ಪೊರೆರಹಿತ ಕಣದಂಗಗಳು

 ಪೊರೆರಹಿತ ಕಣದಂಗಗಳು

ರೈಬೋಸೋಮ್

ರೈಬೋಸೋಮ್‍ಗಳು ಪ್ರೋಟೀನ್‍ಗಳ ಸಂಶ್ಲೇಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೋಶಕೇಂದ್ರದ ಆರ್‌ಎನ್ಎ ಬಳಸಿ ಅಮಿನೊ ಆಮ್ಲಗಳಿಂದ ಪ್ರೋಟೀನ್ ಅನ್ನು ಉತ್ಪಾದಿಸುತ್ತವೆ. ಆದ್ದರಿಂದ ಇವುಗಳನ್ನು ಜೀವಕೋಶದ ಪ್ರೋಟೀನ್ ಕಾರ್ಖಾನೆಗಳು ಎನ್ನುವರು.

ಸೆಂಟ್ರಿಯೋಲ್

ಸೆಂಟ್ರಿಯೋಲ್‍ಗಳು ಸೆಂಟ್ರೊಸೋಮ್‌ಗಳಲ್ಲಿ ಕಂಡುಬರುತ್ತವೆ. ಅವು ಜೀವಕೋಶ ವಿಭಜನೆಯಾಗುವ ಸಮಯದಲ್ಲಿ ಬೇರ್ಪಡುತ್ತವೆ. ಜೀವಕೋಶಗಳು ಮೈಟಾಸಿಸ್ ಮತ್ತು ಮಿಯಾಸಿಸ್ ರೀತಿಯಲ್ಲಿ ವಿಭಜನೆಯಾಗುವಾಗ ವರ್ಣತಂತುಗಳು ಇಬ್ಭಾಗವಾಗಲು ಸಹಾಯ ಮಾಡುವ ಆಧಾರ ತಂತಿ ರೂಪಗೊಳ್ಳಲು ಸೆಂಟ್ರಿಯೋಲ್‍ಗಳು ಸಹಾಯ ಮಾಡುತ್ತವೆ. ಕೆಲವು ಶಿಲೀಂಧ್ರಪಾಚಿ ಮತ್ತು ಪ್ರಾಣಿ ಜೀವಕೋಶಗಳಲ್ಲಿ ಒಂದೇ ಸೆಂಟ್ರೊಸೋಮ್ ಕಂಡುಬರುತ್ತದೆ.

ಕ್ಯಾಪ್ಸೂಲ್

ಕೆಲವು ಬ್ಯಾಕ್ಟೀರಿಯಗಳಲ್ಲಿ ಕೋಶಪೊರೆ ಮತ್ತು ಕೋಶಭಿತ್ತಿ ಹೊರಗೆ ಜಿಲಿಟಿನ್‌ನಂತಹ ಕ್ಯಾಪ್ಸೂಲ್‌ ಇರುತ್ತದೆ.

ಕಶಾಂಗ

ಕಶಾಂಗಗಳು ಜೀವಕೋಶದ ಚಲನೆಯ ಅಂಗಗಳಾಗಿದ್ದು ಇವು ಪ್ರೋಟೀನ್‌ನಿಂದ ಮಾಡಲ್ಪಟ್ಟಿರುತ್ತವೆ.

ಫಿಂಬ್ರಿಯ

ಫಿಂಬ್ರಿಯ (ಪೈಲಸ್‌) ಬ್ಯಾಕ್ಟಿರೀಯದ ಹೊರಮೈ ಮೇಲೆ ಇರುವ ಸಣ್ಣ ತೆಳುವಾದ ಕೂದಲಿನಂತಹ ವಸ್ತು. ಫಿಂಬ್ರಿಯಗಳು ಪಿಲಿನ್‌ ಎಂಬ ಪ್ರೋಟೀನ್‌ನಿಂದ ಮಾಡಲ್ಪಟ್ಟಿವೆ. ಅವು ಬೇರೆ ಪ್ರಾಣಿಯ ಜೀವಕೋಶಗಳಿಗೆ ಮತ್ತು ಕೆಲವು ವಸ್ತುಗಳಿಗೆ ಅಂಟಿಕೊಳ್ಳಲು ನೆರವಾಗುತ್ತವೆ.

ರಸದಾನಿ

ಇವು ಜೀವಕೋಶದ ಸಂಗ್ರಹಾಗಾರಗಳಾಗಿದ್ದು ಆಹಾರಹೆಚ್ಚಾದ ನೀರು ಮತ್ತು ತ್ಯಾಜ್ಯವಸ್ತುಗಳನ್ನು ಶೇಖರಿಸುತ್ತವೆ ಜೊತೆಗೆ ಆಹಾರ ಪಚನಕ್ರಿಯೆಯಲ್ಲಿ ಸಹಾಯಕವಾಗಿವೆ. ಬಹುತೇಕ ಪ್ರೋಟೋಜೋವಗಳಲ್ಲಿ ರಸದಾನಿಗಳು ಕಂಡುಬರುತ್ತವೆ.

ಕಿರುಕೋಶಕೇಂದ್ರ

ಕೋಶಕೇಂದ್ರದೊಳಗೆ ಕಂಡುಬರುವ ಕಿರುಕೋಶಕೆಂದ್ರವು ಯಾವುದೇ ಪೊರೆಯಿಂದ ಆವೃತವಾಗಿಲ್ಲ. ಇದು ರೈಬೋಸೋಮ್‍ಗಳನ್ನು ಉತ್ಪತ್ತಿ ಮಾಡುತ್ತದೆ.

ವಂಶವಾಹಿಗಳು

ಡಿ.ಎನ್.ಎ : ಜೀವಕೋಶವು ದೀರ್ಘಾವಧಿಯ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಡಿ.ಎನ್‌.ಎ ಅನ್ನು ಬಳಸುತ್ತದೆ. ಡಿ.ಎನ್.ಎ ಪ್ರೊಕ್ಯಾರಿಯೋಟ್ ಜೀವಕೋಶಗಳಲ್ಲಿ ಸ್ವತಂತ್ರವಾಗಿ ಕಂಡುಬರುತ್ತದೆ. ಆದರೆ ಯುಕ್ಯಾರಿಯೋಟ್ ಜೀವಕೋಶಗಳಲ್ಲಿ ಕೋಶಕೇಂದ್ರ ಇರುವುದರಿಂದ ಕೋಶಕೇಂದ್ರದ ಒಳಗೆ ಕಂಡುಬರುತ್ತದೆ.

ಆರ್.ಎನ್.ಎ : ಆರ್‌ಎನ್ಎ ಮಾಹಿತಿ ರವಾನೆ ಮತ್ತು ಕಿಣ್ವಗಳ ಕೆಲಸಮಾಡುವಿಕೆಯಲ್ಲಿ ಬಳಕೆಯಾಗುತ್ತದೆ.

ಮೆಟಬಾಲಿಸಂ

ಮೆಟಬಾಲಿಸಂ ಎಂಬುದು ಜೀವಕೋಶದ ಒಳಗೆ ನಡೆಯುವಂತಹ ಜೀವರಾಸಾಯನಿಕ ಕ್ರಿಯೆಯಾಗಿದೆ. ಈ ಮೆಟಬಾಲಿಸಂನಲ್ಲಿ ಕೆಟಬಾಲಿಸಂ ಮತ್ತು ಅನಬಾಲಿಸಂ ಎಂದು ಎರಡು ವಿಧಗಳಿವೆ. 

ಕೆಟಬಾಲಿಸಂನಲ್ಲಿ ಜೀವಕೋಶವು ದೊಡ್ಡದಾದ ಮತ್ತು ಸಂಕೀರ್ಣ ಅಣುಗಳನ್ನು ಒಡೆದು ಚಿಕ್ಕದಾದ ಮತ್ತು ಸರಳವಾದ ಮೊನೋಸ್ಯಾಕರೈಡ್‌ ಅಣುಗಳನ್ನಾಗಿ ಬದಲಾಯಿಸುತ್ತದೆ. ಕೆಟಬಾಲಿಸಂನಲ್ಲಿ ಶಕ್ತಿಯು ಅಡಿನೋಸಿನ್ ಟ್ರೈ ಫಾಸ್ಪೇಟ್ (ಎಟಿಪಿ) ರೂಪದಲ್ಲಿ ಬಿಡುಗಡೆಯಾಗುತ್ತದೆ. 

ಅನಬಾಲಿಸಂನಲ್ಲಿ ಎಟಿಪಿ ಶಕ್ತಿಯನ್ನು ಬಳಸಿಕೊಂಡು ಚಿಕ್ಕ ಮತ್ತು ಸರಳ ಅಣುಗಳನ್ನು ದೊಡ್ಡ ಮತ್ತು ಸಂಕೀರ್ಣ ಅಣುಗಳಾಗಿ ಬದಲಾಯಿಸಲಾಗುತ್ತದೆ.

ಕಾಮೆಂಟ್‌ಗಳು