ವಿದ್ಯುತ್

 ವಿದ್ಯುತ್

ವಿದ್ಯುತ್ ಕಣಗಳ ಚಲನೆಯಿಂದ ಉಂಟಾದ ಶಕ್ತಿಯನ್ನು ವಿದ್ಯುತ್ ಎನ್ನುವರು. ವಿದ್ಯುತ್ ಶಕ್ತಿಯ ಸಂಕೇತ E, ವಿದ್ಯುತ್ ನ ಅಂತರಾಷ್ಟ್ರೀಯ ಏಕಮಾನ ಜೌಲ್ (E) ಮತ್ತು ವ್ಯಾವಹಾರಿಕ ಏಕಮಾನ ಕಿಲೊ ವ್ಯಾಟ್ ಪರ್ ಹವರ್ (kw/h) ಆಗಿದೆ.  

ಒಂದು ಕಿಲೊ ವ್ಯಾಟ್ ಪರ್ ಹವರ್ ಎಂದರೆ 36,00,000 ಜೌಲ್ಸ್. ಒಂದು ಕಿಲೊ ವ್ಯಾಟ್ ಪರ್ ಹವರ್ ನ ಏಕಮಾನವನ್ನು ಒಂದು ಯೂನಿಟ್ ಎನ್ನುವರು.

ಯಾವುದೇ ಒಂದು ವಾಹಕದಲ್ಲಿರುವ ಎಲೆಕ್ಟ್ರಾನ್‍ಗಳು ಅನಿರ್ದಿಷ್ಟವಾಗಿ ಚಲಿಸುತ್ತಿರುತ್ತವೆ.  ನೀರು, ಲೋಹದ ತಂತಿ, ಗ್ರಾಫೈಟ್ ಯಾವುದಾದರೂ ವಾಹಕದ ಮೂಲಕ ವಿದ್ಯುತ್ ನ ಕಣಗಳು (ಎಲೆಕ್ಟ್ರಾನ್ಸ್ ಅಥವಾ ಋಣ ವಿದ್ಯುದಾವೇಶಗಳು) ನಿರ್ದಿಷ್ಟವಾಗಿ ಚಲಿಸುವಂತೆ ಮಾಡಿದಾಗ ವಿದ್ಯುತ್ ಪ್ರವಾಹ ಉಂಟಾಗುತ್ತದೆ. ಈ ವಿದ್ಯುತ್ ಪ್ರವಾಹವನ್ನೇ ನಾವು ಕರೆಂಟ್ ಎಂದು ಕರೆಯುತ್ತೇವೆ. ಇದರ ಅಂತರಾಷ್ಟ್ರೀಯ ಏಕಮಾನ ಅಂಪೇರ್ (A)

ವಿದ್ಯುತ್ ಪ್ರವಾಹವನ್ನು ಅಳೆಯಲು ಅಮ್ಮೀಟರ್, ಗ್ಯಾಲ್ವನೋಮೀಟರ್ ಮತ್ತು ವೋಲ್ಟಾಮೀಟರ್ ಗಳನ್ನು ಬಳಸುತ್ತಾರೆ.

ಗ್ಯಾಲ್ವನೋಮೀಟರ್
ವೋಲ್ಟಾಮೀಟರ್ (V) 
ಮತ್ತು ಅಮ್ಮೀಟರ್ (A)

ವಿದ್ಯತ್ ವಿಭವ ಮತ್ತು ವಿಭವಾಂತರ

ವಿದ್ಯುತ್ ಪ್ರವಾಹದಲ್ಲಿನ ಒತ್ತಡವನ್ನು ವಿದ್ಯುತ್ ವಿಭವ ಎನ್ನುವರು. ವಿದ್ಯುತ್ ಪ್ರವಾಹದ ಒತ್ತಡದಲ್ಲಿ ಉಂಟಾಗುವ ಬದಲಾವಣೆಯನ್ನು ವಿಭವಾಂತರ ಎನ್ನುವರು.

ವಿದ್ಯುತ್ ಹರಿಯುವ ತಂತಿಗಳಲ್ಲಿ ಎರಡು ವಿಧ ಒಂದು ಲೈವ್ ಇನ್ನೊಂದು ನ್ಯೂಟ್ರಲ್. ವಿದ್ಯುತ್ ಹೆಚ್ಚಾಗಿ ಲೈವ್ ನ ಮೂಲಕವೇ ಹರಿಯುಯತ್ತದೆ. ಲೈವ್ ಮತ್ತು ನ್ಯೂಟ್ರಲ್ ತಂತಿಗಳ ನಡುವಿನ ವಿಭವಾಂತರ ಸಾಮಾನ್ಯವಾಗಿ 230 ವೋಲ್ಟ್ ಇರುತ್ತದೆ. ವಿಭವಾಂತರವನ್ನು ಕಾಪಾಡಿಕೊಳ್ಳಲು ಉಪಯೋಗಿಸುವ ಶಕ್ತಿಯೇ ವಿದ್ಯುತ್ ಚಾಲಕ ಬಲ. ಈ ವಿದ್ಯುತ್ ಚಾಲಕ ಬಲವನ್ನು ಅಳೆಯಲು ಬಳಸುವ ಮಾಪನ ವೋಲ್ಟ್ ಮೀಟರ್. ವಿದ್ಯುತ್ ವಿಭವಾಂತರದ ಏಕಮಾನ ವೋಲ್ಟ್ (V). ವಿದ್ಯುತ್ ವಿಭವಾಂತರವನ್ನು ಅಳೆಯಲು ಬಳಸುವ ಉಪಕರಣ ವಿಭವಮಾಪಕ (ವೋಲ್ಟಾಮೀಟರ್)

ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಚಲಿಸಿದಾಗ ಒಂದು ಜೂಲ್ ಕೆಲಸ ನಡೆಯುತ್ತದೆ. ಆಗ ಆ ಬಿಂದುಗಳ ನಡುವಿನ ವಿಭವಾಂತರ ಒಂದು ವೋಲ್ಟ್ ಆಗಿರುತ್ತದೆ.

ವಿದ್ಯುತ್ ಪ್ರವಾಹದಿಂದ ಉಂಟಾಗುವ ಪರಿಣಾಮಗಳು

ಕಾಂತೀಯ ಪರಿಣಾಮ

ಒಂದು ವಾಹಕದ ಮೂಲಕ ವಿದ್ಯುತ್ ಹರಿಯುವಾಗ ಅದರ ಸುತ್ತಲೂ ಕಾಂತಕ್ಷೇತ್ರವನ್ನು ಏರ್ಪಡಿಸುತ್ತದೆ. ಇದನ್ನೇ ಕಾಂತೀಯ ಪರಿಣಾಮ ಎನ್ನುವರು. ವಿದ್ಯುತ್ ಗಿರಣಿ, ಮೋಟರ್, ಕರೆಘಂಟೆಗಳಲ್ಲಿ ಈ ಪರಿಣಾಮವನ್ನು ಅಳವಡಿಸಿಕೊಳ್ಳುತ್ತಾರೆ.

ರಾಸಾಯನಿಕ ಪರಿಣಾಮ

ಒಂದು ವಾಹಕದ ಮೂಲಕ ವಿದ್ಯುತ್ ಹರಿಯುವಾಗ ಆ ವಾಹಕದಲ್ಲಿ ಕೆಲವು ರಾಸಾಯನಿಕ ಬದಲಾವಣೆಗಳು ಸಹ ಏರ್ಪಡುತ್ತವೆ. ಇದನ್ನೇ ರಾಸಾಯನಿಕ ಪರಿಣಾಮ ಎನ್ನುವರು. ಲೋಹಗಳನ್ನು ಶುದ್ಧೀಕರಿಸಲು, ಔಷಧಿಗಳ ತಯಾರಿಕೆಯಲ್ಲಿ, ಒಂದು ಲೋಹಕ್ಕೆ ಇನ್ನೊಂದು ಲೋಹದ ಲೇಪನ ಮಾಡಲು ಈ ಪರಿಣಾಮವನ್ನು ಅನುಸರಿಸುತ್ತಾರೆ.

ಉಷ್ಣೋತ್ಪನ್ನ ಪರಿಣಾಮ

ಒಂದು ವಾಹಕದ ಮೂಲಕ ವಿದ್ಯುತ್ ಹರಿಯುವಾಗ ಉಷ್ಣವನ್ನು ಸಹ ಬಿಡುಗಡೆ ಮಾಡುತ್ತದೆ ಇದನ್ನು ಉಷ್ಣೋತ್ಪನ್ನ ಪರಿಣಾಮ ಎನ್ನುವರು. ವಿದ್ಯುತ್ ಫ್ಯೂಸ್, ಒಲೆ, ದೀಪ, ಇಸ್ತ್ರಿ ಪೆಟ್ಟಿಗೆ ಇತ್ಯಾದಿಗಳಲ್ಲಿ ಈ ಪರಿಣಾಮವನ್ನು ಬಳಸಿಕೊಳ್ಳುತ್ತಾರೆ. ಇಲ್ಲಿ ಉಷ್ಣ ಪ್ರವಹಿಸಲು ಬಳಸಿಕೊಳ್ಳುವ ಲೋಹದ ತಂತಿಯನ್ನು ತಾಪಕ ತಂತಿ ಎನ್ನುವರು.

ವಿದ್ಯುತ್ ಒಲೆ, ಇಸ್ತ್ರಿ ಪೆಟ್ಟಿಗೆ, ಹೀಟರ್ ಇತ್ಯಾದಿಗಳಲ್ಲಿ ಕಡಿಮೆ ವೋಲ್ಟೇಜ್ ನಲ್ಲಿ ಕಾರ್ಯ ನಿರ್ವಹಿಸುವ ನೈಕ್ರೋಮ್ ಅನ್ನು ಬಳಸುತ್ತಾರೆ

ವಿದ್ಯುತ್ ಪರಿವರ್ತಕ

ವಿದ್ಯುತ್ ಪ್ರವಾಹವನ್ನು ವಿಭವಾಂತರಗೊಳಿಸದೆ (ಅಂದರೆ ವಿದ್ಯುತ್ ಪ್ರವಾಹದಲ್ಲಿನ ಒತ್ತಡವನ್ನು ಬದಲಾಯಿಸದೇ) ಅದನ್ನು ನಿಯಂತ್ರಿಸುವುದನ್ನು ಪರಿವರ್ತಿತ ರೋಧ (ವೇರಿಯೇಬಲ್ ರೆಸಿಸ್ಟಾನ್ಸ್) ಎನ್ನುವರು. ರಿಯೋಸ್ಟ್ಯಾಟ್ ಎಂಬ ಉಪಕರಣವನ್ನು ಪರಿವರ್ತಿತ ರೋಧವಾಗಿ ಬಳಸಲಾಗುತ್ತದೆ.

ವಿದ್ಯುತ್ ಪ್ರವಾಹವನ್ನು ಕಡಿಮೆ ವಿಭವದಿಂದ ಹೆಚ್ಚು ವಿಭವಕ್ಕೆ ಅಥವಾ ಹೆಚ್ಚು ವಿಭವದಿಂದ ಕಡಿಮೆ ವಿಭವಕ್ಕೆ ಪರಿವರ್ತಿಸುವ ಸಾಧನವನ್ನು ವಿದ್ಯುತ್ ಪರಿವರ್ತಕ ಎನ್ನುವರು.

ವಿದ್ಯುತ್ ರೋಧ

ಎಲೆಕ್ಟ್ರಾನುಗಳ ಚಲನೆಗೆ ವಾಹಕ ಒಡ್ಡುವ ಅಡಚಣೆಯನ್ನು ವಿದ್ಯುತ್ ರೋಧ ಎನ್ನುವರು. ವಿದ್ಯುತ್ ರೋಧದ ಏಕಮಾನ ಓಮ್ (). ಈ ವಿದ್ಯುತ್ ರೋಧದ ಪ್ರಮಾಣವನ್ನು ಬದಲಾಯಿಸಲು ಬಳಸುವ ಸಾಧನ ರಿಯೋಸ್ಟ್ಯಾಟ್. ತಾಪ ಹೆಚ್ಚಾದಂತೆಲ್ಲಾ ವಿದ್ಯುತ್ ರೋಧವೂ ಹೆಚ್ಚಾಗುತ್ತದೆ. ವಿದ್ಯುತ್ ರೋಧ ಹೆಚ್ಚಾದಂತೆಲ್ಲಾ ವಸ್ತುಗಳಲ್ಲಿ ಹರಿಯುವ ವಿದ್ಯುತ್ತಿಗೆ ಪ್ರತಿರೋಧ ಹೆಚ್ಚಾಗುತ್ತದೆ.

ರಿಯೋಸ್ಟ್ಯಾಟ್

ಅತಿಯಾದ ವಿದ್ಯುತ್ ಪ್ರವಹಿಸಿದಾಗ ಕೆಲವೊಮ್ಮೆ ವಿದ್ಯುತ್ ಅವಘಡಗಳಾಗಬಹುದು. ಇಂತಹ ಅವಘಡಗಳು ಹ್ರಸ್ವ ಮಂಡಲ (ಶಾರ್ಟ್ ಸರ್ಕ್ಯೂಟ್) ಮತ್ತು ತೀವ್ರ ಹೊರೆ (ಓವರ್ ಲೋಡ್) ಇಂದ ಉಂಟಾಗುತ್ತವೆ. ಅಂತಹ ಅವಘಡಗಳಾಗದಿರಲು ವಿದ್ಯುತ್ ಫ್ಯೂಸ್ ಅನ್ನು ಬಳಸುತ್ತಾರೆ. ವಿದ್ಯತ್ ಫ್ಯೂಸ್ ಅನ್ನು ಸೀಸ (plumbem-pb) ಮತ್ತು ತವರ  (tin-sn) ದಿಂದ ಮಾಡಲಾಗಿರುತ್ತದೆ. ವಿದ್ಯುತ್ ಫ್ಯೂಸ್‍ನಲ್ಲಿ ಬಳಕೆಯಾಗುವ ತಂತಿಯ ವಿದ್ಯುತ್ ರೋಧ ಹೆಚ್ಚು ಮತ್ತು ದ್ರವನ ಬಿಂದು ಕಡಿಮೆ ಇರುತ್ತದೆ. 

ಇತ್ತೀಚಿಗೆ ವಿದ್ಯುತ್ ಫ್ಯೂಸ್‍ಗಳಿಗೆ ಬದಲಾಗಿ M.C.B (ಮಿನಿಯೇಚರ್ ಸಕ್ಯೂಟ್ ಬ್ರೇಕರ್) ಗಳನ್ನು ಬಳಸಲಾಗುತ್ತಿದೆ. ವಾಹಕವಾಗಿ ಬಳಕೆಯಾಗುವ ವಸ್ತುವಿನ ದಪ್ಪ, ಉದ್ದ ಮತ್ತು ಅದರ ಅಣುಗಳು ವಿದ್ಯುತ್ ರೋಧವನ್ನು ನಿರ್ಧರಿಸುತ್ತವೆ.

ಶುಷ್ಕಕೋಶ

ನಾವು ವಿದ್ಯುತ್ ಶಕ್ತಿಯನ್ನು ಹಲವು ಮೂಲಗಳಿಂದ ಪಡೆಯುತ್ತೇವೆ ಅವುಗಳಲ್ಲಿ ರಾಸಾಯನಿಕವಾಗಿ ವಿದ್ಯುಚ್ಛಕ್ತಿಯನ್ನು ಪಡೆಯುವ ವಿಧಾನವು ಸಹ ಒಂದು. ನಮಗೆ ಸಾಮಾನ್ಯವಾಗಿ ಕಾಣಸಿಗುವ ಶುಷ್ಕಕೋಶವು (ಬ್ಯಾಟರಿ) ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಇದರಲ್ಲಿ ಸತು (ಲೋಹ), ಗ್ರಾಫೈಟ್ (ಅಲೋಹ), ಹಿತ್ತಾಳೆ (ಮಿಶ್ರಲೋಹ) ಮತ್ತು ವಿದ್ಯುತ್ ವಿಭಾಜ್ಯವಾಗಿ ಅಮೋನಿಯಂ ಕ್ಲೋರೈಡ್ ಅನ್ನು ಬಳಸುತ್ತಾರೆ. ಶಾಶ್ವತ ಶುಷ್ಕಕೋಶಗಳನ್ನು ತಯಾರಿಸಲು ನಿಕ್ಕಲ್ ಮತ್ತು ಕ್ಯಾಡ್ಮಿಯಂ ಅನ್ನು ಬಳಸುತ್ತಾರೆ. ಶುಷ್ಕಕೋಶದಲ್ಲಿ ಎರಡು ಧ್ರುವಗಳಿವೆ ಅದರ ಒಂದು ತುದಿಯಲ್ಲಿ ಎಲೆಕ್ಟ್ರಾನ್ಸ್ (ಋಣ ವಿದ್ಯುದಾವೇಶಗಳು) ಇದ್ದು ಅದನ್ನು ಋಣಾಗ್ರ (ಕ್ಯಾಥೋಡ್) ಎನ್ನುವರು. ಇನ್ನೊಂದು ತುದಿಯಲ್ಲಿ ಪ್ರೋಟಾನ್ಸ್ (ಧನ ವಿದ್ಯುದಾವೇಶಗಳು) ಇದ್ದು ಅದನ್ನು ಧನಾಗ್ರ (ಆ್ಯನೋಡ್) ಎನ್ನುವರು.

ಈ ಶುಷ್ಕಕೋಶದ ಆವಿಷ್ಕಾರಕ ಅಲೆಗ್ಸಾಂಡ್ರೊ ವೋಲ್ಟ್, ಈತನು ಮೊದಲ ಬಾರಿಗೆ ತಯಾರಿಸಿದ ಕೋಶ ವೋಲ್ಟಾಯಿಕ್ ಸೆಲ್.

ವಿದ್ಯುತ್ ಬಲ್ಬ್ ನಲ್ಲಿ ಟಂಗ್ಸ್ಟನ್ ತಂತಿಯನ್ನು ಬಳಸುತ್ತಾರೆ ಕಾರಣ ಅದು ಅತಿ ಹೆಚ್ಚಿನ ದ್ರವನ ಬಿಂದುವನ್ನು ಹೊಂದಿದೆ. ದೀಪದ ಆಯಸ್ಸನ್ನು ಹೆಚ್ಚಿಸಲು ಸಾರಜನಕವನ್ನು ಅದರ ದಕ್ಷತೆಯನ್ನು ಹೆಚ್ಚಿಸಲು ಆರ್ಗಾನ್ ಅನಿಲ ಬಳಸುತ್ತಾರೆ.

ಗೃಹಬಳಕೆಗಾಗಿ ಪರ್ಯಾಯ ವಿದ್ಯುತ್ ಅನ್ನು ಮತ್ತು ಕೈಗಾರಿಕೆಗಳ ಬಳಕೆಗಾಗಿ ನೇರ ವಿದ್ಯುತ್ ಅನ್ನು ಬಳಸುತ್ತಾರೆ. ಪರ್ಯಾಯ ವಿದ್ಯುತ್ ಅನ್ನು ನೇರ ವಿದ್ಯುತ್ತನ್ನಾಗಿ ಬದಲಾಯಿಸುವ ಸಾಧನ ಡೈಯೋಡ್. ಇದರ ಆವಿಷ್ಕಾರಕ ಜಾನ್ ಆಂಬ್ರೋಸ್ ಫ್ಲೆಮಿಂಗ್. ನೇರ ವಿದ್ಯುತ್ತನ್ನು ಪರ್ಯಾಯ ವಿದ್ಯುತ್ತನ್ನಾಗಿ ಪರಿವರ್ತಿಸುವುದನ್ನು ಆಸಿಲೇಟರ್ ಎನ್ನುವರು.

ವಾಹಕಗಳು, ಅವಾಹಕಗಳು ಮತ್ತು ಅರೆವಾಹಕಗಳು .

ವಾಹಕಗಳು : ತಮ್ಮ ಮೂಲಕ ಎಲೆಕ್ಟ್ರಾನ್‍ಗಳನ್ನು ಹರಿಯಲು ಬಿಡುತ್ತವೆ.

ಉದಾ : ಕಬ್ಬಿಣ, ತಾಮ್ರ, ಚಿನ್ನ ಇತ್ಯಾದಿ

ಅವಾಹಕಗಳು : ತಮ್ಮ ಮೂಲಕ ಎಲೆಕ್ಟ್ರಾನ್‍ಗಳನ್ನು ಹರಿಯಲು ಬಿಡುವುದಿಲ್ಲ

ಉದಾ : ಕಟ್ಟಿಗೆ, ರಬ್ಬರ್, ಕಾಗದ, ಪ್ಲಾಸ್ಟಿಕ್ ಇತ್ಯಾದಿ

ಅರೆವಾಹಕಗಳು : ಪೂರ್ಣವಾಗಿ ವಾಹಕಗಳೂ ಅಲ್ಲದ ಅವಾಹಕಗಳೂ ಅಲ್ಲದ ಮಧ್ಯದ ಸ್ಥಿತಿಯವು

ಉದಾ : ಸಿಲಿಕಾನ್, ಜರ್ಮೇನಿಯಂ ಇತ್ಯಾದಿ

ಟ್ರಾನ್ಸಿಸ್ಟರ್ ಎಂಬುದು 3 ತುದಿಗಳುಳ್ಳ ಒಂದು ವಿಶೇಷ ಅರೆವಾಹಕವಾಗಿದೆ. ಇವುಗಳನ್ನು ಮೊಬೈಲ್, ಟಿವಿ ಮುಂತಾದ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಸುತ್ತಾರೆ.

ಕಾಮೆಂಟ್‌ಗಳು