ಉಷ್ಣ
ಉಷ್ಣ
ಒಂದು ವಸ್ತುವಿನಲ್ಲಿರುವ ಎಲ್ಲಾ ಅಣುಗಳ ಚಲನಶಕ್ತಿಯೇ ಉಷ್ಣ. ಉಷ್ಣದ ಅಂತರರಾಷ್ಟ್ರೀಯ ಏಕಮಾನ ಜೌಲ್ (J)
ಒಂದು ವಸ್ತುವಿನ ಬಿಸಿಯ ಅಥವಾ ತಣ್ಣಗಿನ ಮಟ್ಟದ ಅಳತೆಯೇ ತಾಪ. ತಾಪದ ಅಂತರರಾಷ್ಟ್ರೀಯ ಏಕಮಾನ ಕೆಲ್ವಿನ್ (K)
ಒಂದು ಗ್ರಾಂ ನೀರಿನ ತಾಪವನ್ನು 1 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಿಸಲು ನೀಡುವ ಉಷ್ಣದ ಪ್ರಮಾಣವನ್ನು ಒಂದು ಕ್ಯಾಲೊರಿ ಎನ್ನುವರು.
1 ಕಿಲೊಗ್ರಾಂ ತೂಕದ ವಸ್ತುವಿನ ತಾಪವನ್ನು 1 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಿಸಲು ಬೇಕಾದ ತಾಪವನ್ನು ವಿಶಿಷ್ಟೋಷ್ಣ ಎನ್ನುವರು
1 ಕಿಲೊಗ್ರಾಂ ತೂಕದ ಘನವಸ್ತುವನ್ನು ತಾಪ ಹೆಚ್ಚಿಸದೆ ಸಂಪೂರ್ಣವಾಗಿ ದ್ರವರೂಪದ ಸ್ಥಿತಿಗೆ ತರುವುದನ್ನು ಗುಪ್ತೋಷ್ಣ ಎನ್ನುವರು.
ಉಷ್ಣದಿಂದ ಲೋಹಗಳು ವಿಕಸಿಸುತ್ತವೆ ಅದೇ ಉಷ್ಣವನ್ನು ತೆಗೆದಾಗ ಸಂಕುಚಿತವಾಗುತ್ತವೆ. ಲೋಹಗಳ ಈ ಗುಣದಿಂದ ಲೋಹಗಳನ್ನು ನಮ್ಮ ದಿನನಿತ್ಯದ ಅನೇಕ ಕೆಲಸಗಳಿಗೆ ಬಳಸಿಕೊಳ್ಳಬಹುದು.
ಉಷ್ಣತಾಮಾಪಕಗಳಲ್ಲಿ ಪಾದರಸ ಅಥವಾ ಕೆಂಪು ಆಲ್ಕೊಹಾಲ್ ಅನ್ನು ಬಳಸುತ್ತಾರೆ.
ಆರೋಗ್ಯವಂತ ಮನುಷ್ಯನ ತಾಪ ಸು. 37 ಡಿಗ್ರಿ ಸೆಲ್ಸಿಯಸ್/98.6 ಡಿಗ್ರಿ ಫ್ಯಾರನ್ ಹೀಟ್ ಇರುತ್ತದೆ.
ನೀರಿನಲ್ಲಿ ವಿಲೀನವಾಗುವ ಲವಣಗಳು ಇದ್ದಲ್ಲಿ ನೀರಿನ ಕುದಿಬಿಂದು ಹೆಚ್ಚಾಗಿರುತ್ತದೆ. ವಾತಾವರಣದಲ್ಲಿನ ಒತ್ತಡವು ಸಹ ನೀರಿನ ಕುದಿಬಿಂದುವಿನ ಮೇಲೆ ಪರಿಣಾಮ ಬೀರುತ್ತದೆ.
ನೀರಿನ ಸಾಮಾನ್ಯ ತಾಪ ಸೆಲ್ಸಿಯಸ್ ನಲ್ಲಿ 0 ಡಿಗ್ರಿ, ಫ್ಯಾರನ್ ಹೀಟ್ ನಲ್ಲಿ 32 ಡಿಗ್ರಿ ಮತ್ತು ಕೆಲ್ವಿನ್ ನಲ್ಲಿ 273.15 ಡಿಗ್ರಿ ಇರುತ್ತದೆ.
0 ಡಿಗ್ರಿ ಸೆಲ್ಸಿಯಸ್ ಗೆ 273 ಅನ್ನು ಸೇರಿಸಿದಾಗ ನಮಗೆ ಕೆಲ್ವಿನ್ ತಾಪ ಸಿಗುತ್ತದೆ. ನೀರಿನ ತಾಪ 100 ಡಿಗ್ರಿ ಸೆಲ್ಸಿಯಸ್ ಇದ್ದಾಗ ಕೆಲ್ವಿನ್ ನಲ್ಲಿ 373 ಡಿಗ್ರಿ ಇರುತ್ತದೆ.
ತಾಪವನ್ನು ಫ್ಯಾರನ್ ಹೀಟ್ ನಿಂದ ಸೆಲ್ಸಿಯಸ್ ಗೆ ಬದಲಾಯಿಸಲು C = 5/9 (F-32) ಸೂತ್ರವನ್ನು ಬಳಸಲಾಗುತ್ತದೆ.
ಫ್ಯಾರನ್ ಹೀಟ್ ನಿಂದ ಸೆಲ್ಸಿಯಸ್ ಗೆ ಬದಲಾಯಿಸುವಾಗ ಫ್ಯಾರನ್ ಹೀಟ್ ಸಂಖ್ಯೆಯಲ್ಲಿ 32 ಅನ್ನು ಕಳೆದು ಬಂದ ಸಂಖ್ಯೆಯನ್ನು 5 ರಿಂದ ಗುಣಿಸಿ ನಂತರ 9 ರಿಂದ ಭಾಗಿಸಬೇಕು
ಸೆಲ್ಸಿಯಸ್ ನಿಂದ ಫ್ಯಾರನ್ ಹೀಟ್ ಗೆ ಬದಲಾಯಿಸುವಾಗ ಸೆಲ್ಸಿಯಸ್ ಸಂಖ್ಯೆಯನ್ನು 9 ರಿಂದ ಗುಣಿಸಿ 5 ರಿಂದ ಭಾಗಿಸಿ ಕೊನೆಗೆ 32 ಅನ್ನು ಕೂಡಬೇಕು.
ಸೆಲ್ಸಿಯಸ್ = ಸಂಕೇತ C
ಫ್ಯಾರನ್ ಹೀಟ್ = ಸಂಕೇತ F
ಕೆಲ್ವಿನ್ = ಸಂಕೇತ K
ಉಷ್ಣದಿಂದ ವಸ್ತುಗಳ ಸ್ಥಿತಿಯಲ್ಲಾಗುವ ಬದಲಾವಣೆ
ದ್ರವೀಕರಣ : ವಸ್ತುಗಳು ಘನರೂಪದಿಂದ ದ್ರವರೂಪಕ್ಕೆ ಬದಲಾಗುವುದು.
ಉದಾ - ಬೆಣ್ಣೆ ತುಪ್ಪವಾಗುವುದು, ಮಂಜುಗಡ್ಡೆ ನೀರಾಗುವುದು ಇತ್ಯಾದಿ
ಆವೀಕರಣ : ದ್ರವರೂಪದಿಂದ ಅನಿಲ ರೂಪಕ್ಕೆ ಬದಲಾಗುವುದು
ಉದಾ - ಬಿಸಿಗೆ ನೀರು ಆವಿಯಾಗುವುದು
ಸಾಂದ್ರೀಕರಣ : ಉಷ್ಣ ಕಡಿಮೆಯಾದಾಗ ವಸ್ತುಗಳು ಅನಿಲ ರೂಪದಿಂದ ದ್ರವರೂಪಕ್ಕೆ ಬದಲಾಗುವುದು
ಉದಾ - ಬಿಸಿ ಅವಿ ನೀರಾಗುವುದು
ಘನೀಕರಣ : ದ್ರವರೂಪದ ವಸ್ತುಗಳು ಘನರೂಪಕ್ಕೆ ಬದಲಾಗುವುದು
ಉದಾ - ಚಳಿಗಾಲದಲ್ಲಿ ನೀರು ಮಂಜುಗಡ್ಡೆ ಆಗುವುದು, ಎಣ್ಣೆ/ತುಪ್ಪ ಗಟ್ಟಿಯಾಗುವುದು ಇತ್ಯಾದಿ
1 ಮೀಟರ್ ಉದ್ದದ ಸಲಾಖೆಗೆ 1 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪ ನೀಡಿದಾಗ ಆ ಸಲಾಖೆಯ ಉದ್ದದಲ್ಲಿ ಆಗುವ ಹೆಚ್ಚಳವನ್ನು ರೇಖೀಯ ವ್ಯಾಕೋಚನ ಎನ್ನುವರು. ಇದರ ಏಕಮಾನ ಪರ್ ಡಿಗ್ರಿ ಸೆಲ್ಸಿಯಸ್ (/°C)) . ರೈಲ್ವೆ ಹಳಿಗಳ ಜೋಡಣೆಯಲ್ಲಿ ಇದನ್ನು ಬಳಸುತ್ತಾರೆ.
ಉಷ್ಣದ ಅವಾಹಕ ವಸ್ತುಗಳಿಗೆ ಉಷ್ಣವನ್ನು ನೀಡಿದಾಗ ಗಾಜಿನ ವಸ್ತುಗಳಾದರೆ ಒಡೆದು ಹೋಗುತ್ತವೆ, ಪ್ಲಾಸ್ಟಿಕ್ ವಸ್ತುಗಳು ಆಕಾರ ಬದಲಿಸುತ್ತವೆ. ಕಾರಣ ಉಷ್ಣದ ಸಂಪರ್ಕದಲ್ಲಿರುವ ಭಾಗ ವ್ಯಾಕೋಚಿಸುತ್ತದೆ, ಆದರೆ ಉಷ್ಣದ ಸಂಪರ್ಕದಲ್ಲಿಲ್ಲದ ವಸ್ತು ಹಾಗೆಯೇ ಉಳಿಯುತ್ತದೆ.
ನೀರಿನ ಅಸಂಬದ್ಧ ವಿಕಾಸ : ನೀರನ್ನು ತಂಪು ಮಾಡುತ್ತಾ ಹೋದಂತೆ ಅದು 4 ಡಿಗ್ರಿ ಸೆಲ್ಸಿಯಸ್ ಗೆ ಬಂದಾಗ ನೀರು ಸಂಕೋಚನಕ್ಕೊಳಗಾಗುತ್ತದೆ. ನಂತರ ನೀರು ಮಂಜುಗಡ್ಡೆಯಾಗುವವರೆಗೆ ವ್ಯಾಕೋಚನ ಹೊಂದುತ್ತದೆ. ನೀರಿನ ಈ ಸ್ವಭಾವವನ್ನು ನೀರಿನ ಅಸಂಬದ್ಧ ವಿಕಾಸ ಎನ್ನುವರು.
ನೀರಿನ ಮೇಲಿನ ಮಂಜುಗಡ್ಡೆಯು ಉಷ್ಣ ನಿರೋಧಕವಾಗಿದ್ದು ನೀರಿನ ತಾಪವನ್ನು ಕಾಪಾಡುತ್ತದೆ.
ಉಷ್ಣ ವಹನ : ಮಾಧ್ಯಮದಲ್ಲಿ ಕಣಗಳ ಕಂಪನದಿಂದ ಉಂಟಾದ ಉಷ್ಣ ಪ್ರಸಾರ. ಉದಾ ಲೋಹದ ತಂತಿಯನ್ನು ಕಾಯಿಸಿದಾಗ ಇನ್ನೊಂದು ತುದಿ ಸಹ ಬಿಸಿಯಾಗುತ್ತದೆ.
ಉಷ್ಣ ಸಂವಹನ : ಮಾಧ್ಯಮದಲ್ಲಿ ಕಣಗಳ ಚಲನೆಯಿಂದ ಉಂಟಾದ ಉಷ್ಣಪ್ರಸಾರ. ನೀರನ್ನು ಕಾಯಿಸಿದಾಗ ತಳಭಾಗದಲ್ಲಿ ಬಿಸಿಯಾದ ನಿರಿನ ಅಣುಗಳು ಮೇಲಭಾಗಕ್ಕೆ ಚಲಿಸುತ್ತವೆ. ಮೇಲ್ಭಾಗದಲ್ಲಿರುವ ತಂಪಾದ ನೀರಿನ ಕಣಗಳು ತಳಭಾಗಕ್ಕೆ ಸೇರುತ್ತವೆ.
ಉಷ್ಣ ವಿಕಿರಣ : ಮಾಧ್ಯಮ ಇಲ್ಲದೆಯೇ ಉಷ್ಣ ಪ್ರಸಾರವಾಗುವಿಕೆ. ಸೂರ್ಯನ ಕಿರಣಗಳ ಶಾಖ ಭೂಮಿಗೆ ತಲುಪುವುದು.
ಉಷ್ಣ ಎಂಜಿನ್ : ಉಷ್ಣ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ. ಇದನ್ನು ಹಬೆ ಎಂಜಿನ್ ಎಂತಲು ಕರೆಯುವರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ