ಮಿಶ್ರಣಗಳು

 ಮಿಶ್ರಣಗಳು

ಒಂದಕ್ಕಿಂತ ಹೆಚ್ಚು ಬೇರೆ ಬೇರೆ ವಸ್ತುಗಳು ಭೌತಿಕವಾಗಿ ಸಂಯೋಗ ಹೊಂದಿ ಉಂಟಾಗಿರುವ ವಸ್ತುವಿಗೆ ಮಿಶ್ರಣ ಎನ್ನುವರು. ಉದಾ ಕಬ್ಬಿಣದ ಹುಡಿ ಮತ್ತು ಮಣ್ಣಿನ ಮಿಶ್ರಣ.

ಮಿಶ್ರಣದ ಗುಣಲಕ್ಣಣಗಳು

ಮಿಶ್ರಣಕ್ಕೆ ತನ್ನದೇ ಆದ ಯಾವ ಸ್ವಂತ ಗುಣಗಳು ಇರುವುದಿಲ್ಲ. ಅದರಲ್ಲಿ ಮಿಶ್ರಣಗೊಂಡ ವಸ್ತುಗಳ ಮೇಲೆ ಅದರ ಗುಣಲಕ್ಷಣಗಳು ನಿರ್ಧಾರಗೊಳ್ಳುತ್ತವೆ.

ಮಿಶ್ರಣದಲ್ಲಿ ಯಾವುದೇ ರಾಸಾಯನಿಕ ಬದಲಾವಣೆಗಳು ಉಂಟಾಗುವುದಿಲ್ಲ. ಹಾಗೂ ಮಿಶ್ರಣದಲ್ಲಿನ ಘಟಕಗಳು ನಿರ್ದಿಷ್ಟ ಅನುಪಾತದಲ್ಲಿರುವುದಿಲ್ಲ.

ಮಿಶ್ರಣಗಳನ್ನು ಭೌತಿಕ ವಿಧಾನದಿಂದ ಬೇರ್ಪಡಿಸುತ್ತಾರೆ. ಉದಾ: ಆಯಸ್ಕಾಂತದ ಮೂಲಕ ಮಣ್ಣಿನಿಂದ ಕಬ್ಬಿಣದ ಹುಡಿಗಳನ್ನು ಮಣ್ಣಿನಿಂದ ಸುಲಭವಾಗಿ ಬೇರ್ಪಡಿಸಬಹುದು.

ಮಿಶ್ರಣದ ವಿಧಗಳು


ದ್ರಾವಣಗಳು (Solution)

ಎರಡು ಅಥವಾ ಎರಡಕ್ಕಿಂತ ಹೆಚ್ಚು ಸಮಜಾತೀಯ ಮಿಶ್ರಣಗಳನ್ನು ದ್ರಾವಣ ಎನ್ನುವರು. ಇದರಲ್ಲಿ ಘನ ಮತ್ತು ದ್ರವ ಅನಿಲ ಎಂಬ 3 ರೀತಿಯ ದ್ರಾವಣಗಳನ್ನು ಕಾಣಬಹುದಾಗಿದೆ. ಪ್ಲಾಸ್ಮಾ ಎಂಬ 4ನೇ ದ್ರವ್ಯದ ಸ್ಥಿತಿಯೂ ಇದೆ. ಇದು ನಕ್ಷತ್ರಗಳಲ್ಲಿ ಮತ್ತು ಬೆಂಕಿಯಲ್ಲಿ ಕಂಡುಬರುತ್ತದೆ.

ದ್ರಾವಣವು ದ್ರಾವ್ಯ ಮತ್ತು ದ್ರಾವಕಗಳಿಂದಾಗಿದ್ದು ಈ ದ್ರಾವಣದಲ್ಲಿ ದ್ರಾವಕಕ್ಕಿಂತ ದ್ರಾವ್ಯದ ಪ್ರಮಾಣ ಕಡಿಮೆಯಿರುತ್ತದೆ. ಯಾವುದು ತನ್ನಲ್ಲಿ ವಸ್ತುಗಳನ್ನು ಕರಗಿಸಿಕೊಳ್ಳುತ್ತದೆಯೋ ಅದು ದ್ರಾವಕವೆನಿಕೊಳ್ಳುತ್ತದೆ. ಯಾವುದು ದ್ರಾವಕದಲ್ಲಿ ಕರಗುತ್ತದೆಯೋ ಅದು ದ್ರಾವ್ಯವಾಗುತ್ತದೆ.

ಉದಾ.ಗೆ ಸಕ್ಕರೆ ನೀರು ಎಂಬುದು ದ್ರಾವಣ ಇದರಲ್ಲಿ ಸೇರಿರುವ ಸಕ್ಕರೆ ದ್ರಾವ್ಯವಾದರೆ ನೀರು ದ್ರಾವಕವಾಗಿರುತ್ತದೆ. 

ನೀರು ತನ್ನಲ್ಲಿ ಅನೇಕ ವಸ್ತುಗಳನ್ನು ಕರಗಿಸಿಕೊಳ್ಳುವುದರಿಂದ ನೀರನ್ನು ಸಾರ್ವತ್ರಿಕ ದ್ರಾವಣ ಎನ್ನುವರು.

ಒಂದು ನಿರ್ದಿಷ್ಟ ತಾಪಮಾನದಲ್ಲಿ ಯಾವುದೇ ದ್ರಾವ್ಯವು ಸಾಮಾನ್ಯವಾಗಿ ಕರಗುವುದಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಕರಗಿದರೆ  ಅದನ್ನು ಅಪರ್ಯಾಪ್ತ ದ್ರಾವಣ ಎನ್ನುವರು. ಉದಾ ನೀರಿನಲ್ಲಿ ಸಕ್ಕರೆ ಹಾಕಿದಾಗ ಕರಗುವುದಕ್ಕಿಂತ ಬಿಸಿನೀರಿನಲ್ಲಿ ಸಕ್ಕರೆ ಹೆಚ್ಚಾಗಿ ಕರಗುತ್ತದೆ.

ಅದೇ ಒಂದು ತಾಪಮಾನದಲ್ಲಿ ಯಾವುದೇ ದ್ರಾವ್ಯವು ದ್ರಾವಣದಲ್ಲಿ ಕರಗಲಾರದು ಎಂದಾದರೆ ಅದನ್ನು ಪರ್ಯಾಪ್ತ ದ್ರಾವಣ ಎನ್ನುವರು.


ನಿಲಂಬನ (Suspension)

ನಿಲಂಬನ ಎಂಬುದು ಒಂದು ಭಿನ್ನ ಜಾತೀಯ ವಸ್ತುಗಳ ಮಿಶ್ರಣವಾಗಿದೆ. ಇದರಲ್ಲಿ ದ್ರಾವ್ಯವು ದ್ರಾವಣದಲ್ಲಿ ಕರಗಿರುವುದಿಲ್ಲ ಬದಲಾಗಿ ದ್ರಾವಕದಾದ್ಯಂತ ನಿಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ನಿಲಂಬನದಲ್ಲಿ ಹರಡಿಕೊಂಡಿರುವ ದ್ರಾವ್ಯವು ಘನವಸ್ತುವಾಗಿದ್ದರೆನೀರು ದ್ರಾವಕವಗಿರುತ್ತದೆ. ಉದಾ.ಗೆ ನೀರಿನಲ್ಲಿ ಸೇರಿಕೊಂಡಿರುವ ಸುಣ್ಣದ ಪುಡಿ. ಇಲ್ಲಿ ಸುಣ್ಣದ ಪುಡಿ ಎಂಬ ದ್ರಾವ್ಯವು ನೀರು ಎಂಬ ದ್ರಾವಕದಲ್ಲಿ ಹರಡಿಕೊಂಡಿದೆ.

ನಿಲಂಬನದಲ್ಲಿನ ಕಣಗಳನ್ನು ಬರಿಗಣ್ಣಿನಿಂದ ನೋಡಬಹುದು. ಬೆಳಕನ್ನು ಈ ನಿಲಂಬನದ ಮೂಲಕ ಹಾಯಿಸಿದಾಗ ಅದರಲ್ಲಿನ ಕಣಗಳು ಬೆಳಕನ್ನು ಚದುರಿಸುತ್ತವೆ.

ನಿಲಂಬನವನ್ನು ಕದಲಿಸದೆ ಹಾಗೆಯೇ ಬಿಟ್ಟಾಗ ಅದರಲ್ಲಿನ ದ್ರಾವ್ಯ (ಸುಣ್ಣದ ಪುಡಿ) ತಳಭಾಗದಲ್ಲಿ ಶೇಖರಣೆಗೊಳ್ಳುತ್ತದೆ.


ಕಲಿಲ (Colloid)

ಕಲಿಲ ಎಂಬುದು ಒಂದು ಬಗೆಯಲ್ಲಿ ನಿಲಂಬನದಂತಯೆ ಇರುವ ಮಿಶ್ರಣ. ಆದರೆ ಕಲಿಲದಲ್ಲಿ ವಸ್ತುಗಳು (ದ್ರಾವ್ಯವು) ಇನ್ನೂ ಸೂಕ್ಷ್ಮವಾಗಿ ಮತ್ತು ಎಲ್ಲಾ ಕಡೆಯಲ್ಲೂ ಸಮನಾಂತರವಾಗಿ ಹರಡಿಕೊಂಡಿರುತ್ತವೆ. ಉದಾ.ಗೆ ನೀರಿನಲ್ಲಿ ಬೆರಸಿದ ಇಂಕ್. ನಿಲಂಬನದಲ್ಲಿ ಹರಡಿಕೊಂಡಿರುವ ಸುಣ್ಣಕ್ಕಿಂತ ಹೆಚ್ಚು ಗಾಢವಾಗಿ ಇಂಕ್ ಕಲಿಲದಲ್ಲಿ ಹರಡಿಕೊಂಡಿರುತ್ತದೆ.

ತಮ್ಮ ಸೂಕ್ಷ್ಮ ಗಾತ್ರದಿಂದಾಗಿ ನೀರಿನಲ್ಲಿ (ದ್ರಾವಣ) ಹರಡಿಕೊಂಡಿರುವ ಇಂಕ್ ನ (ದಾವ್ಯ) ಕಣಗಳು ಪ್ರತ್ಯೇಕವಾಗಿ ಬರಿಗಣ್ಣಿಗೆ ಗೋಚರಿಸುವುದಿಲ್ಲ. ಆದರೆ ಕಲಿಲದ ಮೂಲಕ ಹಾದುಹೋಗುವ ಬೆಳಕನ್ನು ಸುಲಭವಾಗಿ ಚದುರಿಸಬಲ್ಲವು. ನಿಲಂಬನದಂತೆ ಕಲಿಲದಲ್ಲಿನ ಕಣಗಳು ತಳದಲ್ಲಿ ಶೇಖರಣೆಗೊಳ್ಳುವುದಿಲ್ಲ.

ಕಲಿಲ ಮತ್ತು ನಿಲಂಬನಗಳ ಮೂಲಕ ಬೆಳಕು ಚದುರುವುದನ್ನು ಟಿಂಡಾಲ್ ಪರಿಣಾಮ ಎನ್ನುವರು

ದ್ರವ ಅಥವಾ ಅನಿಲಗಳಲ್ಲಿ ಹರಡಿಕೊಂಡಿರುವ ಕಲಿಲಗಳ ಯಾದೃಚ್ಛಿಕ ಚಲನೆಯನ್ನು ಬ್ರೌನಿಯನ್ ಚಲನೆ ಎನ್ನವರು. ಇದನ್ನು ತಿಳಿಸಿಕೊಟ್ಟವನು ರಾಬರ್ಟ್ ಬ್ರೌನ್.

ಕಾಮೆಂಟ್‌ಗಳು