತ್ತವೆ. ಇದನ್ನೇ ಲೋಹೀಯ ಕಾಂತಿ ಎನ್ನುವರು.
ಲೋಹಗಳು ತನ್ಯತೆ ಮತ್ತು ಕುಟ್ಯತೆ ಗುಣಗಳನ್ನು ಹೊಂದಿರುತ್ತವೆ. ತನ್ಯತೆ ಎಂದರೆ ಲೋಹವೊಂದನ್ನು ತಂತಿಯನ್ನಾಗಿಸಿ ಸಾಧ್ಯವಾದಷ್ಟು ಎಳೆಯಬಹುದಾದ ಗುಣವಾಗಿದೆ. ಚಿನ್ನ ಅತಿ ಹೆಚ್ಚಿನ ತನ್ಯತೆ ಗುಣ ಹೊಂದಿರುವ ಲೋಹವಾಗಿದೆ.
ಕುಟ್ಯತೆ ಎಂದರೆ ಲೋಹವೊಂದನ್ನು ಸಾಧ್ಯವಾದಷ್ಟು ಕುಟ್ಟಿ ತೆಳು ಹಾಳೆಯನ್ನಾಗಿಸಬಹುದಾದ ಗುಣವಾಗಿದೆ. ಚಿನ್ನ ಮತ್ತು ಬೆಳ್ಳಿ ಅತಿ ಹೆಚ್ಚಿನ ಕುಟ್ಯತೆ ಹೊಂದಿರುವ ಲೋಹಗಳಾಗಿವೆ.
ಲೋಹಗಳು ಹೆಚ್ಚಿನ ಕರಗುವ ಮತ್ತು ಆವಿಯಾಗುವ ಬಿಂದುವನ್ನು ಹೊಂದಿರುತ್ತವೆ
ಲೋಹಗಳು ಸಾಮಾನ್ಯವಾಗಿ ಒಳ್ಳೆಯ ಉಷ್ಣವಾಹಕಗಳು, ಬೆಳ್ಳಿ ಮತ್ತು ತಾಮ್ರ ಉತ್ತಮ ಉಷ್ಣವಾಹಕಗಳಾದರೆ ಪಾದರಸ ಮತ್ತು ಸೀಸ ದುರ್ಬಲ ಉಷ್ಣವಾಹಕಗಳಾಗಿವೆ.
ಲೋಹಗಳ ಮೇಲೆ ಹೊಡೆತ ಬಿದ್ದಾಗ ಉಂಟಾಗುವ ಶಬ್ಧಕ್ಕೆ ಶಾಬ್ಧನ (ಸೋನರಸ್, Sonorus) ಎನ್ನುವರು. ನಾಣ್ಯಗಳು ಕೆಳಗೆ ಬಿದ್ದಾಗ ಆಗುವ ಶಬ್ದ, ಗಂಟೆಯ ಶಬ್ದ, ಜಾಗಟೆಯ ಶಬ್ದ ಇವು ಶಾಬ್ದನಕ್ಕೆ ಉದಾಹರಣೆಗಳು
ಲೋಹಗಳು ಇಲೆಕ್ಟ್ರಾನ್ ಬಿಡುಗಡೆ ಮಾಡುತ್ತವಾದ್ದರಿಂದ ಇವುಗಳು ವಿದ್ಯುತ್ ಧನೀಯಗಳಾಗಿವೆ (electro Positive).
ಲೋಹಗಳು ಡಿಲ್ಯೂಟ್ ಆ್ಯಸಿಡ್ ಗಳಿಂದ (ಸಾರತೆ ಕಡಿಮೆ ಇರುವ ಆಮ್ಲ) ಹೈಡ್ರೋಜನ್ ಅನ್ನು ಸ್ಥಾನ ಪಲ್ಲಟಗೊಳಿಸುತ್ತವೆ. ಡಿಲ್ಯೂಟ್ ಆ್ಯಸಿಡ್ ಎಂದರೆ ಸು. 80% - 90% ನೀರು ಮತ್ತು 10% - 20% ಆಮ್ಲದ ಅಂಶವಿರುತ್ತದೆ.
ಲೋಹಗಳೊಂದಿಗೆ ಅಲೋಹಗಳ ವರ್ತನೆ
ಕೆಲವು ಲೋಹಗಳನ್ನು ಹೆಚ್ಚಿನ ತಾಪದಲ್ಲಿ ಕಾಯಿಸಿದಾಗ
ಆ ಲೋಹಗಳು ನೈಟ್ರೋಜನ್ನಿನೊಂದಿಗೆ ವರ್ತಿಸಿದರೆ ಆಯಾ ಲೋಹದ ನೈಟ್ರೈಡುಗಳನ್ನು ಬಿಡುಗಡೆ ಮಾಡುತ್ತವೆ.
ಆ ಲೋಹಗಳು ಹೈಡ್ರೋಜನ್ನಿನೊಂದಿಗೆ ವರ್ತಿಸಿದರೆ ಆಯಾ ಲೋಹದ ಹೈಡ್ರೈಡುಗಳನ್ನು ಬಿಡುಗಡೆ ಮಾಡುತ್ತವೆ.
ಆ ಲೋಹಗಳು ಕ್ಲೋರಿನ್ನಿನೊಂದಿಗೆ ವರ್ತಿಸಿದರೆ ಆಯಾ ಲೋಹದ ಕ್ಲೋರೈಡುಗಳನ್ನು ಬಿಡುಗಡೆ ಮಾಡುತ್ತವೆ.
ಆ ಲೋಹಗಳು ಗಂಧಕದೊಂದಿಗೆ (ಸಲ್ಫರ್) ವರ್ತಿಸಿದರೆ ಆಯಾ ಲೋಹದ ಸಲ್ಫೈಡುಗಳನ್ನು ಬಿಡುಗಡೆ ಮಾಡುತ್ತವೆ.
ತಾಮ್ರ ಉದಾಹರಣೆ
ತಾಮ್ರ + ನೈಟ್ರೋಜನ್ = ತಾಮ್ರದ ನೈಟ್ರೇಟ್
ತಾಮ್ರ + ಹೈಡ್ರೋಜನ್ = ತಾಮ್ರದ ಹೈಡ್ರೇಟ್
ತಾಮ್ರ + ಕ್ಲೋರಿನ್ = ತಾಮ್ರದ ಕ್ಲೋರೈಡ್
ತಾಮ್ರ + ಸಲ್ಫರ್ = ತಾಮ್ರದ ಸಲ್ಫೈಟ್
ಬೆಳ್ಳಿ + ನೈಟ್ರೋಜನ್ = ಬೆಳ್ಳಿಯ ನೈಟ್ರೇಟ್
ಬೆಳ್ಳಿ + ಹೈಡ್ರೋಜನ್ = ಬೆಳ್ಳಿಯ ಹೈಡ್ರೇಟ್
ಬೆಳ್ಳಿ + ಕ್ಲೋರಿನ್ = ಬೆಳ್ಳಿಯ ಕ್ಲೋರೈಡ್
ಬೆಳ್ಳಿ + ಸಲ್ಫರ್ = ಬೆಳ್ಳಿಯ ಸಲ್ಫೈಟ್
ಅಯಾನಿಕ್ ಸಂಯುಕ್ತಗಳು
ಒಂದು ಲೋಹದಲ್ಲಿರುವ ಎಲೆಕ್ಟ್ರಾನ್‍ಗಳು ಅಲೋಹಕ್ಕೆ ವರ್ಗಾವಣೆಯಾಗುವುದರ ಮೂಲಕ ಉಂಟಾಗುವ ಸಂಯುಕ್ತಗಳಿಗೆ ಅಯಾನಿಕ್ ಸಂಯುಕ್ತಗಳು / ಎಲೆಕ್ಟ್ರೋ ಕೋವೆಲೆಂಟ್ ಸಂಯುಕ್ತಗಳು ಎನ್ನುವರು.
ಲೋಹಗಳು ಅಲೋಹಗಳೊಂದಿಗೆ ಸೇರುವಾಗ ಇಲೆಕ್ಟ್ರಾನ್ ಬಂಧಗಳನ್ನು (Ionic bonding) ಉಂಟುಮಾಡುತ್ತದೆ
ಲೋಹವಾದ ಸೋಡಿಯಂ (Na) ಮತ್ತು ಅಲೋಹವಾದ ಫ್ಲೋರಿನ್ (F) ಗಳು ಸೇರಿ ಅಯಾನಿಕ್ ಬಂಧ ಉಂಟಾಗಿ ಸೋಡಿಯಂ ಫ್ಲೋರೈಡ್ ಎಂಬ ಸಂಯುಕ್ತ ಉಂಟಾಗುವುದು.
ಲೋಹವಾದ ಕ್ಯಾಲ್ಷಿಯಂ ಮತ್ತು ಅಲೋಹವಾದ ಕ್ಲೋರಿನ್ ಗಳು ಸೇರಿ ಅಯಾನಿಕ್ ಬಂಧ ಉಂಟಾಗಿ ಕ್ಯಾಲ್ಷಿಯಂ ಕ್ಲೋರೈಡ್ ಎಂಬ ಸಂಯುಕ್ತ ಉಂಟಾಗುವುದು.
ಅಯಾನಿಕ್ ಸಂಯುಕ್ತಗಳ ಗುಣಲಕ್ಷಣಗಳು
ಅಯಾನಿಕ್ ಸಂಯುಕ್ತಗಳು ಘನವಸ್ತುಗಳಾಗಿದ್ದು ಅವುಗಳಲ್ಲಿನ ಧನ ಮತ್ತು ಋಣ ಅಯಾನುಗಳಲ್ಲಿನ ಪ್ರಬಲ ಆಕರ್ಷಣ ಬಲದಿಂದಾಗಿ ಸ್ವಲ್ಪಮಟ್ಟಿಗೆ ಕಠಿಣವಾಗಿರುತ್ತವೆ. ಇವು ಬಿಧುರವಾಗಿದ್ದು ಒತ್ತಡವನ್ನು ಹಾಕಿದಾಗ ಪುಡಿಯಗುತ್ತವೆ ಉದಾ.. ಉಪ್ಪು
ಇವು ಹೆಚ್ಚಿನ ಕರಗುವ ಬಿಂದು ಮತ್ತು ಕುದಿಬಿಂದುಗಳನ್ನು ಹೊಂದಿವೆ ಕಾರಣ ಅವುಗಳ ಕಣಗಳ ನಡುವಿನ ಅಯಾನಿಕ್ ಬಂಧ ಪ್ರಬಲವಾಗಿರುತ್ತದೆ.
ಇವುಗಳು ಸಾಮಾನ್ಯವಾಗಿ ನೀರಿನಲ್ಲಿ ವಿಲೀನವಾಗುತ್ತವೆ, ಆದರೆ ಪೆಟ್ರೋಲ್, ಡೀಸೆಲ್, ಸೀಮೆ ಎಣ್ಣೆಗಳಲ್ಲಿ ವಿಲೀನವಾಗುವುದಿಲ್ಲ.
ಘನಸ್ಥಿತಿಯಲ್ಲಿ ಅಯಾನು ಸಂಯುಕ್ತಗಳ ಮೂಲಕ ವಿದ್ಯುತ್ ಹರಿಯುವುದಿಲ್ಲ ಆದರೆ ದ್ರವಸ್ಥಿತಿಯಲ್ಲಿ ವಿದ್ಯುತ್ ಹರಿಯುತ್ತದೆ. ಕಾರಣ ದ್ರವಸ್ಥಿತಿಯಲ್ಲಿ ಅಯಾನುಗಳು ಸ್ವತಂತ್ರವಗಿ ಚಲಿಸುತ್ತವೆ. ಘನರೂಪದಲ್ಲಿ ಸ್ವತಂತ್ರವಾಗಿ ಚಲಿಸಲು ಅವಕಾಶವಿರುವುದಿಲ್ಲ.
ಲೋಹಗಳೊಂದಿಗೆ ನೀರಿನ ವರ್ತನೆ
ಕೆಲವು ಲೋಹಗಳು ನೀರಿನೊಂದಿಗೆ ವರ್ತಿಸಿದಾಗ ಆಯಾ ಲೋಹದ ಆಕ್ಸೈಡ್, ಪ್ರತ್ಯಾಮ್ಲೀಯ ಆಕ್ಸೈಡ್ ಮತ್ತು ಹೈಡ್ರೋಜನ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ಈ ಸಮಯದಲ್ಲಿ ಬಿಡುಗಡೆಯಾದ ಆ ಲೋಹದ ಆಕ್ಸೈಡ್ ಗಳು ನೀರಿನಲ್ಲಿ ಕರಗಿ ಲೋಹದ ಹೈಡ್ರಾಕ್ಸೈಡ್ ಗಳಾಗುತ್ತವೆ. ಆದರೆ ಎಲ್ಲಾ ಲೋಹದ ಆಕ್ಸೈಡ್ ಗಳು ನೀರಿನಲ್ಲಿ ಕರಗುವುದಿಲ್ಲ.
ಕ್ಷಾರ ಲೋಹಗಳಾದ ಲೀಥಿಯಂ, ಸೋಡಿಯಮ್, ಪೊಟ್ಯಾಷಿಯಂ ಗಳಂತಹ ಲೋಹಗಳು ನೀರಿನಲ್ಲಿ ಕರಗಿ ಕ್ಷಾರತೆಯನ್ನು ಉಂಟುಮಾಡುತ್ತವೆ. ಈ ಕ್ಷಾರ ಲೋಹಗಳ ಆಕ್ಸೈಡುಗಳು ನೀರಿನಲ್ಲಿ ಕರಗಲು ಕಾರಣ ಕಡಿಮೆ ಸಾಂದ್ರತೆ ಮತ್ತು ಕಡಿಮೆ ಕರಗುವ ಬಿಂದುವನ್ನು ಹೊಂದಿದ್ದು ಚಾಕುವಿನಿಂದ ಕತ್ತರಿಸುವಷ್ಟು ಮೃದುವಾಗಿರುತ್ತವೆ.
ನೀರು ಮತ್ತು ಸೋಡಿಯಂ
ಉದಾ : ಸೋಡಿಯಂ ಲೋಹವು ನೀರಿನೊಂದಿಗೆ ತಕ್ಷಣವೇ ವರ್ತಿಸಿ ಸೋಡಿಯಂ ಆಕ್ಸೈಡನ್ನು ಉತ್ಪತ್ತಿ ಮಾಡುತ್ತದೆ. ನೀರಿನಲ್ಲಿ ಹಾಕಿದ ಸೋಡಿಯಂನ ತೀವ್ರತೆ ಎಷ್ಟಿರುತ್ತದೆ ಎಂದರೆ ತಣ್ಣೀರಿನಲ್ಲಿ ಸೋಡಿಯಂ ಲೋಹ ಸ್ಪೋಟಗೊಳ್ಳುತ್ತದೆ. ಈ ಸೋಡಿಯಮ್ ಆಕ್ಸೈಡ್ ಮತ್ತೆ ನೀರಿನೊಂದಿಗೆ ಸೇರಿದರೆ ಸೋಡಿಯಂ ಹೈಡ್ರಾಕ್ಸೈಡ್ ಆಗುತ್ತದೆ.
ಮೇಗ್ನೀಷಿಯಂ ಅನ್ನು ಬಿಸಿ ನೀರಿನಲ್ಲಿ ಹಾಕಿದಾಗ ಮೇಗ್ನೀಶಿಯಂ ಹೈಡ್ರಾಕ್ಸೈಡ್ ಮತ್ತು ಹೈಡ್ರೋಜನ್ ಉತ್ಪತ್ತಿಯಾಗುತ್ತದೆ.
ಕ್ಯಾಲ್ಷಿಯಂ ನೀರಿನೊಂದಿಗೆ ವರ್ತಿಸಿದಾಗ ಅದರ ತೀವ್ರತೆ ಸೋಡಿಯಂ ಅಥವಾ ಮೆಗ್ನೀಷಿಯಂನಷ್ಟು ಇರುವುದಿಲ್ಲ. ಕಾರಣ ಕ್ಯಾಲ್ಷಿಯಂ ನೀರಿನೊಂದಿಗೆ ವರ್ತಿಸುವಾಗ ನೀರಿನಿಂದ ಬಿಡುಗಡೆಯಾಗುವ ಹೈಡ್ರೋಜನ್ ಅನಿಲ ಗುಳ್ಳೆಗಳ ರೂಪದಲ್ಲಿ ಕ್ಯಾಲ್ಷಿಯಂಗೆ ಅಂಟಿಕೊಂಡು ಕ್ಯಾಲ್ಶಿಯಂ ಅತಿಯಾಗಿ ನೀರಿನ ಜೊತೆ ವರ್ತಿಸದ ಹಾಗೆ ಮಾಡುತ್ತದೆ
ಚಿನ್ನ ಮತ್ತು ಪ್ಲಾಟಿನಂ ಲೋಹಗಳು ತೇವಾಂಶ ಅಥವಾ ನೀರಿನೊಂದಿಗೆ ವರ್ತಿಸುವುದಿಲ್ಲವಾದ್ದರಿಂದ ಅವುಗಳ ಗುಣ ರೂಪಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಅವುಗಳ ಮೇಲ್ಮೈ ಹೊಳಪು ಶುದ್ಧತೆ ಕೆಡುವುದಿಲ್ಲ ಈ ಕಾರಣದಿಂದ ಇವುಗಳನ್ನು ಆಭರಣಕ್ಕಾಗಿ ಉಪಯೋಗಿಸುತ್ತಾರೆ.
ಅಲ್ಯುಮಿನಿಯಂ, ಕಬ್ಬಿಣ, ಸತುವಿನಂತಹ ಕೆಲವು ಲೋಹಗಳು ತೇವಾಂಶದ ಜೊತೆಗೆ ವರ್ತಿಸಿ ಲೋಹದ ಆಕ್ಸೈಡ್ ಮತ್ತು ಹೈಡ್ರೋಜನ್‍ಗಳನ್ನು ಬಿಡುಗಡೆ ಮಾಡುತ್ತವೆ.
ಲೋಹಗಳೊಂದಿಗೆ ಆಮ್ಲಗಳ ವರ್ತನೆ
ಬಹುತೇಕ ಲೋಹಗಳು ಆಮ್ಲಜನಕದೊಡನೆ ವರ್ತಿಸುತ್ತವೆ. ಹಾಗೆ ವರ್ತಿಸಿದಾಗ ಆಯಾ ಲೋಹದ ಆಕ್ಸೈಡ್‍ಗಳಾಗಿ ಪರಿವರ್ತನೆ ಹೊಂದುತ್ತವೆ.
2Cu (ತಾಮ್ರ) + O2 (ಆಮ್ಲಜನಕ) = 2CuO (ತಾಮ್ರದ ಆಕ್ಸೈಡ್)
ಇಲ್ಲಿ ತಾಮ್ರವು ಆಮ್ಲಜನಕದೊಡನೆ ಸೇರಿ ತಾಮ್ರದ ಆಕ್ಸೈಡನ್ನು ಬಿಡುಗಡೆ ಮಾಡಿದೆ.
4Al (ಅಲ್ಯೂಮಿನಿಯಂ) + O2 (ಆಮ್ಲಜನಕ) = 2Al2O3 (ಅಲ್ಯೂಮಿನಿಯಂ ಆಕ್ಸೈಡ್)
ಇಲ್ಲಿ ಅಲ್ಯೂಮಿನಿಯಂ ಆಮ್ಲಜನಕದೊಡನೆ ಸೇರಿ ಅಲ್ಯೂಮಿನಿಯಂ ಆಕ್ಸೈಡನ್ನು ಬಿಡುಗಡೆ ಮಾಡಿದೆ.
ಸಾಮಾನ್ಯವಾಗಿ ಲೋಹದ ಆಕ್ಸೈಡುಗಳು ಪ್ರತ್ಯಾಮ್ಲಿಯ ಗುಣಗಳನ್ನು ಹೊಂದಿರುತ್ತವೆ. ಇವು ಕೆಂಪು ಲಿಟ್ಮಸ್ ಕಾಗದವನ್ನು ನೀಲಿ ಬಣ್ಣವನ್ನಾಗಿ ಮಾಡುತ್ತವೆ.
ಅಲ್ಯೂಮಿನಿಯಂ ಆಕ್ಸೈಡ್ ಮತ್ತು ಸತುವಿನ ಆಕ್ಸೈಡ್ ಗಳಂತಹ ಕೆಲವು ಲೋಹದ ಆಕ್ಸೈಡ್‍ಗಳು ಆಮ್ಲಿಯ ಹಾಗೂ ಪ್ರತ್ಯಾಮ್ಲಿಯ ಗುಣಗಳೆರಡನ್ನು ಪ್ರದರ್ಶಿಸುತ್ತವೆ. ಇಂತಹ ಲೋಹದ ಆಕ್ಸೈಡ್‍ಗಳು ಆಮ್ಲ ಮತ್ತು ಪ್ರತ್ಯಾಮ್ಲಗಳೆರಡರ ಜೊತೆಗೂ ವರ್ತಿಸಿದಾಗ ಲವಣ ಮತ್ತು ನೀರನ್ನು ಉತ್ಪತ್ತಿ ಮಾಡುತ್ತವೆ.
ಸಾಮಾನ್ಯ ಉಷ್ಣಾಂಶದಲ್ಲಿ ಮೆಗ್ನೀಷಿಯಂ, ಅಲ್ಯೂಮಿನಿಯಂ, ಸತು, ಸೀಸ ಇಂತಹ ಲೋಹಗಳ ಹೊರಪದರವು ತೆಳುವಾದ ಆಕ್ಸೈಡ್ ಪದರದಿಂದ ಆವರಿಸಲ್ಪಟ್ಟಿರುತ್ತದೆ. ಈ ಪದರವು ಆ ಲೋಹಗಳು ಇನ್ನಷ್ಟು ಉತ್ಕರ್ಷಣ ಹೊಂದುವುದನ್ನು ತಡೆಯುತ್ತದೆ. (ಉತ್ಕರ್ಷಣ ಎಂದರೆ ವಾತಾವರಣದಲ್ಲಿನ ಆಮ್ಲಜನಕದೊಂದಿಗೆ ಲೋಹಗಳು ವರ್ತಿಸುವ ಪ್ರಕ್ರಿಯೆ).
ಉದಾ.. ಅಲ್ಯುಮಿನಿಯಂ ವಾತಾವರಣದಲ್ಲಿನ ಆಮ್ಲಜನಕದೊಂದಿಗೆ ವರ್ತಿಸಿ ಆ ಅಲ್ಯೂಮಿನಿಯಂ ಮೇಲೆ ದಪ್ಪ ಆಕ್ಸೈಡ್ ಪದರ ಉಂಟಾಗುವ ಕ್ರಿಯೆಗೆ ಅನೋಡಿಕರಣ (Anodising) ಎನ್ನುವರು. ಈ ಅನೋಡಿಕರಣ ಅಲ್ಯೂಮಿನಿಯಂ ತುಕ್ಕು ಹಿಡಿಯುವುದನ್ನು ತಪ್ಪಿಸುತ್ತದೆ.
ಬಹುತೇಕ ಲೋಹಗಳು ನೈಟ್ರಿಕ್ ಆಮ್ಲದ ಜೊತೆ ವರ್ತಿಸಿದಾಗ ಹೈಟ್ರೋಜನ್ ಅನಿಲ ಬಿಡುಗಡೆಯಾಗುವುದಿಲ್ಲ. ಕಾರಣ ನೈಟ್ರಿಕ್ ಆಮ್ಲವು ಒಂದು ಪ್ರಬಲ ಉತ್ಕರ್ಷಕವಾಗಿದೆ (Oxidising agent). ಈ ನೈಟ್ರಿಕ್ ಆಮ್ಲವು ಉತ್ಪತ್ತಿಯಾದ ಹೈಡ್ರೋಜನ್ ಅನ್ನು ಉತ್ಕರ್ಷಿಸಿ ನೀರನ್ನು ಉತ್ಪತ್ತಿ ಮಾಡುತ್ತದೆ ಮತ್ತು ತಾನು ಸಹ ಯಾವುದಾದರೊಂದು ನೈಟ್ರೋಜನ್ ಆಕ್ಸೈಡ್ ಆಗಿ ಅಪಕರ್ಷಣೆ ಹೊಂದುತ್ತದೆ. ಆದರೆ ಮೆಗ್ನೀಷಿಯಂ ಮತ್ತು ಮ್ಯಾಂಗನೀಸ್ ಲೋಹಗಳು ಅತಿಯಾದ ಸಾರರಿಕ್ತ ನೈಟ್ರಿಕ್ ಆಮ್ಲದ ಜೊತೆ ವರ್ತಿಸಿ ಹೈಡ್ರೋಜನ್ ಅನಿಲವನ್ನು ಬಿಡುಗಡೆ ಮಾಡುತ್ತವೆ.
ಇತರ ಲೋಹಿಯ ದ್ರಾವಣಗಳೊಂದಿಗೆ ಲೋಹಗಳ ವರ್ತನೆ
ರಾಸಾಯನಿಕವಾಗಿ ಕ್ರಿಯಾಪಟುತ್ವ ಹೊಂದಿರುವ ಧಾತುಗಳು ತಮಗಿಂತ ಕಡಿಮೆ ಕ್ರಿಯಾಪಟುತ್ವ ಹೊಂದಿದ ಧಾತುಗಳನ್ನು ಅವುಗಳ ದ್ರಾವಣ ಅಥವಾ ದ್ರವಿಸಿದ ಸಂಯುಕ್ತದಿಂದ ಸ್ಥಳಾಂತರಿಸುತ್ತವೆ.
ಲೋಹಗಳ ಕ್ರಿಯಾಪಟುತ್ವ ಸಾಮರ್ಥ್ಯ
ಈ ಕೆಳಗೆ ಕೊಟ್ಟಿರುವ ಲೋಹಗಳ ಪಟ್ಟಿಯಲ್ಲಿ ಮೊದಲು ಇರುವ ಪೊಟ್ಯಾಷಿಯಂ ಅತಿಹೆಚ್ಚಿನ ಕ್ರಿಯಾಪಟುತ್ವ ಹೊಂದಿದ್ದು ಕೊನೆಯಲ್ಲಿರುವ ಚಿನ್ನ ಅತಿ ಕಡಿಮೆ ಕ್ರಿಯಾಪಟುತ್ವ ಹೊಂದಿದೆ. ಲೋಹಗಳ ಕ್ರಿಯಾಪಟುತ್ವವನ್ನು ಇಳಿಕೆ ಕ್ರಮದಲ್ಲಿ ನೀಡಲಾಗಿದೆ.
ಪೊಟ್ಯಾಷಿಯಂ (ಕೇಲಿಯಂ) K
ಸೋಡಿಯಂ (ನೇಟ್ರಿಯಂ) Na
ಕ್ಯಾಲ್ಷಿಯಂ Ca
ಮೆಗ್ನೀಷಿಯಂ Mg
ಅಲ್ಯುಮಿನಿಯಂ Al
ಸತು (ಝಿಂಕ್) Zn
ಕಬ್ಬಿಣ (ಫೆರಮ್) Fe
ಸೀಸ (ಪ್ಲಂಬಮ್) Pb
ತಾಮ್ರ (ಕಾಪರ್) Cu
ಪಾದರಸ (ಹೈಡ್ರಾರ್ಜೆರಮ್) Hg
ಬೆಳ್ಳಿ (ಅಗ್ಮೆಂಟಿನ್) Ag
ಚಿನ್ನ (ಅರಮ್) Au
ಅತಿಕಡಿಮೆ ಕ್ರಿಯಾಶೀಲತೆ ಹೊಂದಿರುವ ಲೋಹಗಳಾದ ಪಾದರಸ, ಬೆಳ್ಳಿ, ಚಿನ್ನಗಳು ಬಹುತೇಕವಾಗಿ ನಿಸರ್ಗದಲ್ಲಿ ಮುಕ್ತರೂಪದಲ್ಲಿ ದೊರೆಯುತ್ತದೆ. ಈ ಲೋಹಗಳನ್ನು ಕಾಸುವುದರ ಮೂಲಕ ಪಡೆಯುತ್ತಾರೆ.
ಮಧ್ಯಮ ಕ್ರಿಯಾಶೀಲತೆ ಹೊಂದಿರುವ ಲೋಹಗಳಾದ ಕಬ್ಬಿಣ, ಸತು, ಸೀಸ, ತಾಮ್ರಗಳು ಸಾಮಾನ್ಯವಾಗಿ ಸಲ್ಫೇಡ್ ಮತ್ತು ಕಾರ್ಬೋನೇಟ್‍ಗಳ ರೂಪದಲ್ಲಿರುತ್ತವೆ. ಇವುಗಳನ್ನು ಲೋಹದ ಆಕ್ಸೈಡ್ ರೂಪಕ್ಕೆ ಪರಿವರ್ತಿಸಿಕೊಂಡು ನಂತರ ಕಾರ್ಬನ್ ಅನ್ನು ಬಳಸಿ ಈ ಆಕ್ಸೈಡ್‍ಗಳನ್ನು ಕಾಯಿಸಿ ಲೋಹಗಳನ್ನು ಪಡೆಯುತ್ತಾರೆ.
ಥರ್ಮೈಟ್ ಕ್ರಿಯೆ
ಅತಿ ಹೆಚ್ಚು ಕ್ರಿಯಾಕಾರಿ ಗುಣಹೊಂದಿರುವ ಲೋಹವನ್ನು ಅತಿ ಕಡಿಮೆ ಕ್ರಿಯಾಕಾರಿ ಗುಣ ಹೊಂದಿರುವ ಲೋಹದೊಂದಿಗೆ ಪ್ರತಿವರ್ತಿಸುವುದನ್ನು ಥರ್ಮೈಟ್ ಕ್ರಿಯೆ ಎನ್ನುವರು. ಈ ಸ್ಥಾನಪಲ್ಲಟ ಕ್ರಿಯೆಯಲ್ಲಿ ಕಾರ್ಬನ್ ಅನ್ನು ಬಳಸುವರು
ರೈಲುಹಳಿಗಳ ನಡುವಿನ ಬಿರುಕನ್ನು ಸರಿಪಡಿಸಲು ಅಥವಾ ಇನ್ನಾವುದೇ ಮುರಿದ ಯಂತ್ರಗಳನ್ನು ಜೋಡಿಸಲು ಥರ್ಮೈಟ್ ಕ್ರಿಯೆಯನ್ನು ಬಳಸುವರು.
ಅತಿ ಕ್ರಿಯಾಶೀಲತೆ ಹೊಂದಿರುವ ಲೋಹಗಳಾದ ಸೋಡಿಯಂ, ಮೆಗ್ನೀಷಿಯಂ, ಕ್ಯಾಲ್ಷಿಯಂ, ಅಲ್ಯುಮಿನಿಯಂ ಲೋಹಗಳನ್ನು ವಿದ್ಯುದ್ವಿಭಜನೆ ಮೂಲಕ ಪಡೆಯುವರು. ಈ ವಿದ್ಯುದ್ವಿಭಜನೆಯಲ್ಲಿ ಲೋಹಗಳ ಕಣಗಳು ಋಣಾಗ್ರದ ಕಡೆಗೂ ಅವುಗಳ ಕ್ಲೋರೈಡ್‍ಗಳು ಧನಾಗ್ರದ ಕಡೆಗೂ ಸಂಗ್ರಹವಾಗುವವು.
ಬೆಳ್ಳಿಯು ಸಲ್ಫರ್ ನ ಜೊತೆ ವರ್ತಿಸಿ ಬೆಳ್ಳಿಯ ಸಲ್ಫೈಡ್ ಪದರವನ್ನು ಉಂಟುಮಾಡುತ್ತದೆ. ತಾಮ್ರವು ಗಾಳಿಯಲ್ಲಿರುವ ಇಂಗಾಲದ ಡೈ ಆಕ್ಸೈಡ್ ನ ಜೊತೆ ವರ್ತಿಸಿದಾಗ ಹಸಿರು ಬಣ್ಣದ ತಾಮ್ರದ ಕಾರ್ಬೋನೇಟ್‍ನ ಪದರವು ಮೇಲೆ ಕಾಣಿಸಿಗೊಳ್ಳುತ್ತದೆ. ಕಬ್ಬಿಣವು ಗಾಳಿಯಲ್ಲಿನ ತೇವಾಂಶದ ಜೊತೆಗೆ ವರ್ತಿಸಿದಾಗ ಕಬ್ಬಿಣದ ಆಕ್ಸೈಡ್ ಉಂಟಾಗುತ್ತದೆ.
ಈ ಮೇಲ್ಕಂಡ ರೀತಿಯಲ್ಲಿ ಲೋಹಗಳು ಹಲವು ರೀತಿಯಲ್ಲಿ ನಶಿಸುವುದನ್ನು ಕಾಣಬಹುದು. ಹಾಗೆ ಲೋಹಗಳು ನಶಿಸದೆ ಇರಲು ಗ್ಯಾಲ್ವನೀಕರಣ, ಕ್ರೋಮಿಯಂ ಲೇಪನ, ಅನೋಡಿಕರಣ ಅಥವಾ ಮಿಶ್ರಲೋಹಗಳನ್ನು ಮಾಡುವುದು ಮುಂತಾದ ಮಾರ್ಗಗಳನ್ನು ಅನುಸರಿಸುತ್ತಾರೆ.
ಉದಾ.. ಕಬ್ಬಿಣದ ನಶಿಸುವಿಕೆ ಅಂದರೆ ಅದು ತುಕ್ಕು ಹಿಡಿಯುವುದನ್ನು ತಡೆಯಲು ಕಬ್ಬಿಣದ ಜೊತೆಗೆ ನಿಕ್ಕಲ್, ಕ್ರೋಮಿಯಂ ಮತ್ತು ಕಾರ್ಬನ್ ಗಳನ್ನು ಬಳಸಿ ಸ್ಟೇನ್‍ಲೆಸ್ ಸ್ಟೀಲ್ ಅನ್ನು ಮಾಡುವರು. ಇದು ತುಕ್ಕು ಹಿಡಿಯದ ಕಠಿಣವಾದ ಮಿಶ್ರಲೋಹವಾಗಿದೆ.
ಮಿಶ್ರಲೋಹಗಳನ್ನು ತಯಾರಿಸುವಾಗ ಅದರಲ್ಲಿ ಪಾದರಸವನ್ನು ಬಳಸಿದ್ದರೆ ಅಂತಹ ಲೋಹವನ್ನು ಅಮಾಲ್ಗಂ ಎನ್ನುವರು
ಯಾವುದೇ ಮಿಶ್ರಲೋಹದ ವಿದ್ಯುದ್ವಾಹಕತೆ ಮತ್ತು ಕರಗುವ ಬಿಂದು ಶುದ್ಧಲೋಹಕ್ಕಿಂತ ಕಡಿಮೆ ಇರುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ