ರಕ್ತ
ರಕ್ತ
ಮಾನವನ ರಕ್ತದಲ್ಲಿ ಎರಿಥ್ರೋಸೈಟ್ಸ್, ನ್ಯೂಟ್ರೋಫಿಲ್, ಮ್ಯಾಕ್ರೋಫೇಸಸ್, ಎಸಿನೋಫಿಲ್, ಲಿಂಫೋಸೈಟ್ ಎಂಬ ಕಣಗಳು ಕಂಡುಬರುತ್ತವೆ. ಈ ಕಣಗಳೆಲ್ಲವೂ ದೇಹದಲ್ಲಿ ಸೇರಿಕೊಂಡ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ ದೇಹಕ್ಕೆ ರಕ್ಷಣೆ ನೀಡುತ್ತವೆ.
ದೇಹದ ಎಲ್ಲಾ ಭಾಗಗಳಿಗೂ ರಕ್ತ ಅಗತ್ಯ ವಸ್ತುಗಳನ್ನು ಸಾಗಾಣಿಕೆ ಮಾಡುವುದರಿಂದ ರಕ್ತವನ್ನು ಕನೆಕ್ಟೀವ್ ಟಿಶ್ಯೂ ಎನ್ನುತ್ತಾರೆ.
ರಕ್ತ ಪ್ಲಾಸ್ಮ ಎಂಬ ಜೀವರಸದಿಂದ ಕೂಡಿದ್ದು, ಅದರಲ್ಲಿ ವ್ಯವಸ್ಥಿತ ಪ್ರಮಾಣದಲ್ಲಿ ಕೆಂಪು ರಕ್ತಕಣಗಳು, ಬಿಳಿರಕ್ತಕಣಗಳು ಮತ್ತು ಪ್ಲೇಟ್ ಲೆಟ್ ಎಂಬ ಜೀವಕೋಶಗಳು ತೇಲುತ್ತಿರುತ್ತವೆ. ಈ ಪ್ಲಾಸ್ಮ ಶೇ. 91-92 % ರಷ್ಟು ನೀರಿನಿಂದ ಕೂಡಿದ್ದು, ಉಳಿದ ಶೇಕಡ 7.5% ರಷ್ಟು ಭಾಗ ಸಾರಜನಕ, ಯೂರಿಯ, ಆಸಿಡ್, ಕ್ರಿಯಾಟಿನಿನ್, ಅಮೋನಿಯಾ, ಅಮೈನೋ ಆಸಿಡ್, ಗ್ಜಾಂಥಿನ್ ಎಂಬ ಘನವಸ್ತುಗಳಿಂದಾಗಿದೆ.
ಇದರ ಜೊತೆಗೆ ಸೋಡಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಮ್, ಮೆಗ್ನೀಶಿಯಮ್, ಫಾಸ್ಫರಸ್, ಮೊದಲಾದ ನಿರವಯವ ಪದಾರ್ಥಗಳು. ಪಿಷ್ಟ, ಗ್ಲೂಕೋಸ್, ಕೊಬ್ಬು (ಕೊಲೆಸ್ಟರಾಲ್) ಟ್ರೈಗ್ಲಿಸರೈಡ್, ನಾನಾ ತರಹದ ಹಾರ್ಮೋನುಗಳು, ಕಿಣ್ವಗಳು, ಪ್ರತಿರೋಧಕಗಳು, ಗ್ಸಾಂಥೋಫಿಲಿನ್, ಕೆರೋಟಿನ್ ಮುಂತಾದ ಪದಾರ್ಥಗಳು ಕಂಡುಬರುತ್ತವೆ.
ರಕ್ತದ ಕಾರ್ಯ
ಆಮ್ಲಜನಕವನ್ನು ಶ್ವಾಸಕೋಶದಿಂದ ದೇಹದ ಎಲ್ಲಾ ಅಂಗಾಂಶಗಳಿಗೂ, ಇಂಗಾಲದ ಡೈ ಆಕ್ಸೈಡನ್ನು ದೇಹದ ಎಲ್ಲಾ ಅಂಗಗಳಿಂದ ಶ್ವಾಸಕೋಶಕ್ಕೂ ತರುವ ಕೆಲಸ ಮಾಡುತ್ತದೆ.
ಜೀರ್ಣವಾದ ಆಹಾರ ಪದಾರ್ಥಗಳನ್ನು ಕರುಳಿನಿಂದ ದೇಹದ ಇತರ ಅಂಗಾಂಗಗಳಿಗೆ ಒದಗಿಸುತ್ತದೆ. ತಿಂದ ಆಹಾರದಲ್ಲಿರುವ ವಿಟಮಿನ್, ಶಕ್ತಿ, ಕೊಬ್ಬಿನಂಶ ಹಾಗೂ ದೇಹದಲ್ಲೇ ಉತ್ಪತ್ತಿಯಾಗುವ ಹಾರ್ಮೋನುಗಳನ್ನು ನಿರ್ದಿಷ್ಟ ಸ್ಥಳಕ್ಕೆ ಸೇರಿಸಲು ಸಹಾಯಮಾಡುತ್ತವೆ. ದೇಹಕ್ಕೆ ಬೇಡವಾದ ವಸ್ತುಗಳನ್ನು ಅಂಗಾಶಗಳಿಂದ ಪಡೆದು ಮೂತ್ರಪಿಂಡ, ಶ್ವಾಸ ಕೋಶ ಹಾಗೂ ಕರುಳಿನ ಮುಖಾಂತರ ದೇಹದಿಂದ ಹೊರದೂಡುತ್ತದೆ.
ದೇಹಕ್ಕೆ ಅತ್ಯವಶ್ಯಕವಾದ ನೀರಿನ ಆಮ್ಲ- ಪ್ರತ್ಯಾಮ್ಲ ಹಾಗೂ ಚರಾಣುಗಳ ಸಮತೋಲನದೊಂದಿಗೆ, ದೇಹದ ಉಷ್ಣತೆಯನ್ನು 37 ಡಿಗ್ರಿ ಸೆಲ್ಸಿಯಸ್ಸಿನಲ್ಲಿರುವಂತೆ ಕಾಪಾಡುತ್ತದೆ.
ಕೆಂಪು ರಕ್ತಕಣ
ಕೆಂಪು ರಕ್ತಕಣಗಳು ತಮ್ಮಲ್ಲಿನ ಹಿಮೋಗ್ಲೋಬಿನ್ ಸಹಾಯದಿಂದ ಆಮ್ಲಜನಕವನ್ನು ದೇಹದ ಎಲ್ಲಾ ಭಾಗಗಳಿಗೂ ಸಾಗಿಸುವ ಕೆಲಸ ಮಾಡುತ್ತವೆ. ಕೆಂಪು ರಕ್ತ ಕಣಗಳು ಕೆಂಪಾಗಿ ಕಾಣಲು ಅದರಲ್ಲಿ ಹುದುಗಿಕೊಂಡಿರುವ ಹಿಮೋಗ್ಲೋಬಿನ್ ಕಾರಣ. ಕೆಂಪು ರಕ್ತ ಕಣಗಳ ಆಯಸ್ಸು 6 ವಾರಗಳು .
ಸ್ಟಿನರ್ ಕೆಂಪು ರಕ್ತಕಣಗಳ ಮೇಲೆ ಗ್ಲೈಕೋ ಪ್ರೋಟೀನ್ ಎಂಬ ರಾಸಾಯನಿಕ ಪದಾರ್ಥಗಳು ಇರುವುದನ್ನು ಕಂಡುಹಿಡಿದನು. ಇವುಗಳಿಗೆ ಆ್ಯಂಟಿಜನ್ (ಪ್ರತಿಕಾಯಜನಕಗಳು) ಎಂದು ಕರೆದನು. ಆ್ಯಂಟಿಜನ್ ಗಳನ್ನು ಆಧರಿಸಿ ಸ್ಟಿನರ್ ರಕ್ತವನ್ನು A. B. AB. O ಎಂದು ವಿಂಗಡಿಸಿದ್ದಾನೆ.
ರಕ್ತದ ಪ್ಲಾಸ್ಮಾದಲ್ಲಿ ಕಂಡುಬರುವ ಕೆಲವು ಪ್ರೋಟೀನುಗಳು ಕಂಡುಬರುತ್ತವೆ. ಇವುಗಳನ್ನು ಆ್ಯಂಟಿಬಾಡಿಗಳು ಎನ್ನುವರು. ಆ್ಯಂಟಿಜನ್ ಗಳು ಈ ಆ್ಯಂಟಿಬಾಡಿಗಳನ್ನು ಉತ್ಪಾದಿಸುತ್ತವೆ. ಈ ಆ್ಯಂಟಿಬಾಡಿಗಳು ದೇಹದ ಒಳಗೆ ಬರುವ ರೋಗಾಣುಗಳ ವಿರುದ್ಧ ಹೊರಾಡುತ್ತವೆ.
0- ರಕ್ತದ ಗುಂಪನ್ನು ಸಾರ್ವತ್ರಿಕ ದಾನಿ ಎಂದು ಕರೆದರೆ AB+ ಅನ್ನು ಸಾರ್ವತ್ರಿಕ ಸ್ವೀಕೃತಿ ಎಂದು ಕರೆಯುವರು.
ಹಿಮೋಗ್ಲೋಬಿನ್
ಹಿಮೋಗ್ಲೋಬಿನ್ 96% ಗ್ಲೋಬಿನ್ ಎಂಬ ಪ್ರೋಟೀನ್ ನಿಂದ ಆಗಿದ್ದು, ಉಳಿದ 4% ಹೀಮ್ ಎಂಬ ಕಬ್ಬಿಣದಂಶದಿಂದಾಗಿದೆ. ಈ ಬಣ್ಣ ಆಮ್ಲಜನಕದ ಜೊತೆಗೆ ಬಹುಸುಲಭವಾಗಿ ಬೆರೆತು, ಅಷ್ಟೇ ಸುಲಭವಾಗಿ ಬಿಟ್ಟುಕೊಡುವ ಸ್ವಭಾವ ಹೊಂದಿದೆ.
ಹಿಮೋಗ್ಲೋಬಿನ್ ನೀರಿಗಿಂತಲೂ ಹೆಚ್ಚಾಗಿ ಆಮ್ಲಜನಕವನ್ನು ಹೀರಿಕೊಳ್ಳುವ ಗುಣವನ್ನು ಹೊಂದಿದೆ. ಈ ಗುಣದಿಂದಾಗಿಯೇ ಮಾನವದೇಹಕ್ಕೆ ಅತ್ಯವಶ್ಯಕವಾದ ಆಮ್ಲಜನಕವನ್ನು ದೇಹದ ಎಲ್ಲಾ ಭಾಗಗಳಿಗೂ ತಲುಪಿಸುವ ವಾಹನದಂತೆ ಹಿಮೋಗ್ಲೋಬಿನ್ ಕಾರ್ಯನಿರ್ವಹಿಸುತ್ತದೆ.
ಹಿಮೋಗ್ಲೋಬಿನ್ ಸಂಬಂಧಿತ ಖಾಯಿಲೆಗಳು
ಹಿಮೋಗ್ಲೋಬಿನ್ ಕೊರೆತೆಯಿಂದ ಬರುವ ಖಾಯಿಲೆಯನ್ನು ರಕ್ತಹೀನತೆ ಅಥವಾ ಅನೀಮಿಯ ಎನ್ನುತ್ತೇವೆ.
ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 18 ಗ್ರಾಮ್ ಕಿಂತ ಹೆಚ್ಚಾದಾಗ ಬರುವ ರೋಗಕ್ಕೆ ಪಾಲಿಸೈಥೆಮಿಯರ್ ಎನ್ನುವರು.
ಬಿಳಿ ರಕ್ತಕಣ
ಬಿಳಿ ರಕ್ತಕಣಗಳು ರಕ್ತದಲ್ಲಿನ ಪ್ರೋಟೀನ್ ಜೊತೆಗೂಡಿ ಟ್ರಿಫೋನ್ಸ್ ಎಂಬ ವಸ್ತುವನ್ನು ತಯಾರಿಸುತ್ತವೆ. ಟ್ರಿಫೋನ್ಸ್ ಅಂಗಾಂಗಳ ಬೆಳವಣಿಗೆ ಮತ್ತು ಪೋಷಣೆಗೆ ಅತ್ಯಗತ್ಯವಾದುದಾಗಿದೆ.
ರಕ್ತದಲ್ಲಿ ಒಂದು ಬಿಳಿರಕ್ತಕಣಕ್ಕೆ ಸಮನಾಗಿ 700 ಕೆಂಪುರಕ್ತ ಕಣಗಳಿರುತ್ತವೆ. ಬಿಳಿ ರಕ್ತಕಣಗಳಲ್ಲಿ ಹಿಮೋಗ್ಲೋಬಿನ್ ಇರುವುದಿಲ್ಲ.
ನ್ಯೂಟ್ರೋಫಿಲ್, ಇಯೋಸಿನೋಫಿಲ್, ಬೆಸೋಫಿಲ್, ಲಿಂಪೋಸೈಟ್, ಮಾನೋಸೈಟ್ ಇವು ಬಿಳಿರಕ್ತಕಣಗಳ ವಿಧಗಳು. ಬಿಳಿರಕ್ತ ಕಣವು ಕೆಂಪುರಕ್ತಕಣಕ್ಕಿಂತ ದೊಡ್ಡದಿದ್ದು ಬೀಜಾಣುವನ್ನು ಹೊಂದಿರುತ್ತವೆ. ಇವು ಪಾರದರ್ಶಕವಾಗಿರುವುದರಿಂದ ಬಿಳಿಯ ರಕ್ತಕಣಗಳೆಂದು ಕರೆಯುವರು. ಇವುಗಳ ಆಯುಸ್ಸು 3-6 ದಿನಗಳು. ರಕ್ತದಲ್ಲಿ ಇವುಗಳ ಸಂಖ್ಯೆ ಕೆಂಪು ರಕ್ತಕಣಗಳಿಗಿಂತ ಕಡಿಮೆ. ಬಿಳಿ ರಕ್ತಕಣಗಳು ಅಗತ್ಯಕ್ಕಿಂತ ಹೆಚ್ಚಾದರೆ ರಕ್ತದ ಕ್ಯಾನ್ಸರ್ (ಲ್ಯುಕೇಮಿಯಾ) ಬರುತ್ತದೆ.
ನ್ಯೂಟ್ರೋಫಿಲ್ ಬಿ
ನ್ಯೂಟ್ರೋಫಿಲ್ B ಗಳು 10-12 ಮೈಕ್ರಾನ್ ನಷ್ಟಿದ್ದು ಫಾಸ್ಫಟೇಸ್, ಪ್ರೋಟಿಯೇಸ್, ಅಮೈಲೇಸ್ ಮುಂತಾದ ಕಿಣ್ವಗಳನ್ನು ಹೊಂದಿರುತ್ತವೆ. ದೇಹದ ಯಾವುದಾದರು ಭಾಗದಲ್ಲಿ ಗಾಯವಾದಾಗ ಅದರಿಂದ ಸೋಂಕು ಉಂಟಾಗಿ ದೇಹಕ್ಕೆ ತೊಂದರೆಯುಂಟಾದಾಗ ಸೋಂಕಿನಿಂದ ಬೆರೆತ ಈ ರಕ್ತದಲ್ಲಿ ನ್ಯೂಟ್ರೋಫಿಲ್ B ಹೆಚ್ಚಾಗಿ ರಕ್ತ ಹೆಪ್ಪುಗಟ್ಟಿ ಕೀವಾಗಿ ಕುರುವಾಗುತ್ತದೆ.
ಇಲ್ಲಿ ನ್ಯೂಟ್ರೋಫಿಲ್ B ದೇಹದ ಮೇಲೆ ದಾಳಿಮಾಡುವ ವಿಷಕ್ರಿಮಿಗಳನ್ನು ನುಂಗಿ ಅರಗಿಸುವ ಕೆಲಸ ಮಾಡುತ್ತವೆ. ಅಂತಿಮವಾಗಿ ಹೋರಾಟದಲ್ಲಿ ಸಾಯುತ್ತವೆ. ಕೀವಾಗಿ ನಮಗೆ ಕಾಣಿಸಿಕೊಳ್ಳುವುದು ಸೋಂಕನ್ನೂ ಸೋಂಕಿನ ಭಾಗವನ್ನೂ ಕರಗಿಸಿ ಅದನ್ನು ದೇಹದಿಂದ ಹೊರದೂಡುವ ಕೆಲಸವನ್ನು ನ್ಯೂಟ್ರೋಫಿಲ್ B ಕಣ.
ಇಯೋಸಿನೋಫಿಲ್
ಇಯೋಸಿನೋಫಿಲ್ ರಕ್ತಕಣಗಳು 10-12 ಮೈಕ್ರಾನ್ ನಷ್ಟಿದ್ದು, ಚರ್ಮದ ಅಲರ್ಜಿ ಹಾಗೂ ಅಸ್ತಮಾ ಮುಂತಾದ ಶ್ವಾಸಕೋಶದ ಸೋಂಕುಗಳು, ದೇಹಕ್ಕೆ ಅಲರ್ಜಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತವೆ. ಇವುಗಳಲ್ಲಿ ಹಿಸ್ಟಮಿನ್ ಅಂಶವು ಹೆಚ್ಚಾಗಿ ಇರುತ್ತದೆ.
ಬೆಸೋಫಿಲ್
ಬೆಸೋಫಿಲ್ 8-10 ಮೈಕ್ರಾನ್ಸ್ ಗಾತ್ರವಿರುತ್ತದೆ. ಬೆಸೋಫಿಲ್ ಹಿಸ್ಟಮಿನ್ ಮತ್ತು ಹಿಪಾರಿನ್ ಎಂಬ ಕಿಣ್ವಗಳನ್ನು ಹೊಂದಿದೆ. ಈ ಕಿಣ್ವಗಳು ರಕ್ತನಾಳದೊಳಗೆ ಹೆಪ್ಪುಗಟ್ಟದಂತೆ ಜಾಗ್ರತೆ ವಹಿಸುತ್ತವೆ.
ಮಾನೋಸೈಟ್
ಮಾನೋಸೈಟ್ ಗಳು 16-18 ಮೈಕ್ರಾನ್ ಗಾತ್ರವಿದ್ದು ದೇಹದ ವಿಷಕ್ರಿಮಿಗಳನ್ನು ನಾಶಮಾಡಲು ಸಹಾಯಮಾಡುತ್ತವೆ.
ಲಿಂಪೋಸೈಟ್
ಲಿಂಪೋಸೈಟ್ಗಳ ಗಾತ್ರ 7.5 - 12 ಮೈಕ್ರಾನ್ ಇರುತ್ತದೆ. ಲಿಂಪೋಸೈಟ್ಗಳಲ್ಲಿ ಗಾಮಾ ಗ್ಲಾಬ್ಯುಲಿನ್ ಮತ್ತು ಬೀಟ ಗ್ಲಾಬ್ಯುಲಿನ್ ಎಂಬ 2 ವಿಧಗಳಿವೆ.
ಗಾಮಾ ಗ್ಲಾಬ್ಯುಲಿನ್ ದೇಹಕ್ಕೆ ದಾಳಿಯಿಡುವ ವಿಷಕ್ರಿಮಿಗಳು ಉತ್ಪಾದಿಸುವ ವಿಷದ ವಿರುದ್ಧ ಹೋರಾಡಿ ಅವುಗಳನ್ನು ನಿಷ್ಕ್ರಿಯಗೊಳಿಸುತ್ತವೆ. ಬೀಟ ಗ್ಲಾಬ್ಯುಲಿನ್ ಗಳು ದೇಹಕ್ಕೆ ಅವಶ್ಯಕವಾದ ಪ್ರೋಟೀನ್ ಗಳನ್ನು ಒದಗಿಸುತ್ತವೆ.
ಪ್ಲೇಟ್ ಲೆಟ್ (ಕಿರುತಟ್ಟೆ)
ಪ್ಲೇಟ್ ಲೆಟ್ (ಕಿರುತಟ್ಟೆ) ಗಳು 2.5 ಮೈಕ್ರಾನ್ ಗಾತ್ರ ಹೊಂದಿರುತ್ತವೆ. ದೇಹದಲ್ಲಿ ರಕ್ತ ಸ್ರಾವವಾದಾಗ ಗಾಯಗೊಂಡ ರಕ್ತನಾಳಗಳ ಒಳಪದರದ ದುರಸ್ತಿ ಮಾಡುತ್ತವೆ.
ರಕ್ತದಲ್ಲಿ ಕಿರುತಟ್ಟೆಗಳ ಸಂಖ್ಯೆ ಕಡಿಮೆಯಾದಲ್ಲಿ ಪರ್ಪೂರ ಎಂಬ ಕಾಯಿಲೆ ಬಂದು ರಕ್ತಸ್ರಾವ ನಿಲ್ಲಲು ತಡವಾಗುವುದಲ್ಲದೆ ಮೂಗಿನಿಂದ ರಕ್ತಬರುವ ಸಾಧ್ಯತೆ ಇರುತ್ತದೆ. ಚರ್ಮದ ಒಳಭಾಗ ಮತ್ತು ಕೀಲುಗಳಲ್ಲಿ ಸ್ವಲ್ಪ ಪೆಟ್ಟಾದರೂ ರಕ್ತಸ್ರಾವವಾಗುತ್ತದೆ.
ರಕ್ತದಲ್ಲಿರುವ ಪ್ರೋಟೀನ್, ಫೈಬ್ರನೋಜನ್, ಪ್ರೋಥ್ರಾಂಬಿನ್ ಗಳು ರಕ್ತ ಹೆಪ್ಪುಗಟ್ಟಲು ಸಹಾಯಮಾಡುತ್ತವೆ. ಹೆಪ್ಪುಗಟ್ಟಲು ತಗಲುವ ವೇಳೆ ಸು 4- 10 ನಿಮಿಷಗಳು.
ದೇಹದಲ್ಲಿರುವ ಆಲ್ಬುಮಿನ್ ರಕ್ತ ಹಾಗೂ ಉಳಿದ ಅಂಗಾಂಗಗಳ ನಡುವಿನ ಅಧಿಕ ಒತ್ತಡವನ್ನು ನಿಭಾಯಿಸುವುದು. ರಕ್ತದ ಸ್ನಿಗ್ಧತ್ವವನ್ನು ಹಾಗೆ ಉಳಿಯುವಂತೆ ನೋಡಿಕೊಳ್ಳುವುದು, ರಕ್ತದೊತ್ತಡ ನಿಯಂತ್ರಣ ಮುಂತಾದ ಕೆಲಸಗಳನ್ನು ನಿರ್ವಹಿಸುತ್ತದೆ.
ದೇಹದಲ್ಲಿ ಕಿರುತಟ್ಟೆಗಳ ಕೊರತೆ ಉಂಟಾದರೆ ಚರ್ಮದ ಕೆಳಗೆ, ಕೀಲುಗಳಲ್ಲಿ ಸಣ್ಣಗಾಯವಾದರೂ ರಕ್ತ ತುಂಬಿಕೊಂಡು ಅಸಾಧ್ಯ ನೋವನ್ನುಂಟುಮಾಡುತ್ತವೆ. ಕುಸುಮರೋಗ (ಹೀಮೋಫಿಲಿಯ) ಕಾಯಿಲೆ ಬರುವ ಸಾಧ್ಯತೆಯೂ ಇರುತ್ತದೆ.
ರಕ್ತ ಏಕೆ ಹೆಪ್ಪುಗಟ್ಟುವುದಿಲ್ಲ?
ರಕ್ತನಾಳದ ಒಳಪದರದಲ್ಲಿ ಏಟು ಬಿದ್ದಾಗ ಮಾತ್ರ ರಕ್ತ ಹೆಪ್ಪುಗಟ್ಟುತ್ತದೆ. ಸಾಮಾನ್ಯ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವುದಿಲ್ಲ ಕಾರಣ ರಕ್ತದಲ್ಲಿನ ಥ್ರಾಂಬಿನ್, ಕಿರುತಟ್ಟೆಗಳು ಮುಂತಾದವುಗಳನ್ನು R.E ಜೀವಕೋಶಗಳು ಆಗಿಂದಾಗ್ಗೆ ನಿಧಾನಗೊಳಿಸುತ್ತವೆ.
ರಕ್ತ ಹೆಪ್ಪುಗಟ್ಟುವುದರಿಂದ ಹೃದಯದ ಬಡಿತ ನಿಂತುಹೋಗುವುದು ಮತ್ತು ಮೆದುಳಿಗೆ ರಕ್ತದ ಸರಬರಾಜು ನಿಂತುಹೋಗಿ ಲಕ್ವ (ಪಾ ರ್ಶ್ವವಾಯು) ಹೊಡೆಯುವುದು ಉಂಟಾಗುತ್ತದೆ.
ದೇಹದಲ್ಲಿ ರಕ್ತದ ಪ್ರಮಾಣ
ಮನುಷ್ಯನ ದೇಹದ ಒಟ್ಟುತೂಕದ ಶೇ. 9% ಪ್ರಮಾಣದಲ್ಲಿ ರಕ್ತ ಇರುತ್ತದೆ. ಅಸ್ಥಿಮಜ್ಜೆ ರಕ್ತ ತಯಾರಿಸುವ ಕಾರ್ಖಾನೆಯಾಗಿದೆ. ಇದು ದೇಹದ ಮೂಳೆಯೊಳಗಿನ ಟೊಳ್ಳು ಭಾಗದಲ್ಲಿರುತ್ತದೆ. ಹುಟ್ಟುವಾಗ ಸುಮಾರು 70 ಮಿಲಿ ಲೀಟರ್ ನಷ್ಟು ಇರುವ ಅಸ್ಥಿಮಜ್ಜೆ ವಯಸ್ಕರಲ್ಲಿ ಸುಮಾರು 4 ಲೀಟರ್ ನಷ್ಟಿರುತ್ತದೆ.
ಅಸ್ಥಿಮಜ್ಜೆಯ ವಿಧಗಳು
ಇಲ್ಲಿ ಕೆಂಪು ರಕ್ತಕಣಗಳು ತಯಾರಾಗುತ್ತವೆ. ಭ್ರೂಣಾವಸ್ಥೆಯಲ್ಲಿ ಎಲ್ಲಾ ಮೂಳೆಗಳೂ ಕೆಂಪು ಅಸ್ಥಿಮಜ್ಜೆಯನ್ನು ಹೊಂದಿದ್ದು ವಯಸ್ಸಾದಂತೆ ಕಡಿಮೆಯಾಗುತ್ತಾ ಹೋಗುತ್ತವೆ. ಕಾಲಿನ ಉದ್ದನೆಯ ಮೂಳೆಗಳ ತುದಿಯಲ್ಲಿ, ಎದೆ ಮೂಳೆಗಳಲ್ಲಿ, ಪಕ್ಕೆಲುಬಿನ ಮೂಳೆಗಳಲ್ಲಿ, ತಲೆಬುರುಡೆ ಮೂಳೆಗಳಲ್ಲಿ, ಹಾಗೂ ಪೃಷ್ಟದ ಮೂಳೆಗಳಲ್ಲಿ ಮಾತ್ರ ಕಾಣಸಿಗುತ್ತವೆ. ಉಳಿದವು ಹಳದಿ ಮಜ್ಜೆಯಾಗಿ ಮಾರ್ಪಾಟಾಗಿ ಕೆಲಸಕ್ಕೆ ಬಾರದಂತಾಗುತ್ತವೆ. 70 ನೆಯ ವಯಸ್ಸಿನಲ್ಲಿ ಸುಮಾರು 70 ರಿಂದ 80 ರಷ್ಟು ಭಾಗ ಹಳದಿ ಮಜ್ಜೆಯಾಗಿ, ರಕ್ತದ ಉತ್ಪಾದನೆ ಕಡಿಮೆಯಾಗುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ