ಚಲನೆ
ಚಲನೆ
ಅದಿಶ ಎಂದರೆ ಎಷ್ಟು ದೂರ ಚಲಿಸಲಾಗಿದೆ ಎಂಬುದನ್ನು ಮಾತ್ರ ಪರಿಗಣಿಸುತ್ತದೆ.
ಸದಿಶ ಎಂದರೆ ಎಷ್ಟು ದೂರ ಚಲಿಸಲಾಗಿದೆ ಎಂಬುದರ ಜೊತೆಗೆ ಯಾವ ದಿಕ್ಕಿಗೆ ಚಲಿಸಲಾಗಿದೆ ಎಂಬುದನ್ನು ಸಹ ಪರಿಗಣಿಸಲಾಗುತ್ತದೆ.
ವಸ್ತು ಚಲಿಸಿದ ಪಥದ ಉದ್ದವನ್ನು ಚಲಿಸಿದ ದೂರ ಎನ್ನುತ್ತಾರೆ ಇದರ ಏಕಮಾನ - ಮೀಟರ್ (m)
ಒಂದು ಏಕಮಾನ ಕಾಲದಲ್ಲಿ ವಸ್ತು ಚಲಿಸಿದ ದೂರವನ್ನು ಜವ ಎನ್ನುತ್ತಾರೆ. ಇದರ ಏಕಮಾನ - ಮೀಟರ್ ಪರ್ ಸೆಕಂಡ್ (m/s-1) ಅಥವಾ (m/s).
ಒಂದು ವಸ್ತು ಚಲಿಸಿದ ಕನಿಷ್ಟ ದೂರವನ್ನು ಸ್ಥಾನಪಲ್ಲಟ ಎನ್ನುವರು. ಇದರ ಏಕಮಾನ - ಮೀಟರ್ (m)
ಒಂದು ಏಕಮಾನ ಕಾಲದಲ್ಲಾದ ವಸ್ತುವಿನ ಸ್ಥಾನಪಲ್ಲಟವನ್ನು ವೇಗ ಎನ್ನುತ್ತಾರೆ. ಇದರ ಏಕಮಾನ - ಮೀಟರ್ ಪರ್ ಸೆಕಂಡ್ (m/s-1) ಅಥವಾ (m/s)
ವಸ್ತುವಿನ ಜವವನ್ನು ಅಳೆಯುವ ಮಾಪನವನ್ನು ವೇಗಮಾಪಕ (ಸ್ಪೀಡೋಮೀಟರ್) ಎನ್ನುವರು
ವಸ್ತುವಿನ ಚಲಿಸಿದ ದೂರವನ್ನು ಅಳೆಯುವ ಮಾಪನವನ್ನು ದೂರಮಾಪಕ (ಓಡೋಮೀಟರ್) ಎನ್ನುವರು
ಒಂದು ವಸ್ತುವು ಚಲಿಸುತ್ತಿರುವಾಗ ಅದರ ವೇಗದಲ್ಲಿ ಎಲ್ಲಿಯೂ ಹೆಚ್ಚು ಅಥವಾ ಕಡಿಮೆ ಆಗದೆ ಇದ್ದರೆ ಅದನ್ನು ಏಕರೂಪದ ವೇಗೋತ್ಕರ್ಷ ಎನ್ನುವರು. ಉದಾ ಚಲಿಸುತ್ತಿರುವ ರೈಲು
ವಸ್ತುವು ಚಲಿಸುವಾಗ ಒಮ್ಮೆ ಹೆಚ್ಚು ವೇಗದಿಂದ ಒಮ್ಮೆ ಕಡಿಮೆ ವೇಗದಿಂದ ಚಲಿಸುತ್ತಾ ಹೋದರೆ ಅದನ್ನು ಅಸಮರೂಪದ ವೇಗೋತ್ಕರ್ಷ ಎನ್ನುವರು. ಉದಾ ಚಲಿಸುತ್ತಿರುವ ಬಸ್
ಇದರ ಏಕಮಾನ ಮೀಟರ್ ಪರ್ ಸೆಕಂಡ್ ಸ್ಕ್ವೆಯರ್ m/s2
ಚಲನೆಯ ಸಂಕೇತಗಳು
ಚಲಿಸಿದ ದೂರ = s
ಕಾಲ = t
ಆರಂಭಿಕ ವೇಗ = u
ಅಂತಿಮ ವೇಗ = v
ಚಲನೆಯ ವಿಧಗಳು
ಸರಳ ಸ್ಥಾನಾಂತರ ಚಲನೆ : ವಸ್ತು ನೇರವಾಗಿ ಚಲಿಸುತ್ತಿದ್ದರೆ ಅದನ್ನು ಸರಳ ಸ್ಥಾನಾಂತರ ಚಲನೆ ಎನ್ನುವರು. ಉದಾ - ಮರದಿಂದ ಬೀಳುತ್ತಿರುವ ಹಣ್ಣು, ನೇರವಾಗಿ ತಳ್ಳುತ್ತಿರುವ ಪೆಟ್ಟಿಗೆ ಇತ್ಯಾದಿ
ಭ್ರಮಣ ಚಲನೆ : ವಸ್ತು ಒಂದು ಅಕ್ಷದ ಸುತ್ತ ಚಲಿಸುತ್ತಿದ್ದರೆ ಆ ಚಲನೆಯನ್ನು ಭ್ರಮಣ ಚಲನೆ ಎನ್ನುವರು. ಇದನ್ನು ಏಕರೂಪ ವೃತ್ತೀಯ ಚಲನೆ ಸಹ ಎನ್ನುವರು. ಉದಾ - ಬುಗುರಿಯ ಚಲನೆ, ಚಕ್ರದ ಚಲನೆ, ಗ್ರಹಗಳ ಚಲನೆ ಇತ್ಯಾದಿ
ಆವರ್ತಕ/ಆಂದೋಲನ ಚಲನೆ : ವಸ್ತುವಿನ ಚಲನೆ ಏಕರೀತಿಯಲ್ಲಿ ಪುನರಾವರ್ತನೆಯಾಗುತ್ತಿದ್ದರೆ ಅದನ್ನು ಆವರ್ತಕ/ಆಂದೋಲನ ಚಲನೆ ಎನ್ನುವರು. ಉದಾ; ಗಡಿಯಾರದ ಲೋಲಕದ ಚಲನೆ, ಉಯ್ಯಾಲೆಯ ಚಲನೆ, ಎಲೆ ಮತ್ತು ಕೊಂಬೆಗಳ ಹೊಯ್ದಾಡುವಿಕೆಯ ಚಲನೆ ಇತ್ಯಾದಿ.
ತರಂಗ ಚಲನೆ : ಮಾಧ್ಯಮದಲ್ಲಿ ಕಣಗಳ ಕಂಪನದಿಂದ ಉಂಟಾದ ಚಲನೆಯನ್ನು ತರಂಗ ಚಲನೆ ಎನ್ನುವರು. ಉದಾ; ನೀರಿನ ಅಲೆಗಳ ಚಲನೆ, ಶಬ್ದದ ಚಲನೆ, ವಿದ್ಯುತ್ ಕಾಂತೀಯ ತರಂಗಗಳ ಚಲನೆ.
ಸಂತುಲಿತ ಬಲ ಮತ್ತು ಅಸಂತುಲಿತ ಬಲ
ಒಂದು ವಸ್ತುವಿನ ಮೇಲೆ ಒಂದೇ ಸಮಯದಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಬಲಗಳು ಪ್ರಯೋಗವಾಗಿ ಆ ವಸ್ತುವನ್ನು ಚಲಿಸದಂತೆ ಮಾಡಿದರೆ ಅದನ್ನು ಸಂತುಲಿತ ಬಲ ಎನ್ನುವರು. ಆದರೆ ವಸ್ತುವಿನ ಮೇಲೆ ಒಂದೇ ಕಡೆಯಿಂದ ಮಾತ್ರ ಬಲ ಪ್ರಯೋಗವಾಗಿ ವಸ್ತುವು ಚಲಿಸುವಂತೆ ಮಾಡಿದರೆ ಅದನ್ನು ಅಸಂತುಲಿತ ಬಲ ಎನ್ನುವರು.
ನ್ಯೂಟನ್ ಚಲನೆಯ ನಿಯಮಗಳು
1. ಜಡತ್ವದ ನಿಯಮ : ಒಂದು ವಸ್ತುವಿನ ಮೇಲೆ ಬಲಪ್ರಯೋಗವಾದಾಗ ಮಾತ್ರ ಅದು ತನ್ನ ಸ್ಥಾನವನ್ನು ಬದಲಿಸುತ್ತದೆ ಇಲ್ಲವಾದರೆ ನಿಶ್ಚಲವಾಗಿರುತ್ತದೆ/ಜಡವಾಗಿರುತ್ತದೆ.
ಉದಾ - ಚಲಿಸುತ್ತಿರುವ ಬಸ್ಸಿನಲ್ಲಿ ಕುಳಿತಿದ್ದಾಗ ಬಸ್ಸಿಗೆ ಬ್ರೇಕ್ ಬಿದ್ದು ನಾವು ಮುಂದಕ್ಕೆ ಚಲಿಸಿದ ಹಾಗೆ ಆಗುವುದು, ಬೆಡ್ಶೀಟ್ ಅನ್ನು ತೂರಿದಾಗ ಧೂಳಿನ ಕಣಗಳು ಚಿಮ್ಮಿ ಹಾರುವುದು ಇತ್ಯಾದಿ.
ನ್ಯೂಟನ್‍ನ ಚಲನೆಯ ಮೊದಲನೆ ನಿಯಮವು ಗೆಲಿಲಿಯೋನ ಸಂಶೋಧನೆಗಳನ್ನು ಆಧರಿಸಿದೆ. ಯಾವುದೇ ವಸ್ತುವು ಜಡವಾಗಿರಲು ಅದರ ರಾಶಿಯೇ ಪ್ರಮುಖ ಕಾರಣವಾಗಿರುತ್ತದೆ. ರಾಶಿ ಎಂಬುದು ವಸ್ತುವಿನ ಗಾತ್ರ ಮತ್ತು ತೂಕವನ್ನು ಒಳಗೊಂಡಿರುವುದಾಗಿದೆ. ಅಂದರೆ ವಸ್ತುವಿನ ತೂಕ ಮತ್ತು ಗಾತ್ರ ಹೆಚ್ಚಾದಷ್ಟು ವಸ್ತುವು ಹೆಚ್ಚು ಜಡವಾಗಿರುತ್ತದೆ ಮತ್ತು ಚಲನೆಗೆ ಪ್ರತಿರೋಧ ಒಡ್ಡುತ್ತದೆ. ಜಡತ್ವದ ಅಂತರಾಷ್ಟ್ರೀಯ ಏಕಮಾನ kg
2. ಸಂವೇಗದ ನಿಯಮ : ಒಂದು ವಸ್ತುವಿನ ವೇಗೋತ್ಕರ್ಷವು ಆ ವಸ್ತುವಿನ ಮೇಲೆ ಪ್ರಯೋಗವಾದ ಬಲಕ್ಕೆ ಅನುಕೂಲಕರವಾಗಿಯೂ ಮತ್ತು ಆ ವಸ್ತುವಿನ ರಾಶಿಗೆ ವಿರುದ್ಧವಾಗಿಯೂ ಇರುತ್ತದೆ. ಅಂದರೆ ಒಂದು ವಸ್ತುವಿನ ಮೇಲೆ ಬಲ ಪ್ರಯೋಗವಾದಾಗ ಆ ವಸ್ತುವಿನ ರಾಶಿ (ತೂಕ ಮತ್ತು ಗಾತ್ರ) ಹೆಚ್ಚಾಗಿದ್ದರೆ ವಸ್ತುವು ಹೆಚ್ಚು ದೂರ ಚಲಿಸುವುದಿಲ್ಲ ಒಂದು ವೇಳೆ ಚಲಿಸಿದರೂ ಬೇಗನೆ ವಸ್ತುವಿನ ವೇಗ ಕಡಿಮೆಯಾಗುತ್ತದೆ. ಅದೇ ರಾಶಿ ಕಡಿಮೆಯಿದ್ದರೆ ವಸ್ತು ಹೆಚ್ಚು ದೂರ ಚಲಿಸುತ್ತದೆ ಮತ್ತು ಅದರ ವೇಗ ಹೆಚ್ಚು ಕಾಲ ಇರುತ್ತದೆ. ಸಂವೇಗದ ನಿಯಮವು ವಸ್ತುವಿನ ಮೇಲೆ ಪ್ರಯೋಗವಾದ ಬಲ ಮತ್ತು ವಸ್ತುವಿನ ರಾಶಿ ಎರಡರ ಸಂತುಲಿತವಾಗಿದೆ.
ಸಂವೇಗದ ಅಂತರಾಷ್ಟ್ರೀಯ ಏಕಮಾನ (kgms-1)
ಬಲದ ಅಂತರಾಷ್ಟ್ರೀಯ ಏಕಮಾನ (kgms-2)
ಉದಾ - ಬ್ಯಾಟ್ ಇಂದ ಹೊಡೆಯಲ್ಪಟ್ಟ ಚೆಂಡು, ಕಾಲಿನಿಂದ ಹೊಡೆದ ಚೆಂಡು ಇತ್ಯಾದಿ
3. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನಿಯಮ : ಪ್ರತಿಯೊಂದು ಕ್ರಿಯೆಗೂ ಅದಕ್ಕೆ ಸಮನಾದ ಮತ್ತು ವಿರುದ್ದವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ.
ಉದಾ - ರಾಕೆಟ್ ಉಡಾವಣೆ, ಬಂದೂಕಿನಿಂದ ಹಾರಿದ ಗುಂಡು, ದೋಣಿಗಳ ಚಲನೆ ಇತ್ಯಾದಿ
ಬಲಪ್ರಯೋಗವಾದ ದಿಕ್ಕಿನಲ್ಲಿ ವಸ್ತುವಿನ ಸ್ಥಾನಪಲ್ಲಟವನ್ನು ಕೆಲಸ ಎನ್ನುತ್ತಾರೆ. ಕೆಲಸದ ಏಕಮಾನ ಜೌಲ್ (A)
ಕೆಲಸ ಮಾಡುವ ದರವೇ ಸಾಮರ್ಥ್ಯ ಇದರ ಏಕಮಾನ ವ್ಯಾಟ್ (W)
ಬಲದ ಏಕಮಾನ kgms-2 ಅಥವಾ ನ್ಯೂಟನ್ (N)
ಕೆಲಸ ಮಾಡಲು ಬೇಕಾದ ಸಾಮರ್ಥ್ಯವನ್ನು ಶಕ್ತಿ ಎನ್ನುವರು. ಶಕ್ತಿಯ ಏಕಮಾನ ಜೌಲ್ (A)
ಶಕ್ತಿಯ ವಿಧಗಳು
ಚಲನ ಶಕ್ತಿ : ಹರಿಯುವ ನೀರು, ಬೀಸುವ ಗಾಳಿ ಇತ್ಯಾದಿ.
ಪ್ರಚ್ಛನ್ನ ಶಕ್ತಿ : ಅಣೆಕಟ್ಟುಗಳಲ್ಲಿ ಸಂಗ್ರಹಗೊಂಡ ನೀರು, ಬಲೂನಿನಲ್ಲಿ ತುಂಬಿರುವ ಗಾಳಿ ಇತ್ಯಾದಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ